Monday, May 12, 2025
Homeರಾಜ್ಯಅವಧಿಗೂ ಮುನ್ನವೇ ಮುಂಗಾರು ಆಗಮನ, ಮೇ 27ರಂದೇ ಕೇರಳ ಕರಾವಳಿ ಪ್ರವೇಶ

ಅವಧಿಗೂ ಮುನ್ನವೇ ಮುಂಗಾರು ಆಗಮನ, ಮೇ 27ರಂದೇ ಕೇರಳ ಕರಾವಳಿ ಪ್ರವೇಶ

Monsoon in Kerala by May 27: IMD

ನವದೆಹಲಿ, ಮೇ 11- ಪ್ರಸಕ್ತ ವರ್ಷದ ನೈಋತ್ಯ ನೈರುತ್ಯ ಮುಂಗಾರು ಮಳೆ ನಿಗದಿತ ಸಮಯಕ್ಕಿಂತ ಐದು ದಿನಗಳು ಮುಂಚಿತವಾಗಿ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಜೂನ್ ಒಂದರಂದು ನೈರುತ್ಯ ಮುಂಗಾರು ಕೇರಳವನ್ನು ಪ್ರವೇಶಿಸುವುದು ವಾಡಿಕೆ. ಆದರೆ, ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಬಾರಿ 5 ದಿನಗಳು ಮುಂಚಿತವಾಗಿಯೇ ಅಂದರೆ ಮೇ 27ರಂದೇ ನೈರುತ್ಯ ಮುಂಗಾರು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಂತರ ಒಂದೆರಡು ದಿನಗಳಲ್ಲಿ ಕರ್ನಾಟಕದ ಪಶ್ಚಿಮ ಕಾರವಳಿಯನ್ನು ಮುಂಗಾರು ಪ್ರವೇಶಿಸುತ್ತದೆ. ನಿರೀಕ್ಷೆಯಂತೆ, ಕೇರಳಕ್ಕೆ ಮುಂಗಾರು ಮೇ 27ಕ್ಕೆ ಆಗಮಿಸಿದರೆ, 16 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತದ ಮುಖ್ಯ ಭೂ ಭಾಗಗಳಲ್ಲಿ ನೈರುತ್ಯ ಮುಂಗಾರು ಬಹು ಬೇಗನೆ ಆರಂಭವಾದಂತಾಗಲಿದೆ. ಇದಕ್ಕೂ ಮುನ್ನ 2009ರಲ್ಲಿ ಮೇ 23ರಂದು ಕೇರಳಕ್ಕೆ ನೈರುತ್ಯ ಮುಂಗಾರು ಆಗಮಿಸಿತ್ತು.

ಕೇರಳವನ್ನು ಪ್ರವೇಶಿದ ನಂತರ ಭಾರತದ ಮುಖ್ಯ ಭೂ ಭಾಗಗಳಿಗೆ ಮಳೆ ಆಗಮಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಆಗಮಿಸುವ ಮುಂಗಾರು ಮಳೆ ಜೂನ್ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಸೆಪ್ಟೆಂಬರ್ 17ರ ಸುಮಾರಿಗೆ ವಾಯುವ್ಯ ಭಾರತದಿಂದ ಮರಳಲು ಆರಂಭಿಸಿ, ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಹಿಂದಿರುಗಲಿದೆ.

ಕಳೆದ ವರ್ಷ ಮೇ 30ರಂದು, 2023ರಲ್ಲಿ ಜೂನ್ 8, 2022 ರಲ್ಲಿ ಮೇ 29, 2021 ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8. ಮತ್ತು 2018ರಲ್ಲಿ ಮೇ 29ರಂದು ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿತ್ತು.

