ಬೆಂಗಳೂರು,ಏ.22- ಕರ್ನಾಟಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಜಾತಿಗಣತಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಜಾತಿಗಣತಿಯ ಮತ್ತಷ್ಟು ಮಾಹಿತಿ ಇದೀಗ ಬಹಿರಂಗವಾಗಿದೆ.
2015ರ ಸಮೀಕ್ಷೆಯಲ್ಲಿ ಈಗಾಗಲೇ ಜನಸಂಖ್ಯೆಗಳ ಲೆಕ್ಕಾಚಾರ ಬಯಲಾಗಿದೆ. ಇದೀಗ ಯಾವ್ಯಾವ ಸಮುದಾಯ ಎಷ್ಟೆಷ್ಟು ಹೆಚ್ಚಾಗಿದೆ ಎಂಬ ಸಂಗತಿಯೂ ಬಯಲಾಗಿದೆ. ಅದರಲ್ಲಿಯೂ, 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.90ರಷ್ಟು ಏರಿಕೆಯಾಗಿರುವ ಅಂಶ ಸೋರಿಕೆಯಾಗಿದೆ.
2015 ರ ಸಮೀಕ್ಷೆಯಲ್ಲಿ ಈಗಾಗಲೇ ಜನಸಂಖ್ಯೆಗಳ ಲೆಕ್ಕಾ ಚಾರ ಬಯಲಾಗಿದ್ದು, ಯಾವ್ಯಾವ ಸಮುದಾಯ ಎಷ್ಟೆಷ್ಟು ಹೆಚ್ಚಾಗಿದೆ ಎಂಬ ಸಂಗತಿ ಬಯಲಾಗಿದೆ. ಅದರಲ್ಲಿಯೂ, 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.90ರಷ್ಟು ಏರಿಕೆಯಾಗಿರುವ ಅಂಶ ಸೋರಿಕೆಯಾಗಿದೆ. ಅಂತೆಯೇ ಪರಿಶಿಷ್ಛ ಜಾತಿ ಸಮುದಾಯದ ಜನಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ.
1984ರಲ್ಲಿ ವೆಂಕಟಸ್ವಾಮಿ ಆಯೋಗ ನಡೆಸಿದ್ದ ಸಮೀಕ್ಷೆ ಪ್ರಕಾರ 61 ಲಕ್ಷ ಜನರಿದ್ದ ವೀರಶೈವ ಲಿಂಗಾಯತರು ನಂ.1 ಸ್ಥಾನದಲ್ಲಿದ್ದರು. ಆದರೆ, 2015ರ ಕಾಂತರಾಜು ಆಯೋಗದ ಸಮೀಕ್ಷೆ ಪ್ರಕಾರ 66 ಲಕ್ಷ ಜನಸಂಖ್ಯೆ ಇರುವ ವೀರಶೈವ ಲಿಂಗಾಯತರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರ ಜನಸಂಖ್ಯೆ ವೃದ್ಧಿ ಕೇವಲ 8.50ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಹಾಗೆಯೇ 57 ಲಕ್ಷವಿದ್ದ ಎಸ್‌ಸಿ ಸಮುದಾಯ 30 ವರ್ಷದಲ್ಲಿ 1 ಕೋಟಿಯಾಗಿದ್ದು ಬರೋಬ್ಬರಿ 90ರಷ್ಟು ಜನಸಂಖ್ಯೆ ವೃದ್ಧಿಯಾಗಿದೆ. ಇನ್ನೂ ಮುಸ್ಲಿಮರು ಕೂಡಾ 1984ರಲ್ಲಿ ಕರ್ನಾಟಕದಲ್ಲಿ ಕೇವಲ 39 ಲಕ್ಷ ಜನರಿದ್ದರು. ಆದರೆ, ಈಗ ಇವರ ಸಂಖ್ಯೆ ಕಾಂತರಾಜು ಆಯೋಗದ ವರದಿ ಪ್ರಕಾರ 76 ಲಕ್ಷವಾಗಿದೆ. ಅಂದರೆ ಬರೋಬ್ಬರಿ ಶೇ.94ರಷ್ಟು ಜನಸಂಖ್ಯೆ ಹೆಚ್ಚಾಗಿದೆ.
