ಬೆಳಗಾವಿ,ಡಿ.9- ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿರುವ ಹಿನ್ನಲೆ ಹಾಗೂ ಚಳಿಗಾಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಬದುಕಿನ ಕುರಿತ ಮೋಹನದಾಸ್ ಟು ಮಹಾತ ನೂರು ಭಾವಚಿತ್ರಗಳ ಪ್ರದರ್ಶನವನ್ನು ಸುವರ್ಣ ವಿಧಾನಸೌಧದ ಆವರಣದಲ್ಲಿ ಆಯೋಜಿಸಲಾಗಿದೆ.
ಪ್ರದರ್ಶನದಲ್ಲಿ ರಾಷ್ಟ್ರಪಿತ ಮಹಾತ ಗಾಂಧೀಜಿ ಅವರ ಬಾಲ್ಯ ಜೀವನ, ಸ್ವಾತಂತ್ರ್ಯ ಹೋರಾಟ ಸೇರಿದಂತೆ ಅವರ 79 ವರ್ಷ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವ ಹಾಗೂ ಜೀವನ ವೃತ್ತಾಂತವನ್ನು ಸಾದರಪಡಿಸುವ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಇಷ್ಟೆ ಅಲ್ಲದೆ 1924ರಲ್ಲಿ ಜರುಗಿದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ವಿಶೇಷ ಭಾವಚಿತ್ರಗಳ ಜೊತೆಗೆ ಮಕ್ಕಳೊಂದಿಗೆ ಮಹಾತ ಇರುವ 50 ಭಾವಚಿತ್ರಗಳನ್ನೂ ಸಹ ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳಾದ ಮೊಹಮದ್ ರೋಷನ್, ಜಿಲ್ಲಾ ಪಂಚಾಯತ್‌ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರ ನಿರ್ದೇಶನ ಹಾಗೂ ಆಸಕ್ತಿಯ ಮೇರೆಗೆ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ವಿಜಯಪುರದ ನೇತಾಜಿ ಗಾಂಧಿ, ಮಹಾದೇವ ಬಡಿಗೇರ, ನಗರದ ಬಾಳೂ ಗಸ್ತಿ ಅವರು ಈ ಭಾವಚಿತ್ರಗಳ ಪ್ರದರ್ಶನದ ಕಾರ್ಯವನ್ನು ನಿರ್ವಹಿಸಿದ್ದಾರೆ.ಶಶಿಕಾಂತ್ ಬಿ. ಶೇಗುಣಸಿ, ಕಾರ್ಯಪಾಲಕ ಅಭಿಯಂತರು ಕೆ. ಆರ್.ಐ.ಡಿ.ಎಲ್ ಬೆಳಗಾವಿ, ಚೇತನ್ ಧರಿಗೌಡ, ಸಹಾಯಕ ಅಭಿಯಂತರು ಬೆಳಗಾವಿ, ರಾಮಣ್ಣ ಕೆ. ಸಹಾಯಕ ಕಾರ್ಯ ಪಾಲಕ ಅಭಿಯಂತರು ಕಿತ್ತೂರ ಅಧಿಕಾರಿಗಳು ಸಹಕಾರ ನೀಡಿದ್ದಾರೆ.