ಹೆಚ್ಚುತ್ತಿರುವ ಶಾಖದ ಒತ್ತಡಕ್ಕೆ ದಕ್ಷನ್ ಪ್ರದೇಶ ಒಳಗಾಗಿರುವ ಹಿನ್ನೆಲೆಯಲ್ಲಿ ಈ ಮುನ್ಸೂಚನೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದರಿಂದ ಕೃಷಿ ಮತ್ತು ಆರ್ಥಿಕತೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ವಿಶೇಷವಾಗಿ ಜಾಗತಿಕ ಆರ್ಥಿಕ ಒತ್ತಡಗಳ ನಡುವೆ ಹಣದುಬ್ಬರದ ಕಾಳಜಿಯನ್ನು ನಿರ್ವಹಿಸಲು ಎಲ್ಲಾ ಪರಿಸ್ಥಿತಿಗಳು ಆರಂಭಿಕ ಮಾನ್ಸೂನ್ ಅನುಕೂಲಕರವಾಗಿವೆ. ವಾಯುವ್ಯ ಭಾರತದಲ್ಲಿ ರಾತ್ರಿಯ ತಾಪಮಾನ ಹೆಚ್ಚಳವೂ ಒಂದು ಸೂಚನೆಯಾಗಿದ್ದು, ನಮ್ಮ ಮಾದರಿಗಳು ಬೇಗನೆ: ಮಾನ್ಸೂನ್ ಆರಂಭದ ಲಕ್ಷಣ ತೋರಿಸುತ್ತಿವೆ ಎಂದು ಐಎಂಡಿ ಮಹಾನಿರ್ದೇಶಕ ಎಂ. ಮೊಹಾಪಾತ್ರ ಹೇಳಿದ್ದಾರೆ.

ಮಳೆಗಾಲ ಆರಂಭದಕ್ಕೂ, ಈ ವರ್ಷ ದೇಶದಲ್ಲಾಗುವ ಒಟ್ಟು ಮಳೆಯ ಪ್ರಮಾಣಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಅದಲ್ಲದೆ, ಕೇರಳಕ್ಕೆ ಮುಂಗಾರು ವಾಡಿಕೆಗಿಂದ ಬೇಗ ಅಥವಾ ತಡವಾಗಿ ಆಗಮಿಸುವುದರಿಂದ ದೇಶದ ಇತರ ಭಾಗಗಳಲ್ಲೂ ಕೂಡ ನಿಗದಿತ ಸಮಯದಲ್ಲಿ ಅವರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ವೈಶಿಷ್ಟ್ಯಗಳ ಮೇಲೆ ಅವಲಂಬಿತವಾಗಿರುತ್ತದೆ.

ಉಪಗ್ರಹ ಚಿತ್ರಗಳು ಈಗಾಗಲೇ ಅಂಡಮಾನ್ ಸಮುದ್ರ ಮತ್ತು ಕೇರಳ ಪ್ರದೇಶದ ನುತ್ತಲೂ ದಟ್ಟವಾದ ಮೋಡ ಕವಿದಿರುವುದನ್ನು ಸೂಚಿಸಿವೆ. ಈ ಪ್ರದೇಶದ ಮೇಲಿನ ಮೋಡವು ಮೇ 15ರ ಸುಮಾರಿಗೆ ಅಂಡಮಾನ್ ಸಮುದ್ರ, ಬಂಗಾಳಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಆರಂಭ ಸಂಭವಿಸಬಹುದು ಎಂದು ಸೂಚಿಸುತ್ತಿದೆ ಎಂದು ಮೊಹಾಪಾತ್ರ ಹೇಳಿದರು.

ಭಾರತದಲ್ಲಿ ಜೂನ್‌ನಿಂದ ಸೆಪ್ಟೆಂಬ‌ರ್ವರೆಗಿ ಮುಂಗಾರು ಋತುವಿನಲ್ಲಿ ಎಲ್ ನಿನೋ (ಕಡಿಮೆ ಮಳೆ ತರುವ ಹಂತ) ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆ ವಿರಳ, ಜೂನ್ ನಿಂದ ಸೆಪ್ಟೆಂಬ‌ರ್ ವರೆಗಿನ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಈ ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ ದೀರ್ಘಾವಧಿಯ ಸರಾಸರಿ ಮಳೆ 87 ಸೆಂ.ಮೀ. ಹಾಗೂ ಈ ಬಾರಿ ಸರಾಸರಿ ಶೇ. 105ರಷ್ಟು ಮಳೆ ಬೀಳಲಿದೆ ಎಂದು ಭೂ. ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ಹೇಳಿದ್ದಾರೆ.

