Friday, November 22, 2024
Homeರಾಜ್ಯಮುಡಾ ಹಗರಣ : ಇ.ಡಿ.ಗೆ 500 ಪುಟಗಳ ದಾಖಲೆ ಸಲ್ಲಿಕೆ

ಮುಡಾ ಹಗರಣ : ಇ.ಡಿ.ಗೆ 500 ಪುಟಗಳ ದಾಖಲೆ ಸಲ್ಲಿಕೆ

Muda Scam: 500-page document submitted to ED

ಬೆಂಗಳೂರು,ಅ.3- ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದ ದೂರರ್ಜಿಗೆ ಪೂರಕವಾಗಿ 500 ಪುಟಗಳ ದಾಖಲೆಗಳನ್ನು ಸಲ್ಲಿಸಲಾಗಿದೆೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ನಗರದಲ್ಲಿಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲೇ ದೂರರ್ಜಿಯ ಜೊತೆ ದಾಖಲೆಗಳನ್ನು ನೀಡಿದ್ದೇನೆ. ಇಂದು ಹೊಸದಾಗಿ ದಾಖಲೆಗಳನ್ನು ನೀಡುವ ಅಗತ್ಯವಿರಲಿಲ್ಲ. ಆದರೆ ಜಾರಿ ನಿರ್ದೇಶನಾಲಯವು ನಮ ಕುಟುಂಬದ ಮಾಹಿತಿಯನ್ನು ಪಡೆಯಲು ಸಮನ್‌್ಸ ನೀಡಿತ್ತು ಎಂದು ಹೇಳಿದರು.

ಲಭ್ಯವಿರುವ ಮಾಹಿತಿ ಪ್ರಕಾರ ಜಾರಿ ನಿರ್ದೇಶನಾಲಯ ದೂರುದಾರರ ಎಲ್ಲಾ ಮಾಹಿತಿಗಳನ್ನು ಮೊದಲು ಪಡೆದು ನಂತರ ವಿಚಾರಣೆ ಮುಂದುವರೆಸಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸಮನ್ಸ್ ನಲ್ಲಿ ಕೇಳಿದ್ದ ಮಾಹಿತಿಗಳನ್ನು ತಾವು ಸಲ್ಲಿಸುವುದಾಗಿ ಹೇಳಿದರು.

ಮುಖ್ಯಮಂತ್ರಿಯವರ ಪತ್ನಿ ಪಾರ್ವತಿಯವರು ತಪ್ಪನ್ನು ಒಪ್ಪಿಕೊಂಡು ಮುಡಾಗೆ 14 ನಿವೇಶನಗಳನ್ನು ವಾಪಸ್‌‍ ನೀಡಿದ್ದಾರೆ. ಇದು ನಮ ತನಿಖೆಗೆ ಸಹಕಾರಿಯಾಗಿದೆ ಎಂದರು.ವಾಸ್ತವವಾಗಿ ಆ 14 ನಿವೇಶನಗಳು ಮತ್ತು ಕೆಸರೆ ಗ್ರಾಮದ ಭೂಮಿ ಮುಡಾಗೆ ಸೇರಿದೆ. ಈಗ ಪಾರ್ವತಿಯವರು 14 ನಿವೇಶನಗಳನ್ನು ಮುಡಾಗೆ ವಾಪಸ್‌‍ ನೀಡಲು ಅವಕಾಶವಿಲ್ಲ ಎಂದು ಹೇಳಿದರು.

ದೂರುದಾರರಾದ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ರವರು ಮಧ್ಯಮ ವರ್ಗದ ಕುಟುಂಬದವರಾಗಿದ್ದು, ಅವರಿಗೆ ಅಷ್ಟೊಂದು ವಕೀಲರನ್ನು ನೇಮಿಸಿಕೊಳ್ಳುವ ಆರ್ಥಿಕ ಚೈತನ್ಯ ಇಲ್ಲ. ಹೀಗಾಗಿ ಅವರಿಬ್ಬರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಆದಾಯ ಮೂಲಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ವಕೀಲರೊಬ್ಬರು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ಮುಖ್ಯಮಂತ್ರಿಯ ವಿರುದ್ಧ ಸಾಮಾನ್ಯ ಕುಟುಂಬದ ವ್ಯಕ್ತಿಯೂ ತನ್ನ ಹಕ್ಕು ಚಲಾಯಿಸಿ ಹೋರಾಟ ನಡೆಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಮುಖ್ಯಮಂತ್ರಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ರೀತಿಯ ಅನಗತ್ಯ ಆರೋಪಗಳು ಸರಿಯಲ್ಲ ಎಂದರು.

ಇಲ್ಲಿ ಕಾಣದ ಕೈಗಳಿವೆ ಎಂಬುದು ಮುಖ್ಯ ಪ್ರಶ್ನೆಯಲ್ಲ. ನಾವು ಮಾಡಿರುವ ಆರೋಪ ಸತ್ಯವೋ, ಸುಳ್ಳೋ ಎಂಬುದು ಆದ್ಯತೆ ಪಡೆಯಬೇಕು. ನಾನು ಯಾವುದೇ ರೀತಿಯ ತನಿಖೆಗಾದರೂ ಸಿದ್ಧನಿದ್ದೇನೆ ಎಂದು ತಿಳಿಸಿದರು.

ತಮ ವಿರುದ್ಧ ನ್ಯಾಯಾಲಯ ಜಾಮೀನುರಹಿತ ವಾರೆಂಟ್‌ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ 2015 ರಿಂದಲೂ ತಮ ವಿರುದ್ಧ ಪ್ರಕರಣ ನಡೆಯುತ್ತಿದೆ. ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಸ್ಥಳ ಪರಿಶೀಲನೆ ನಡೆಸಲು ಕರೆದಾಗ ನಾನು ಅದರಲ್ಲಿ ಭಾಗವಹಿಸಿದ್ದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಎಂಬಿಡಬ್ಲ್ಯೂ ಆಗಿದೆ. ನ್ಯಾಯಾಲಯಕ್ಕೆ ಹಾಜರಾಗುತ್ತೇನೆ. ಅದಕ್ಕೆ ದಾಖಲೆಗಳನ್ನು ಸಲ್ಲಿಸಿ ಜಾಮೀನು ರಹಿತ ಬಂಧನ ಆದೇಶವನ್ನು ತೆರವುಗೊಳಿಸಿಕೊಳ್ಳಲಾಗುವುದು ಎಂದರು.

ಲೋಕಾಯುಕ್ತ ಪೊಲೀಸರು ಆರಂಭಿಸಿರುವ ತನಿಖೆಗೆ ಸಹಕರಿಸುವುದು ದೂರುದಾರನಾಗಿ ನನ್ನ ಕರ್ತವ್ಯ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬುದು ನಮ ವಾದವಾಗಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆ ಶೀಘ್ರವೇ ನಡೆಯಲಿದೆ. ಆ ವೇಳೆ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಎಷ್ಟು ಅಗತ್ಯ ಎಂದು ನಮ ವಕೀಲರು ವಾದಿಸಲಿದ್ದಾರೆ. ನ್ಯಾಯಾಲಯ ನಮ ವಾದವನ್ನು ಪರಿಗಣಿಸಲಿದೆ ಎಂಬ ವಿಶ್ವಾಸವಿದೆ ಎಂದರು.

RELATED ARTICLES

Latest News