ಬೆಂಗಳೂರು,ಜು.5- ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡರೊಬ್ಬರ ವಿಚಾರಣೆಯ ವೇಳೆ ಪ್ರಮುಖ ರಾಜಕೀಯ ನಾಯಕರ 50ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳು ಪತ್ತೆಯಾಗಿವೆ. 2024ರ ನವೆಂಬರ್ 11ರಂದು ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮೀತ್‌ರಾಜ್ ಧರೆಗುಡ್ಡೆ ಅವರನ್ನು 6 ತಿಂಗಳ ಬಳಿಕ ಬಂಧಿಸಲಾಗಿದೆ.
ಆತನಿಂದ ಸಾಕ್ಷ್ಯಗಳನ್ನು ಕಲೆ ಹಾಕಲು ಆತನ ಮೊಬೈಲ್‌ನ್ನು ವಶಕ್ಕೆ ಪಡೆದು, ಡಿಲಿಟ್ ಆಗಿದ್ದ ದತ್ತಾಂಶಗಳನ್ನು ಮರು ಸ್ಥಾಪನೆಯ ವೇಳೆ ಬೆಚ್ಚಿಬೀಳಿಸುವಂತಹ ಅಶ್ಲೀಲ ವೀಡಿಯೋಗಳು ಪತ್ತೆಯಾಗಿವೆ.
ಇದನ್ನು ಪರಿಶೀಲಿಸಿದ ಮೂಡಬಿದರೆ ಪೊಲೀಸ್ ಇನ್ಸ್ ಪೆಕ್ಟರ್ ಮತ್ತೊಂದು ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿದ್ದು, ಮೊಬೈಲ್‌ನಲ್ಲಿ ಪತ್ತೆಯಾಗಿರುವ ವೀಡಿಯೋಗಳು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕಾರಕ ಎಂದು ಭಾವಿಸಿದ್ದಾರೆ.
ಈ ನಿಟ್ಟಿನಲ್ಲೂ ವಿಚಾರಣೆ ಮುಂದುವರೆದಿದೆ. ಅಶ್ಲೀಲ ವೀಡಿಯೋದ ಪಾತ್ರದಾರಿ ಪ್ರಮುಖ ರಾಜಕಾರಣಿಯ ಮಾಹಿತಿಯನ್ನು ರಹಸ್ಯವಾಗಿಯೇ ಇಡಲಾಗಿದೆ.
- ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ವಿಧಾನಪರಿಷತ್ನಲ್ಲಿ ಪಕ್ಷಬೇಧ ಮರೆತು ಆಗ್ರಹ
- ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡು 73 ಜನ ಸಾವು
- ಅಮರಾವತಿ ನಿರ್ಮಾಣ ಹೊಣೆ ಸಿಂಗಾಪುರದ ಹೆಗಲಿಗೆ
- ಮೃತ ಕೆಎಸ್ಆರ್ಟಿಸಿ ನೌಕರರ ಕುಟುಂಬಕ್ಕೆ ಅಪಘಾತೇತರ ಪರಿಹಾರ ಹೆಚ್ಚಳ
- ಬಸ್ಗಳ ಮೇಲೆ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಘೋಷವಾಕ್ಯ ಕಡ್ಡಾಯ