ಐಎಂಡಿ ಪ್ರಕಾರ, 50 ವರ್ಷಗಳ ಸರಾಸರಿ 87 ಸೆಂ.ಮೀ.ಗಳಲ್ಲಿ ಶೇ.96ರಿಂದ ಶೇ.104ರ ವರೆಗಿನ ಮಳೆಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ದೀರ್ಘಾವಧಿಯ ಸರಾಸರಿಯ ಶೇ.90ಕ್ಕಿಂತ ಕಡಿಮೆ ಮಳೆಯನ್ನು ಕೊರತೆ ಎಂದು ಕರೆಯಲಾಗುತ್ತದೆ ಶೇ.90ರಿಂದ ಶೇ.95ರ ನಡುವೆ ಸಾಮಾನ್ಯಕ್ಕಿಂತ ಕಡಿಮೆ ಶೇ.105ರಿಂದ ಶೇ 110ರ ನಡುವೆ ಸಾಮಾನ್ಯಕ್ಕಿಂತ ಹೆಚ್ಚು ಮತ್ತು ಶೇ.110ಕ್ಕಿಂತ ಹೆಚ್ಚು ಮಳೆಯನ್ನು ಅಧಿಕ ಮಳೆ ಎಂದು ಹೇಳಲಾಗುತ್ತದೆ.

ಐಎಂಡಿಯ ವಿಸ್ತ್ರತ ವ್ಯಾಪ್ತಿಯ ಮುನ್ಸೂಚನೆಯು ಮೇ 22-29 ಮತ್ತು ಮುಂದಿನ ವಾರದ ನಡುವೆ ಕೇರಳ ಮತ್ತು ನೈಋತ್ಯ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ತೋರಿಸಿದೆ.

ಮಾನ್ಸೂನ್ ಆರಂಭದ ಮುನ್ಸೂಚನೆಯು ಆರು ಪ್ರಮುಖ ಮುನ್ಸೂಚಕಗಳನ್ನು ಅವಲಂಬಿಸಿದೆ ವಾಯುವ್ಯ ಭಾರತದಲ್ಲಿ ಹೆಚ್ಚಿನ ಕನಿಷ್ಠ ತಾಪಮಾನ, ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮಾನ್ಸೂನ್ ಪೂರ್ವ ಮಳೆಯ ಗರಿಷ್ಠ ಉಪೋಷ್ಣವಲಯದ ವಾಯುವ್ಯ ಪೆಸಿಫಿಕ್ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದ ಒತ್ತಡ, ಹೊರಹೋಗುವ ದೀರ್ಘ ತರಂಗ ವಿಕಿರಣ, ದಕ್ಷಿಣ ಚೀನಾ ಸಮುದ್ರದ ಮೇಲೆ ಮತ್ತು ಈಶಾನ್ಯ ಹಿಂದೂ ಮಹಾಸಾಗರ ಮತ್ತು ಇಂಡೋನೇಷ್ಯಾ ಪ್ರದೇಶದ ಮೇಲೆ ಗಾಳಿಯ ಮಾದರಿಗಳು.

ಕಳೆದ 20 ವರ್ಷಗಳಲ್ಲಿ (2005-2024) ತನ್ನ ಕಾರ್ಯಾಚರಣೆಯ ಮುನ್ಸೂಚನೆಗಳು 2015 ಹೊರತುಪಡಿಸಿ ಉಳಿದ ವರ್ಷಗಳಲ್ಲಿ ಸರಿಯಾಗಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇತ್ತೀಚಿನ ವರ್ಷಗಳ ಭವಿಷ್ಯವಾಣಿ ಹೆಚ್ಚು ನಿಖರವಾಗಿವೆ. 2023 ರಲ್ಲಿ ಜೂನ್ 4ರಂದು ಸೂಚನೆ ಇತ್ತು ಆದರೆ ಮಾನ್ಸೂನ್ ಜೂನ್ 8ರಂದು ಪ್ರಾರಂಭವಾಯಿತು. 2024 ರಲ್ಲಿ ಮುನ್ಸೂಚನೆ ಮೇ 31 ಕ್ಕೆ ಇತ್ತು ಆದರೆ ಮಾನ್ಸೂನ್ ಮೇ 30ರಂದು ಆಗಮಿಸಿತ್ತು.

RELATED ARTICLES

Latest News