ವಯನಾಡ್,ಆ. 3 (ಪಿಟಿಐ) – ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲ್ ಅವರು ಭೂಕುಸಿತ ಸಂಭವಿಸಿದ ವಯನಾಡಿನಲ್ಲಿ ಸೇನೆ ಕರ್ತವ್ಯ ಸಲ್ಲಿಸಿ ಗಮನ ಸೆಳೆದಿದ್ದಾರೆ.ಮೋಹನ್ ಲಾಲ್ ಅವರು ಇಂದು ತಮ ಸೇನಾ ಸಮವಸ್ತ್ರವನ್ನು ಧರಿಸಿ ಭೂಕುಸಿತ ಪೀಡಿತ ವಯನಾಡ್ ತಲುಪಿದ್ದಾರೆ.
ಮೆಪ್ಪಾಡಿಯ ಸೇನಾ ಶಿಬಿರಕ್ಕೆ ಆಗಮಿಸಿದ ನಟ, ಅಧಿಕಾರಿಗಳೊಂದಿಗೆ ಕೆಲಹೊತ್ತು ಚರ್ಚೆ ನಡೆಸಿ, ಇತರರೊಂದಿಗೆ ಭೂಕುಸಿತ ಪೀಡಿತ ಪ್ರದೇಶಕ್ಕೆ ತೆರಳಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡರು.
ನಾವೀಗ ಸಂತ್ರಸ್ತ ಪ್ರದೇಶಗಳಿಗೆ ಹೋಗುತ್ತಿದ್ದೇವೆ ಎಂದು ಮೋಹನ್ ಲಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿ ಸೇನಾ ವಾಹನದಲ್ಲಿ ತೆರಳಿದರು. ನಟನ ಈ ಸಾಮಾಜಿಕ ಕಾರ್ಯಕ್ಕೆ ದೇಶದ್ಯಾಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಲಯಾಳಂ ಸೇರಿದಂತೆ ಭಾರತದ ಬಹುತೇಕ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಮೋಹನ್‌ಲಾಲ್ ಅವರಿಗೆ ಕಳೆದ 2009 ರಲ್ಲಿ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹ್ದುೆಯನ್ನು ನೀಡಲಾಗಿತ್ತು.