ನವದೆಹಲಿ, ಜ.27- ಸಾಮಾಜಿಕ ಜಾಲತಾಣಗಳಲ್ಲಿ ತಮ ಹಾಗೂ ಕ್ರಿಕೆಟಿಗ ಮೊಹಮದ್ ಸಿರಾಜ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗುತ್ತಿದ್ದಂತೆ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಝನಾಯಿ ಭೋಸ್ಲೆ ಸ್ಪಷ್ಟತೆ ನೀಡಿದ್ದಾರೆ. ಈ ಫೋಟೋ ನೋಡಿದ ಬಹಳಷ್ಟು ಮಂದಿ ಸಿರಾಜ್ ಹಾಗೂ ಝನಾಯಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗುಮಾನಿ ವ್ಯಕ್ತಪಡಿಸಿದ್ದರು. ಅದಕ್ಕೆ ಈಗ ತೆರೆ ಬಿದ್ದಿದೆ.
ಝನಾಯ್ ಭೋಸ್ಲೆ ಅವರು ಇತ್ತೀಚೆಗೆ ತಮ 23ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಮಾರಂಭಕ್ಕೆ ಬಾಲಿವುಡ್ ಹಾಗೂ ಕ್ರಿಕೆಟ್ ರಂಗದ ಜಾಕಿ ಶ್ರಾಫ್, ಮೊಹಮದ್ ಸಿರಾಜ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವೇಳೆ ಝನಾಯ್, ಕ್ರಿಕೆಟಿಗ ಮೊಹಮದ್ ಸಿರಾಜ್ ರೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು ಅದು ಸಾಕಷ್ಟು ವೈರಲ್ ಆಗಿತ್ತು.
ಸಿರಾಜ್ ನನ್ನ ಅಣ್ಣನಿದ್ದಂತೆ: ಝನಾಯ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಫೋಟೋ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಝನಾಯ್ ಅವರು ತಮ ಇನ್ಸಾಟಾಗ್ರಾಮ್ ನಲ್ಲಿ ಮತ್ತೊಂದು ಫೋಟೋ ಹಂಚಿಕೊಂಡು, ಮೊಹಮದ್ ಸಿರಾಜ್ ಅವರು ನನ್ನ ಪ್ರೀತಿಯ ಅಣ್ಣನಿದ್ದಂತೆ ಎಂದು ಹೇಳುವ ಮೂಲಕ ತಮ ಹಾಗೂ ಸಿರಾಜ್ ನಡುವಿನ ಸಂಬಂಧ ಸ್ಪಷ್ಟಪಡಿಸಿದ್ದಾರೆ.
ನಾವಿಬ್ಬರೂ ಚಂದ್ರ, ನಕ್ಷತ್ರ ಇದ್ದಂತೆ: ಸಿರಾಜ್
ಝನಾಯ್ ಭೋಸ್ಲೆ ಹಂಚಿಕೊಂಡಿರುವ ಫೋಟೋಗೆ ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಮೊಹಮದ್ ಸಿರಾಜ್, `ಪ್ರಪಂಚದಲ್ಲಿ ನನ್ನ ತಂಗಿಯ ರೀತಿ ಮತ್ತೊಬ್ಬರಿಲ್ಲ. ನಾನು ಯಾವುದೇ ಕಾರ್ಯಕ್ರಮಕ್ಕೂ ಕೂಡ ಅವಳಿಲ್ಲದೆ ಹೋಗಲು ಇಷ್ಟಪಡುವುದಿಲ್ಲ. ನಾನು ಹಾಗೂ ನನ್ನ ಸಹೋದರಿ (ಝನಾಯ್) ಚಂದ್ರ ಮತ್ತು ನಕ್ಷತ್ರದಂತೆ ಇದ್ದೇವೆ’ ಎಂದು ಹಾರ್ಟ್ ಎಮೋಜಿ ಹಾಕುವ ಮೂಲಕ ತಿಳಿಸಿದ್ದಾರೆ.
ಬಹುಭಾಷಾ ಗಾಯಕಿ ಆಶಾ ಭೋಸ್ಲೆ ಅವರ ಮೊಮಗಳಾದ ಝನಾಯ್ ಭೋಸ್ಲೆ ಅವರು ಮ್ಯೂಸಿಕ್ ಆಲ್ಬಂಗಳಿಗೆ ಕೆಲಸ ಮಾಡುತ್ತಿದ್ದು , ಇತ್ತೀಚೆಗೆ ತಮ ನೂತನ ಸಂಗೀತ ಪ್ರಾಜೆಕ್ಟ್ ನ ಫ್ರೋಮೋ ಬಿಡುಗಡೆಗೊಳಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿ ನಂತರ ಮೊಹಮದ್ ಸಿರಾಜ್ ಇಂಗ್ಲೆಂಡ್ ಹಾಗೂ ಚಾಂಪಿಯನ್‌್ಸ ಟ್ರೋಫಿಯಲ್ಲಿ ಸ್ಥಾನ ಪಡೆಯುವಲ್ಲಿ ಎಡವಿದ್ದಾರೆ.