ಬಂದಾ,ಆ.24- ಮಕ್ಕಳಿಗೆ ವಿಷ ಉಣಿಸಿ ತಾಯಿ ಕೂಡ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಇಟ್ವಾ ದುಡೈಲಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಜ್ಯೋತಿ ಯಾದವ್(28) ಬುಲ್ಬುಲ್(1) ಮತ್ತು ಚಂದ್ರಮಾ(3)ಎಂದು ಗುರುತಿಸಲಾಗಿದೆ.
ಆಕೆಯ ಮತ್ತೊಬ್ಬ ಐದು ವರ್ಷದ ಮಗ ದೀಪಚಂದ್ರ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಜ್ಯೋತಿ ಪತಿ ಬಬ್ಬು ಯಾದವ್ ಟೆಂಪೋ ಚಾಲಕನಾಗಿದ್ದು ಇಟ್ವಾ ದುಡೈಲಾ ಗ್ರಾಮದಲ್ಲಿ ನೆಲೆಸಿದ್ದರು.
ನಿನೆನ ರಾತ್ರಿ ದಂಪತಿ ನಡುವೆ ಜಗಳವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪತಿ ಹೊರಗೆ ಹೋದಾಗ ಜ್ಯೋತಿ ಯಾದವ್ ತಾನೆತ್ತ ಮಕ್ಕಳಿಗೆ ವಿಷ ಉಣಿಸಿ ನಂತರ ತಾವು ಸೇವಿಸಿದ್ದಾರೆ. ವಿವಯ ತಿಳಿದು ನೆರೆಹೊರೆಯವರು ನಾಲ್ವರನ್ನು ಮಜ್ಗವಾನ್ ಆಸ್ಪತ್ರೆಗೆ ಕರೆದೊಯ್ಯದರು ಆದರೆ ಚಿಕಿತ್ಸೆ ವೇಲೆ ಮಗು ಬುಲ್ಬುಲ್ ಸಾವನ್ನಪ್ಪಿದೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜ್ಯೋತಿ ಮತ್ತು ಚಂದ್ರಮಾ ಅವರನ್ನು ಸತ್ನಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು,ಆದರೂ ಅವರು ಕೊನೆಯುಸಿರೆಳೆದಿದ್ದಾರೆ.ಪ್ರಕರಣ ದಾಖಲಿಸಿ ಆತಹತ್ಯೆಗೆ ನಿಖರವಾದ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- ಎಲ್ಪಿಜಿ ಟ್ಯಾಂಕ್ ಸ್ಫೋಟಗೊಂಡು 7 ಮಂದಿ ಸಜೀವ ದಹನ
- ಬೈಕ್ಗೆ ಕಾರು ಡಿಕ್ಕಿಯಾಗಿ ಸೇತುವೆಯಿಂದ ಬಿದ್ದು ಮಹಿಳೆ ಸಾವು
- ವಾಯು ರಕ್ಷಣಾ ಶಸ್ತ್ರಾಸ್ತ್ರ ಹಾರಾಟ ಪರೀಕ್ಷೆ ಯಶಸ್ವಿ
- ಮನೆಯಲ್ಲೇ ಎಸ್ಐಟಿಯಿಂದ ಸುಜಾತ ಭಟ್ ವಿಚಾರಣೆ
- ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