ನವದೆಹಲಿ,ಏ.3-ಅಮೆರಿಕದ ಪೋರ್ಟ್ಲ್ಯಾಂಡ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಎನ್ಆರ್ಐ ಮಹಿಳೆ ಮತ್ತು ಅವರ ಪುತ್ರಿ ಸಾವನ್ನಪ್ಪಿದ್ದಾರೆ. 32 ವರ್ಷಕ್ಕೆ ಕಾಲಿಟ್ಟ ಮಹಿಳೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಕುಟುಂಬವು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಕಮತಮ್ ಗೀತಾಂಜಲಿ ಅವರು ಕೃಷ್ಣಾ ಜಿಲ್ಲೆಯ ಕೊನಕಂಚಿಯವರು. ಅಮೆರಿಕದಲ್ಲಿ ನಡೆದ ಈ ಅಪಘಾತದಿಂದ ಆಕೆ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಗೀತಾಂಜಲಿ ದಕ್ಷಿಣ ಮೆರಿಡಿಯನ್ ರಸ್ತೆಯಲ್ಲಿ ದಕ್ಷಿಣಕ್ಕೆ ಚಾಲನೆ ಮಾಡುತ್ತಿದ್ದು, ಸ್ಟಾಪ್ ಚಿಹ್ನೆಯಲ್ಲಿ ನಿಲ್ಲಿಸಲು ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾನ್ಬಿಯ 18 ವರ್ಷದ ಬೆಂಜಮಿನ್ ಹೆರ್ನಾಂಡೆಜ-ಲೋಪೆಜ್ ಚಲಾಯಿಸುತ್ತಿದ್ದಾಗ ಹೆದ್ದಾರಿ 211 ರಲ್ಲಿ ಪಶ್ಚಿಮಕ್ಕೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ಆಕೆಯ -ಫೋರ್ಡ್ ಕಾರು ಡಿಕ್ಕಿ ಹೊಡೆದಿದೆ.
ಗೀತಾಂಜಲಿ ಅವರ ಪುತ್ರಿ ಹನಿಕಾ (5) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಬಂ„ಕರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗೀತಾಂಜಲಿಯನ್ನು ಹೆಲಿಕಾಪ್ಟರ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರ ಪತಿ ನರೇಶ್ ಮತ್ತು ಮಗ ಬ್ರಮನ್ ಕೂಡ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರಮನ್ ಕಾಲು ಮುರಿದಿದ್ದು, ಶಸಚಿಕಿತ್ಸೆಗೆ ಒಳಗಾಗಿದ್ದಾರೆ ಗೀತಾಂಜಲಿ ಮತ್ತು ಅವರ ಪತಿ ಸುಮಾರು 10 ವರ್ಷಗಳಿಂದ ಯುಎಸ್ನಲ್ಲಿ ನೆಲೆಸಿದ್ದಾರೆ. ಅವರಿಬ್ಬರು ಸಾಫ್ಟ್ ವೇರ್ ಇಂಜಿನಿಯರ್ಗಳಾಗಿದ್ದರು.