Monday, February 26, 2024
Homeರಾಷ್ಟ್ರೀಯಟ್ರಕ್‍ಗೆ ಕಾರು ಡಿಕ್ಕಿ, 6 ಮಂದಿ ದುರ್ಮರಣ

ಟ್ರಕ್‍ಗೆ ಕಾರು ಡಿಕ್ಕಿ, 6 ಮಂದಿ ದುರ್ಮರಣ

ನಾಗ್ಪುರ, ಡಿ 16 (ಪಿಟಿಐ) ಮಹಾರಾಷ್ಟ್ರದ ನಾಗ್ಪುರ ನಗರದ ಹೊರವಲಯದಲ್ಲಿ ಇಂದು ನಸುಕಿನ ವೇಳೆಯಲ್ಲಿ ಕಾರೊಂದು ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟೋಲ-ಕಲ್ಮೇಶ್ವರ ರಸ್ತೆಯ ಸೋನ್‍ಖಾಂಬ್ ಗ್ರಾಮದ ಬಳಿ ಮಧ್ಯರಾತ್ರಿ 12.15 ರಿಂದ 2 ಗಂಟೆಯ ನಡುವೆ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನನ್ನನ್ನೂ ಮಂತ್ರಿ ಮಾಡಿ” ಎಂದು ಬೇಡಿಕೆಯಿಟ್ಟ ಆಡಳಿತ ಪಕ್ಷದ ಶಾಸಕರು

ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಕಾರಿನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದಾಗ ಅವರ ವಾಹನ ಸೋಯಾಬೀನ್ ಸಾಗಿಸುತ್ತಿದ್ದ ಟ್ರಕ್‍ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಇತರ ಮೂವರನ್ನು ಚಿಕಿತ್ಸೆಗಾಗಿ ನಾಗ್ಪುರಕ್ಕೆ ಕರೆತರಲಾಯಿತು, ಮತ್ತು ಅವರಲ್ಲಿ ಇಬ್ಬರು ಅಲ್ಲಿ ನಿಧನರಾದರು, ಒಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಕಾರಿ ತಿಳಿಸಿದ್ದಾರೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News