Wednesday, May 1, 2024
Homeಕ್ರೀಡಾ ಸುದ್ದಿದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ತಂಡದಿಂದ ಶಮಿ ಔಟ್

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ತಂಡದಿಂದ ಶಮಿ ಔಟ್

ಮುಂಬೈ, ಡಿ.16 (ಪಿಟಿಐ) – ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಹೊರಗಿಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

ಶಮಿ ಅವರ ಫಿಟ್‍ನೆಸ್‍ಗೆ ಒಳಪಟ್ಟು ಅವರನ್ನು ಟೆಸ್ಟ್ ತಂಡಕ್ಕೆ ಆರಿಸಲಾಗಿತ್ತು. ಆದರೆ ಅವರನ್ನು ಸರಣಿಗಾಗಿ ಮಂಡಳಿಯ ವೈದ್ಯಕೀಯ ತಂಡವು ಆಡಲು ಅನುಮತಿ ನೀಡಲಿಲ್ಲ ಎಂದು ತಿಳಿಸಲಾಗಿದೆ. ಅದೇ ರೀತಿ ಪೇಸ್ ಬೌಲಿಂಗ್ ಆಲ್ ರೌಂಡರ್ ದೀಪಕ್ ಚಾಹರ್ ಅವರನ್ನೂ ಏಕದಿನ ತಂಡದಿಂದ ಹಿಂತೆಗೆದುಕೊಳ್ಳಲಾಗಿದೆ.

ಬಂಧಿತ ಎಬಿವಿಪಿ ಕಾರ್ಯಕರ್ತರನ್ನು ಕ್ಷಮಿಸಲು ಸಿಜೆಗೆ ಚೌಹಾಣ್ ಪತ್ರ

ಕೌಟುಂಬಿಕ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಮುಂಬರುವ ಏಕದಿನ ಸರಣಿಗೆ ಲಭ್ಯರಿರುವುದಿಲ್ಲ ಎಂದು ಚಾಹರ್ ಬಿಸಿಸಿಐಗೆ ತಿಳಿಸಿದ್ದಾರೆ. ಪುರುಷರ ಆಯ್ಕೆ ಸಮಿತಿಯು (ವೇಗ) ಆಕಾಶ್ ದೀಪ್ ಅವರನ್ನು ಅವರ ಬದಲಿಯಾಗಿ ಹೆಸರಿಸಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

RELATED ARTICLES

Latest News