Monday, September 1, 2025
Homeರಾಜ್ಯಹೆದ್ದಾರಿಯಲ್ಲಿ ಸಂಚರಿಸುವವರಿಗೆ ಟೋಲ್‌ ಶಾಕ್‌, ದರ ಏರಿಕೆಗೆ ವಾಹನ ಸವಾರರ ಆಕ್ರೋಶ

ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಟೋಲ್‌ ಶಾಕ್‌, ದರ ಏರಿಕೆಗೆ ವಾಹನ ಸವಾರರ ಆಕ್ರೋಶ

Motorists angry over toll hike

ಬೆಂಗಳೂರು,ಸೆ.1-ರಾಜ್ಯದಲ್ಲಿ ಬೆಲೆ ಏರಿಕೆ ಶಾಕ್‌ ದಿನದಿಂದ ದಿನಕ್ಕೆ ಜನ ಸಾಮಾನ್ಯರನ್ನು ಬಾಧಿಸುತ್ತಿದೆ. ಇಂದು ಮಧ್ಯ ರಾತ್ರಿಯಿಂದ ವಾಹನ ಸವಾರರಿಗೆ ಹೆದ್ದಾರಿ ಟೋಲ್‌ ಶಾಕ್‌ ಎದುರಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ಇಂದಿನಿಂದ ಸೆ. 1 ರಿಂದ ದರ ಏರಿಕೆ ಮಾಡಿ ಶಾಕ್‌ ನೀಡಿದೆ. ನೆಲಮಂಗಲ ದೇವಿಹಳ್ಳಿ ಟೋಲ್‌ನಲ್ಲಿ ಇಂದು ದರ ಏರಿಕೆಯಾದರಿಂದ ಬೆಳಿಗ್ಗೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ವಾಹನ ಸವಾರರಿಗೆ ಹೆಚ್ಚಿನ ಹೊರೆ ಬೀಳಲಿದೆ .ದೊಡ್ಡಕರೇನಹಳ್ಳಿ ಟೋಲ್‌ ಹಾಗೂ ಕಾರಬೈಲು ಟೋಲ್‌ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕ ಮುಖ ಸಂಚಾರಕ್ಕೆ 5 ರೂಪಾಯಿ, ದ್ವಿಮುಖ ಸಂಚಾರಕ್ಕೆ 10 ರೂಪಾಯಿ ದರ ಏರಿಕೆ ಮಾಡಲಾಗಿದೆ.

ಫಾಸ್‌‍ಟ್ಯಾಗ್‌‍ ಇರುವ ಕಾರು, ಜೀಪು, ವ್ಯಾನ್‌ ಹಾಗೂ ಹಗುರ ವಾಹನಗಳಿಗೆ ಏಕಮುಖ ಸಂಚಾರಕ್ಕೆ 55 ರೂ ಇತ್ತು ಮಧ್ಯರಾತ್ರಿಯಿಂದ ಇದರ ದರ 60 ರೂಗೆ ಏರಿಕೆ ಆಗುತ್ತದೆ. ದಿನದ ಸಂಚಾರವು 85 ರೂನಿಂದ 90 ರೂಗೆ ಏರಿಕೆ ಆಗುತ್ತಿದೆ. ಫಾಸ್‌‍ಟ್ಯಾಗ್‌‍ ಇಲ್ಲದ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಟೋಲ್‌ ದರ 110 ರೂನಿಂದ 120 ರೂಗೆ ಏರಿಕೆ ಆಗುತ್ತಿದೆ.
ಹಗುರ ವಾಣೕಜ್ಯ ವಾಹನ ಹಾಗೂ ಸರಕು ಸಾಗಣೆ ವಾಹನಗಳಾದರೆ ಏಕಮುಖ ಸಂಚಾರಕ್ಕೆ 100 ರೂ, ದಿನದ ಸಂಚಾರಕ್ಕೆ 155 ರೂಗೆ ಏರಿಸಲಾಗುತ್ತಿದೆ.

ಒಟ್ಟಾರೆ ರಾಜ್ಯದಲ್ಲಿ ಜನಸಾಮಾನ್ಯರು ಒಂದಲ್ಲ ಒಂದು ರೀತಿ ದರ ಏರಿಕೆಯಿಂದ ಪರಿತಪ್ಪಿಸುತ್ತಿದ್ದಾರೆ. ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ದರ ಏರಿಕೆಯಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವ ಸವಾರರಿಗೆ ಟೋಲ್‌ ಶಾಕ್‌ ಎದುರಾಗಿದೆ.

ನೆರೆಯ ತಮಿಳು ನಾಡಿನ ಹಲವು ಟೋಲ್‌ನಲ್ಲೂ ದರ ಏಕೆಯಾಗಿದೆ.ಖಾಸಗಿ ವಾಹನ ಸವಾರರು ತಲೆಕೆಡಸಿಕೊಳ್ಳದಿದ್ದರೂ ವಾಣಿಜ್ಯ ಸಾರಿಗೆ ವಾಹನ ಮಾಲೀಕರು ಹೆಚ್ಚಾಗಿ ಆಕ್ರೋಶ ಹೊರಹಾಕಿದ್ದಾರೆ. ದೇಶದ ಹಲವು ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರ ಪರಿಷ್ಕರಣೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News