Thursday, March 13, 2025
Homeರಾಷ್ಟ್ರೀಯ | Nationalತ್ರಿಭಾಷಾ ಸೂತ್ರಕ್ಕೆ ರಾಜ್ಯ ಸಭಾ ಸಂಸದೆ ಸುಧಾಮೂರ್ತಿ ಬೆಂಬಲ

ತ್ರಿಭಾಷಾ ಸೂತ್ರಕ್ಕೆ ರಾಜ್ಯ ಸಭಾ ಸಂಸದೆ ಸುಧಾಮೂರ್ತಿ ಬೆಂಬಲ

MP Sudha Murthy supports Three Language Policy under NEP

ಬೆಂಗಳೂರು,ಮಾ.13- ದೇಶದಲ್ಲಿ ತ್ರಿಭಾಷಾ ಸೂತ್ರ ಬೇಡ ಎನ್ನುವ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆದಿವೆ. ಈ ರೀತಿ ಇರುವಾಗಲೇ ರಾಜ್ಯ ಸಭಾ ಸಂಸದೆ ಸುಧಾಮೂರ್ತಿ ಅವರು ತ್ರಿಭಾಷಾ ಸೂತ್ರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಯಾರು ಬೇಕಾದರೂ ಬಹು ಭಾಷೆಗಳನ್ನು ಕಲಿಯಬಹುದು. ನನಗೆ 7ರಿಂದ 8 ಭಾಷೆಗಳು ಬರುತ್ತವೆ. ಹೀಗಾಗಿ ನಾನು ಕಲಿಯುವುದನ್ನು ಆನಂದಿಸುತ್ತೇನೆ. ಬಹುಭಾಷೆಗಳಿಂದ ವಿದ್ಯಾರ್ಥಿಗಳು ಸಹ ಸಾಕಷ್ಟು ಕಲಿಯುವುದಕ್ಕೆ ಅವಕಾಶಗಳು ಇವೆ ಎಂದಿದ್ದಾರೆ.

ನೂತನ ಶಿಕ್ಷಣ ನೀತಿಯ ಬಗ್ಗೆ ಭಾರತದಲ್ಲಿ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಸಂಸತ್ತಿನಲ್ಲೂ ಈ ವಿಚಾರದ ಬಗ್ಗೆ ಚರ್ಚೆಗಳು ನಡೆದಿದೆ. ನೂತನ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ಸೂತ್ರವನ್ನು ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳು ವಿರೋಧಿಸುತ್ತಿವೆ. ಹೊಸ ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷವು ರಾಜಕೀಯ ಲಾಭಕ್ಕಾಗಿ ಭಾಷೆ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

ಸುಧಾಮೂರ್ತಿ ಅವರೊಂದಿಗಿನ ಮಾತನಾಡಿದ್ದ, ವಿಷಯವನ್ನು ಅವರು ಸದನದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿ ಯಾರೂ ಸಹ ಯಾರ ಮೇಲೆಯೂ ಏನನ್ನೂ ಹೇರುತ್ತಿಲ್ಲ ಎಂದಿದ್ದಾರೆ. ಇನ್ನು ಸುಧಾಮೂರ್ತಿ ಅವರಿಗೆ ಎಷ್ಟು ಭಾಷೆಗಳು ಬರುತ್ತವೆ ಎಂದು ನಾನು ಕೇಳಿದೆ. ಅದಕ್ಕೆ ಅವರು ನಾನು ಹುಟ್ಟಿದಾಗಿನಿಂದ ಕನ್ನಡತಿ, ವೃತ್ತಿಯಿಂದ ಇಂಗ್ಲಿಷ್ ಕಲಿತೆ, ಅಭ್ಯಾಸದಿಂದಾಗಿ ಹಿಂದಿ, ಒಡಿಯಾ, ತೆಲುಗು, ಮರಾಠಿ ಹಾಗೂ ಸಂಸ್ಕೃತ ಭಾಷೆಗಳನ್ನು ಕಲಿತಿದ್ದೇನೆ ಅಂತ ಹೇಳಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ.

ಅಲ್ಲದೇ ಇದರಲ್ಲಿ ತಪ್ಪೇನಿದೆ. ಸುಧಾಮೂರ್ತಿ ಅವರ ಮೇಲೆ ಈ ಭಾಷೆಗಳನ್ನು ಕಲಿಯಿರಿ ಎಂದು ಯಾರು ಒತ್ತಡ ಹೇರಿದ್ದಾರೆ. ಇಲ್ಲಿ ಯಾರೂ ಯಾರ ಮೇಲೆ ಸಹ ಯಾವುದೇ ಹೇರಿಕೆಯನ್ನು ಮಾಡುತ್ತಿಲ್ಲ. ಪ್ರಜಾಪ್ರಭುತ್ವ ಸಮಾಜದಲ್ಲಿ ನೀವು ಬಹುಭಾಷಿಕರಾಗಿರಬೇಕು ಎಂದಿದ್ದಾರೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಹಿಂದಿ ಹೇರಿಕೆಯನ್ನು ನಿಲ್ಲಿಸುವಂತೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಆಗ್ರಹಿಸಿವೆ.

ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಈ ವಿಚಾರದಲ್ಲಿ ಉಗ್ರ ಹೋರಾಟವನ್ನೇ ಮಾಡಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಮಾತ್ರ ತ್ರಿಭಾಷಾ ಸೂತ್ರ ಇಲ್ಲ. ತ್ರಿಭಾಷಾ ಸೂತ್ರ ಎಂದರೆ ಶಾಲಾ ಮಕ್ಕಳು ವಿದ್ಯಾಭ್ಯಾಸದಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯನ್ನು ಕಲಿಯಬೇಕು. ಆದರೆ ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ದ್ವಿಭಾಷಾ ನೀತಿ ಅನುಸರಿಸಲಾಗುತ್ತಿದೆ. ಅಂದರೆ ಇಲ್ಲಿನ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಇದೀಗ ಸಂಸದೆ ಸುಧಾ ಮೂರ್ತಿ ಅವರು ತ್ರಿಭಾಷಾ ಸೂತ್ರ ಇರಲಿ ಎಂದು ಹೇಳಿದ್ದಾರೆ.

ದೇಶದಲ್ಲಿ ಮತ್ತೆ ತ್ರಿಭಾಷಾ ಸೂತ್ರದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತ ತ್ರಿಭಾಷ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ದಕ್ಷಿಣದ ಭಾಷೆಯನ್ನು ಉತ್ತರ ಭಾರತೀಯರು ಹಾಗೂ ಹಿಂದಿಯನ್ನು, ಉತ್ತರ ಭಾರತದ ಭಾಷೆಯನ್ನು ದಕ್ಷಿಣ ಭಾರತೀಯರು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಹಳೆಯ ಒಪ್ಪಂದ ಅಥವಾ ಶಿಕ್ಷಣ ನೀತಿಯಾಗಿದೆ. ಆದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕವೂ ಸೇರಿದಂತೆ ನಾಲ್ಕು ರಾಜ್ಯಗಳು ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿವೆ. ಆದರೆ ಉತ್ತರ ಭಾರತದ ಯಾವೊಂದು ರಾಜ್ಯದಲ್ಲೂ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳನ್ನು ಅಳವಡಿಸಿಕೊಂಡಿಲ್ಲ.

RELATED ARTICLES

Latest News