Friday, August 29, 2025
Homeರಾಜ್ಯಎಸ್‌‍ಐಟಿ ತನಿಖಾ ಪ್ರಗತಿ ಮಾಹಿತಿ ಪಡೆದ ಮೋಹಾಂತಿ

ಎಸ್‌‍ಐಟಿ ತನಿಖಾ ಪ್ರಗತಿ ಮಾಹಿತಿ ಪಡೆದ ಮೋಹಾಂತಿ

Mohanty informed about SIT investigation progress

ಬೆಳ್ತಂಗಡಿ,ಆ.29- ಮಹೇಶ್‌ ಶೆಟ್ಟಿ ತಿಮರೋಡಿ ವಿಚಾರಣೆಗೆ ಹಾಜರಾಗಿರುವ ವೇಳೆಯಲ್ಲೇ ಎಸ್‌‍ಐಟಿ ಮುಖ್ಯಸ್ಥರಾದ ಡಿಜಿಪಿ ಪ್ರಣವ್‌ ಮೊಹಂತಿ ಅವರು ಬೆಳ್ತಂಗಡಿಯ ಎಸ್‌‍ಐಟಿ ಕಚೇರಿಗೆ ಆಗಮಿಸಿರುವುದು ಬಹಳ ಕುತೂಹಲ ಕೆರಳಿಸಿದೆ.

ಪ್ರಣವ್‌ ಮೊಹಂತಿಯವರು ಇಂದು ಬೆಳಿಗ್ಗೆ ಎಸ್‌‍ಐಟಿ ಕಚೇರಿಯಲ್ಲಿ ತನಿಖಾ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.ಕಳೆದ ಮೂರು ದಿನಗಳಿಂದ ಸುಜಾತಭಟ್‌ ಅವರನ್ನು ಎಸ್‌‍ಐಟಿ ವಿಚಾರಣೆ ಮಾಡುತ್ತಿದ್ದು, ನಾಲ್ಕನೇ ದಿನವಾದ ಇಂದೂ ಸಹ ಸುಜಾತ ಭಟ್‌ ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಖುದ್ದು ಮೊಹಂತಿಯವರು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಇದುವರೆಗೂ ನಡೆಸಿದ ಸುಜಾತ ಭಟ್‌ ಅವರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿಗಳು, ತಿಮರೋಡಿ ಮನೆ ಮೇಲೆ ಇತ್ತೀಚೆಗೆ ದಾಳಿ ಮಾಡಿದ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿರುವ ದಾಖಲೆಗಳ ಬಗ್ಗೆಯೂ ಮೊಹಂತಿ ಅವರು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಬುರುಡೆ ಚಿನ್ನಯ್ಯ ವಿಚಾರಣೆ ವೇಳೆ ಎಸ್‌‍ಐಟಿ ಮುಂದೆ ಹೇಳಿರುವ ಮಾಹಿತಿಗಳ ಬಗ್ಗೆಯೂ ವಿವರಗಳನ್ನು ಮೊಹಂತಿಯವರು ಪರಿಶೀಲಿಸಿದ್ದಾರೆ.ಒಟ್ಟಾರೆ ಇಂದು ಡಿಜಿಪಿ ಪ್ರಣವ್‌ ಮೊಹಂತಿ ಅವರು ಎಸ್‌‍ಐಟಿ ಕಚೇರಿಗೆ ಭೇಟಿ ನೀಡಿರುವುದು ಬಹಳ ಮಹತ್ವ ಪಡೆದುಕೊಂಡಿದೆ.

RELATED ARTICLES

Latest News