ರಾಂಚಿ, ಜ.5- ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪ್ರತಿಷ್ಠಿತ ಸಂಸ್ಥೆಯೊಂದು 15 ಕೋಟಿ ರೂ. ವಂಚಿಸಿದ್ದು ಅವರ ವಿರುದ್ಧ ಕೂಲ್ ಕ್ಯಾಪ್ಟನ್ ರಾಂಚಿ ಕೋರ್ಟ್ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಪ್ರತಿಷ್ಠಿತ ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ನ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಾಸ್ ಅವರೇ ಧೋನಿಗೆ 15 ಕೋಟಿ ವಂಚಿಸಿದರಾಗಿದ್ದಾರೆ.
2017ರಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಜಾಗತಿಕವಾಗಿ ಸ್ಥಾಪಿಸುವ ಒಪ್ಪಂದಕ್ಕೆ ಮಹೇಂದ್ರ ಸಿಂಗ್ ಧೋನಿ ಸಹಿ ಮಾಡಿದ್ದರು. ಆದರೆ, ಒಪ್ಪಂದದ ಪ್ರಕಾರ ಅರ್ಕಾ ಸ್ಪೋರ್ಟ್ಸ್ ನಿಯಮಗಳನ್ನು ಉಲ್ಲಂಘಿಸಿತ್ತು. ಫ್ರಾಂಚೈಸಿ ಶುಲ್ಕ ಮತ್ತು ಲಾಭದಲ್ಲಿನ ಪಾಲನ್ನು ನೀಡದೆ ವಂಚಿಸಿತ್ತು. ಮಹೇಂದ್ರ ಸಿಂಗ್ ಧೋನಿ ಪರವಾಗಿ ಅವರ ವಕೀಲರು ಅರ್ಕಾ ಸ್ಪೋರ್ಟ್ಸ್‌ಗೆ ಹಲವಾರು ಕಾನೂನು ನೋಟಿಸ್‌ಗಳನ್ನು ಕಳುಹಿಸಿದ್ದರು. ಇದ್ಯಾವುದೇ ನೋಟಿಸ್ ಗೂ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಾಸ್ ಅವರು ಪ್ರತಿಕ್ರಿಯಿಸಿರಲಿಲ್ಲ.
ವಿಧಿ ಅಸೋಸಿಯೇಟ್ಸ್ ಮೂಲಕ ಧೋನಿಯನ್ನು ಪ್ರತಿನಿಧಿಸುತ್ತಿರುವ ದಯಾನಂದ್ ಸಿಂಗ್, ಅರ್ಕಾ ಸ್ಪೋರ್ಟ್ಸ್ ತನಗೆ ಮೋಸ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಧೋನಿಗೆ 15 ಕೋಟಿಗೂ ಹೆಚ್ಚು ನಷ್ಟವಾಗಿದ್ದು ರಾಂಚಿ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶ : ವಾಂಟೆಡ್ ಕ್ರಿಮಿನಲ್ ವಿನೋದ್ ಕುಮಾರ್ ಉಪಾಧ್ಯಾಯ ಎನ್‌ಕೌಂಟರ್
16ನೇ ಆವೃತ್ತಿಯ ಐಪಿಎಲ್ ಬಳಿಕ ಮಹೇಂದ್ರ ಸಿಂಗ್ ಧೋನಿ ಧೋನಿ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಎಂಎಸ್ ಧೋನಿ ರಾಂಚಿನಲ್ಲಿ ಅಭ್ಯಾಸ ನಡೆಸಿದ್ದರು ಹಾಗೂ ಕೆಲವೊಮ್ಮೆ ಅವರು ತಮ್ಮ ವಿಂಟೇಜ್ ಕಾರುಗಳನ್ನು ಕಾಣಿಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದು 2024ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಭರ್ಜರಿ ತಯಾರಿ ನಡೆಸಿದ್ದಾರೆ.