Thursday, July 4, 2024
Homeರಾಷ್ಟ್ರೀಯರಾಮ ಮತ್ತು ಕೃಷ್ಣನ ಯಾತ್ರಾಸ್ಥಳವಾಗಲಿದೆ ಮಧ್ಯಪ್ರದೇಶ

ರಾಮ ಮತ್ತು ಕೃಷ್ಣನ ಯಾತ್ರಾಸ್ಥಳವಾಗಲಿದೆ ಮಧ್ಯಪ್ರದೇಶ

ಭೋಪಾಲ್‌‍,ಜೂ.22- ಮಧ್ಯ ಪ್ರದೇಶವನ್ನು ರಾಮ ಮತ್ತು ಕೃಷ್ಣನಿಗೆ ಸಂಬಂಧಿಸಿದ ಯಾತ್ರಾ ಸ್ಥಳವನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ರಾಮ ಮತ್ತು ಕಷ್ಣನಿಗೆ ಸಂಬಂಧಿಸಿದ ಸ್ಥಳಗಳನ್ನು ಯಾತ್ರಾ ಸ್ಥಳಗಳಾಗಿ ಅಭಿವದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

ರಾಜ್ಯ ರಾಜಧಾನಿ ಭೋಪಾಲ್‌ನ ಪ್ರವೇಶ ದ್ವಾರಗಳಲ್ಲಿ ಈ ದೇವತೆಗಳಿಗೆ ಸಮರ್ಪಿತವಾದ ಸ್ವಾಗತ ದ್ವಾರಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು. ನಿನ್ನೆ ನಡೆದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಸಿಎಂ ಯಾದವ್‌ ಈ ಕುರಿತು ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶ ಸರ್ಕಾರವು ರಾಜ್ಯದಲ್ಲಿ ರಾಮ ಮತ್ತು ಕಷ್ಣನಿಗೆ ಸಂಬಂಧಿಸಿದ ಸ್ಥಳಗಳನ್ನು ಗುರುತಿಸುತ್ತದೆ ಮತ್ತು ಅವುಗಳನ್ನು ಯಾತ್ರಾ ಸ್ಥಳಗಳಾಗಿ ಅಭಿವದ್ಧಿಪಡಿಸುತ್ತದೆ ಎಂದು ಯಾದವ್‌ ಹೇಳಿದರು. ಮತ್ತು 11 ನೇ ಶತಮಾನದ ಪರಮಾರ ರಾಜವಂಶದ ರಾಜ ರಾಜ ಭೋಜ್‌ ಮತ್ತು ದಂತಕಥೆಯಾದ ವಿಕ್ರಮಾದಿತ್ಯನಿಗೆ ಸಮರ್ಪಿತವಾದ ಪ್ರವೇಶ ದ್ವಾರಗಳನ್ನು ಸ್ಥಾಪಿಸಲು ಯೋಜನೆಗಳನ್ನು ರೂಪಿಸಲು ಸೂಚಿಸಿದರು.

ಭಾರತೀಯ ಸಾಹಿತ್ಯದಲ್ಲಿ ರಾಜನನ್ನು ಉಲ್ಲೇಖಿಸಲಾಗಿದೆ. ಮಧ್ಯಪ್ರದೇಶದ ಸಂಸ್ಕೃತಿ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳ ಬಗ್ಗೆ ಜನರು ತಿಳಿದುಕೊಳ್ಳಲು ರಾಜ್ಯದ ಗಡಿಗಳಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಲು ಯಾದವ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಅಧಿಕಾರಿ ಹೇಳಿದರು.

ಧಾರ್ಮಿಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರ್ಮಿಕ ಸ್ಥಳಗಳನ್ನು ಅಭಿವದ್ಧಿಪಡಿಸುವ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ಆಡಳಿತವನ್ನು ಕೇಳಿದರು. ರಾಜ್ಯದಲ್ಲಿ ಸಾಮಾನ್ಯ ಜನರಲ್ಲಿ ಭಾರತೀಯ ಸಂಸ್ಕೃತಿ ಮತ್ತು ತತ್ವಜ್ಞಾನವನ್ನು ಹರಡಲು ರಾಜ್ಯದಲ್ಲಿ ಮಾನಸ ಜಯಂತಿಯಂದು ಗೀತಾ ಮಹೋತ್ಸವವನ್ನು ಆಚರಿಸಲು ಕ್ರಿಯಾ ಯೋಜನೆ ಮಾಡಲು ಇಲಾಖೆಗೆ ತಿಳಿಸಲಾಯಿತು.

ರಾಮ ಮತ್ತು ಕಷ್ಣನಿಗೆ ಸಂಬಂಧಿಸಿದ ಸ್ಥಳಗಳನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಸಹಾಯದಿಂದ ಅಭಿವದ್ಧಿಪಡಿಸಬೇಕು ಎಂದು ಯಾದವ್‌ ಹೇಳಿದರು. ರಾಜ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸಿ ಸ್ಥಳಗಳ ಬ್ರ್ಯಾಂಡಿಂಗ್‌ನ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿವಿಧ ವಸ್ತು ಸಂಗ್ರಹಾಲಯಗಳ ಮೂಲಕ ಸ್ಥಳೀಯ ಉತ್ಪನ್ನಗಳು ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

RELATED ARTICLES

Latest News