1984ರಲ್ಲಿ ಇಡೀ ರಾಜ್ಯದಲ್ಲಿ ಶೇಕಡಾ 17ರಷ್ಟು ಜನಸಂಖ್ಯೆ ಹೊಂದಿದ್ದ ಲಿಂಗಾಯತರು ಈಗ ಮೂರನೇ ಸ್ಥಾನಕ್ಕೆ ಕುಸಿದಿರುವುದಾಗಿ ಈಗ ಮಂಡನೆಯಾದ ವರದಿಯಲ್ಲಿ ತಿಳಿಸಲಾಗಿದೆ. ಲಿಂಗಾಯತರಿಗೆ ಮೂರನೇ ಸ್ಥಾ ನೀಡಿ ಮುಸ್ಲಿಮರಿಗೆ 2ನೇ ಸ್ಥಾನ, ಪರಿಶಿಷ್ಟ ಜಾತಿಗಳು ಅತಿದೊಡ್ಡ ವರ್ಗ ಎಂದು ವರದಿ ನೀಡಿದ್ದಾರೆ. ಆದರೆ ಈಗ ಉಳಿದ ಸಮುದಾಯಗಳು ನಿಧಾನಗತಿಯಲ್ಲಿ ಏರಿಕೆ ಕಂಡಿದ್ದರೂ, ಮುಸ್ಲಿಮರ ಜನಸಂಖ್ಯೆ ಏಕಾಏಕಿ 30 ವರ್ಷದಲ್ಲಿ ಶೇಕಡಾ 90ರಷ್ಟು ಬೆಳವಣಿಗೆ ಆಗಿದ್ಹೇಗೆ ಎಂಬುದೇ ಪ್ರಶ್ನೆಯಾಗಿದೆ.
ಸರ್ವೇಯಲ್ಲಿ ಲಿಂಗಾಯತರಿಗೆ ಮೂರನೇ ಸ್ಥಾನ ನೀಡಿ ಮುಸ್ಲಿಮರಿಗೆ 2ನೇ ಸ್ಥಾನ, ಪರಿಶಿಷ್ಟ ಜಾತಿಗಳು ಅತಿದೊಡ್ಡ ವರ್ಗ ಎಂದು ವರದಿ ನೀಡಿದ್ದಾರೆ. ಆದರೆ ಈಗ ಉಳಿದ ಸಮುದಾಯಗಳು ನಿಧಾನಗತಿಯಲ್ಲಿ ಏರಿಕೆ ಕಂಡಿದ್ದರೂ, ಮುಸ್ಲಿಮರ ಜನಸಂಖ್ಯೆ ಏಕಾಏಕಿ 30 ವರ್ಷದಲ್ಲಿ ಶೇಕಡಾ 94ರಷ್ಟು ಬೆಳವಣಿಗೆ ಆಗಿದ್ಹೇಗೆ ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ.
ವೆಂಕಟಸ್ವಾಮಿ ಆಯೋಗವು 1984ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿತು, ಇದು ರಾಜ್ಯದ 3.61 ಕೋಟಿ ಜನಸಂಖ್ಯೆಯ 91% ರಷ್ಟನ್ನು ಒಳಗೊಂಡಿದೆ. 2015ರ ಸಮೀಕ್ಷೆಯಲ್ಲಿ, ಪರಿಶಿಷ್ಟ ಜಾತಿಗಳು ಏಕೈಕ ಅತಿದೊಡ್ಡ ಸಮುದಾಯವಾಗಿದ್ದು, ನಂತರದ ಸ್ಥಾನದಲ್ಲಿ ಮುಸ್ಲಿಮರು ಇದ್ದಾರೆ. ವೀರಶೈವ-ಲಿಂಗಾಯತರು ಮೂರನೇ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳಲ್ಲಿ ಒಕ್ಕಲಿಗರು, ಕುರುಬರು ಮತ್ತು ಬ್ರಾಹಣರು ಇದ್ದಾರೆ. ಈ ಅಂಕಿ ಅಂಶಗಳೇ ಇದರ ಸಂಶೋಧನೆಗಳು ಪ್ರಬಲ ಸಮುದಾಯದ ನಾಯಕರನ್ನು ಬೆಚ್ಚಿಬೀಳಿಸಿವೆ.
ಕಾಂಗ್ರೆಸ್ ನಾಯಕರು ಏನೇ ಸಮರ್ಥಿಸಿಕೊಂಡರೂ, ಜಾತಿ ಗಣತಿಗೆ ಸ್ವಪಕ್ಷದಲ್ಲೇ ಅಪಸ್ವರ ಎದ್ದಿದೆ. ಕಾಂಗ್ರೆಸ್ ಎಂಎಲ್‌ಸಿ ನಾಗರಾಜ್ ಯಾದವ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು, ಗೊಲ್ಲ, ಕಾಡುಗೊಲ್ಲ, ಯಾದವ ಸಮುದಾಯದ ವಿಚಾರವಾಗಿ ಆಕ್ಷೇಪ ಎತ್ತಿದ್ದಾರೆ. ಕಾಡುಗೊಲ್ಲ ಸಮುದಾಯದ ಜನಸಂಖ್ಯೆ 3,20,853 ತೋರಿಸಲಾಗಿದೆ. ಆದರೆ, ಈ ಸಂಖ್ಯೆಗಿಂತ ಹೆಚ್ಚು ಜನರಿದ್ದಾರೆ. ಹೀಗಾಗಿ ಸರಿಯಾಗಿ ತಿದ್ದಪಡಿ ಮಾಡಬೇಕೆಂದು ಮನವಿ ಮಾಡಿದ್ದಾರೆ.