Monday, March 31, 2025
Homeರಾಜ್ಯಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಆದರೆ ಹೋಟಲ್ ಬಂದ್ ಇಲ್ಲ

ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಆದರೆ ಹೋಟಲ್ ಬಂದ್ ಇಲ್ಲ

Moral support for Karnataka bandh but no hotel bandh

ಬೆಂಗಳೂರು, ಮಾ.21-ಹೋಟೆಲ್ ಉದ್ಯಮಕ್ಕೆ ಬಂದ್ ನಡೆಯುವ ದಿನದಂದು ರಕ್ಷಣೆಯನ್ನು ನೀಡಬೇಕೆಂದು ಸರ್ಕಾರವನ್ನು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷರು ಬಿ.ಚಂದ್ರಶೇಖರ ಹೆಬ್ಬಾರ್ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘವು ಎಂದಿನಿಂದಲೂ ಕನ್ನಡದ ಪರವಾದ ಕಾರ್ಯಕ್ರಮಗಳನ್ನು ಮತ್ತು ಹೋರಾಟಗಳನ್ನು ಸದಾ ಬೆಂಬಲಿಸುತ್ತದೆ. ಆದರೆ ನಾಳಿನ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಆದರೆ ಹೋಟಲ್ ಬಂದ್ ಇಲ್ಲ ಎಂದು ತಿಳಿಸಿದ್ದಾರೆ.

ದೈನಂದಿನ ಸಾರ್ವಜನಿಕ ಚಟುವಟಿಕೆಯಲ್ಲಿ ಆಹಾರ ಪೂರೈಕೆ ಅತ್ಯವಶ್ಯಕವಾಗಿರುವುದರಿಂದ ಹಾಗೂ ಶೇ. 50 ರಿಂದ 60% ಕೂಲಿಕಾರ್ಮಿಕರು, ಕಾರ್ಪೋರೇಟ್ ಮತ್ತು ಉದ್ಯಮದವರು, ಪ್ರವಾಸಿಗರು ಹೋಟೆಲ್ ಉದ್ಯಮಗಳನ್ನೆ ನಂಬಿಕೊಂಡಿರುವುದರಿಂದ ಕರ್ನಾಟಕ ರಾಜ್ಯ ಹೋಟೆಲ್ ಸಂಘವು ಎಲ್ಲಾ ಜಿಲ್ಲಾ ಸಂಘಗಳ ಜೊತೆ ಎರಡು ಮೂರು ಸುತ್ತಿನ ಚರ್ಚೆಗಳನ್ನು ನಡೆಸಿದೆ.

ಎಲ್ಲರ ಅಭಿಪ್ರಾಯದಂತೆ ಸಾರ್ವಜನಿಕ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾ.22ರಂದು ಕನ್ನಡ ಸಂಘ ಸಂಸ್ಥೆಗಳು ಕರೆದಿರುವ ಬಂದ್‌ಗೆ ನಮ್ಮ ಹೋಟೆಲ್ ಉದ್ಯಮದವರ ನೈತಿಕ ಬೆಂಬಲವನ್ನು ಘೋಷಿಸುತ್ತೇವೆ ಎಂದಿದ್ದಾರೆ.

ನಮ್ಮ ಅತಿಥ್ಯದ ಹೋಟಲ್ ಉದ್ಯಮವು ಅಗತ್ಯ ಸೇವೆಗಳಡಿಯಲ್ಲಿ ಬರುತ್ತದೆ. ವಿವಿಧ ರಾಜ್ಯಗಳಿಂದ ಹೊರಗಡೆಯಿಂದ ಆಗಮಿಸಿದ ಪ್ರವಾಸಿಗರಿಗೆ. ಆಸ್ಪತ್ರೆಯ ರೋಗಿಗಳಿಗೆ ಊಟೋಪಚಾರ, ವಸತಿ, ಕುಡಿಯುವ ನೀರಿನ ವ್ಯವಸ್ಥೆ ಅತ್ಯಂತ ಅಗತ್ಯವಾಗಿರುತ್ತದೆ.

ಸೇವೆ / ಸರ್ಮೀಸ್ ನೀಡುವವರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕೆಂದು ನಾವು ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಮ್ಮ ಹೋಟೆಲ್ ಉದ್ಯಮಕ್ಕೆ ಬಂದ್ ನಡೆಯುವ ದಿನದಂದು ರಕ್ಷಣೆಯನ್ನು ನೀಡಬೇಕೆಂದು ಗೃಹ ಸಚಿವರನ್ನು ಸಂಘದ ಅಧ್ಯಕ್ಷರಾದ ಜಿ.ಕೆ ಶೆಟ್ಟೆ ಒತ್ತಾಯಿಸಿದ್ದಾರೆ.

RELATED ARTICLES

Latest News