Thursday, February 22, 2024
Homeರಾಷ್ಟ್ರೀಯಬಂಧಿತ ಎಬಿವಿಪಿ ಕಾರ್ಯಕರ್ತರನ್ನು ಕ್ಷಮಿಸಲು ಸಿಜೆಗೆ ಚೌಹಾಣ್ ಪತ್ರ

ಬಂಧಿತ ಎಬಿವಿಪಿ ಕಾರ್ಯಕರ್ತರನ್ನು ಕ್ಷಮಿಸಲು ಸಿಜೆಗೆ ಚೌಹಾಣ್ ಪತ್ರ

ಭೋಪಾಲ್, ಡಿ 16 (ಪಿಟಿಐ) ಗ್ವಾಲಿಯರ್‍ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನ್ಯಾಯಾೀಧಿಶರ ಕಾರನ್ನು ಕೊಂಡೊಯ್ದಿದ್ದಕ್ಕಾಗಿ ಬಂಧಿತರಾಗಿರುವ ಇಬ್ಬರು ಎಬಿವಿಪಿ ಕಾರ್ಯಕರ್ತರನ್ನು ಕ್ಷಮಿಸುವಂತೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ್ ಅವರಿಗೆ ಪತ್ರ ಬರೆದಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಗ್ವಾಲಿಯರ್ ಕಾರ್ಯದರ್ಶಿ ಹಿಮಾಂಶು ಶ್ರೋತ್ರಿಯಾ (22) ಮತ್ತು ಉಪ ಕಾರ್ಯದರ್ಶಿ ಸುಕೃತ್ ಶರ್ಮಾ (24) ಅವರನ್ನು ಸೋಮವಾರ ಎಂಪಿ ದಕೈತಿ ಔರ್ ವ್ಯಾಪರಣ್ ಪ್ರಭಾವಿ ಕ್ಷೇತ್ರ ಅನಿಯಮ, ಡಕಾಯಿತಿ ವಿರೋಧಿ ಕಾನೂನು ಅಡಿಯಲ್ಲಿ ಬಂಧಿಸಲಾಗಿದೆ.

“ನನ್ನನ್ನೂ ಮಂತ್ರಿ ಮಾಡಿ” ಎಂದು ಬೇಡಿಕೆಯಿಟ್ಟ ಆಡಳಿತ ಪಕ್ಷದ ಶಾಸಕರು

ನ್ಯಾಯಮೂರ್ತಿ ಮಳಿಮಠ್ ಅವರಿಗೆ ಬರೆದ ಪತ್ರದಲ್ಲಿ ಚೌಹಾಣ ಅವರು, ಇದು ಪವಿತ್ರ ಉದ್ದೇಶಕ್ಕಾಗಿ ಮಾಡಿದ ಮತ್ತು ಮಾನವೀಯ ನೆಲೆಯಲ್ಲಿ ಜೀವ ಉಳಿಸಲು ಮಾಡಿದ ವಿಭಿನ್ನ ರೀತಿಯ ಅಪರಾಧವಾಗಿರುವುದರಿಂದ ಕ್ಷಮಿಸಲು ಯೋಗ್ಯವಾಗಿದೆ. ಹಿಮಾಂಶು ಶ್ರೋತ್ರಿಯಾ (22) ಉದ್ದೇಶ ಮತ್ತು ಸುಕೃತ್ ಶರ್ಮಾ (24) ಅಪರಾಧ ಮಾಡಲಿಲ್ಲ, ಆದ್ದರಿಂದ ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಕ್ಷಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅವರಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಡಕಾಯಿತಿ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾೀಧಿಶ ಸಂಜಯ್ ಗೋಯಲ್ ಅವರು ಸಭ್ಯತೆಯಿಂದ ಸಹಾಯವನ್ನು ಕೇಳುತ್ತಾರೆಯೇ ಹೊರತು ಬಲವಂತದಿಂದಲ್ಲ ಎಂದು ಹೇಳಿದ್ದನ್ನು ಉಲ್ಲೇಖಿಸಿ ಅವರು ಈ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News