Friday, January 31, 2025
Homeರಾಜ್ಯಮುಡಾ ಹಗರಣ : ಜಪ್ತಿಯಾದ ಸೈಟ್ ಮರು ಮಾರಾಟ ಮಾಡದಂತೆ ನಿರ್ಬಂಧ

ಮುಡಾ ಹಗರಣ : ಜಪ್ತಿಯಾದ ಸೈಟ್ ಮರು ಮಾರಾಟ ಮಾಡದಂತೆ ನಿರ್ಬಂಧ

MUDA scam: Restriction on resale of seized sites

ಬೆಂಗಳೂರು,ಜ.27– ಜಪ್ತಿ ಮಾಡಿರುವ 142 ಸೈಟ್ ಪಟ್ಟಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಿದ ಜಾರಿ ನಿರ್ದೇಶನಾಲಯ, ಅವುಗಳನ್ನು ಮರುಮಾರಾಟ ಮಾಡಿಕೊಡದಂತೆ ಸೂಚನೆ ನೀಡಿದೆ.

ಈ ಸಂಬಂಧ ಮೈಸೂರಿನ 4 ನೋಂದಣಿ ಕಚೇರಿಗೆ ಅಧಿಕೃತ ಮಾಹಿತಿ ಕೊಟ್ಟಿದೆ. ಕೆಲವು ನಿವೇಶನಗಳನ್ನು ವ್ಯಕ್ತಿಗಳು ಈಗಾಗಲೇ ಮಾರಾಟ ಮಾಡಲು ಮುಂದಾಗಿದ್ದರು. ಹೀಗಾಗಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ. ನಮಿಂದ ಅಧಿಕೃತ ಆದೇಶ ಬರುವವರೆಗೂ ನೋಂದಣಿ ಮಾಡಬೇಡಿ, ಬೇರೆಯವರಿಗೆ ಯಾವುದೇ ಆಸ್ತಿ ರಿಜಿಸ್ಟರ್ ಮಾಡಿಕೊಡಬೇಡಿ ಎಂದು ಸೂಚನೆ ನೀಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಜಾರಿ ನಿರ್ದೇಶನಾಲಯ ಇದೀಗ ಮತ್ತೆ 631 ನಿವೇಶನಗಳನ್ನು ಜಪ್ತಿ ಮಾಡುವ ಸಾಧ್ಯತೆ ಇದೆ. 631 ನಿವೇಶನಗಳ ಬಗ್ಗೆ ಮುಡಾ ಆಯುಕ್ತರು ಜಾರಿ ನಿರ್ದೇಶನಾಲಯಕ್ಕೆ ವಿವರಗಳನ್ನು ಕಳುಹಿಸಿದ್ದಾರೆ. ತುರ್ತಾಗಿ ವಿವರ ಒದಗಿಸುವಂತೆ ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿತ್ತು.

ಈ 631 ನಿವೇಶನಗಳನ್ನು ಬೇನಾಮಿ ನಿವೇಶನಗಳೇ ಹೆಚ್ಚಿವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇನಾಮಿಗಳೇ ಹೆಚ್ಚಿರುವುದು ಗೊತ್ತಾಗಿದೆ. ಇವರ ಹೆಸರಿನಲ್ಲಿ ಕೆಲವು ಪ್ರತಿಷ್ಠಿತ ಉದ್ಯಮಿಗಳು ಕೂಡ ಸೈಟ್ ಪಡೆದಿರುವುದು ತಿಳಿದುಬಂದಿದೆ. ಹೀಗಾಗಿ ಈ ವಾರವೇ ಜಾರಿ ನಿರ್ದೇಶನಾಲಯ ಈ ಎಲ್ಲಾ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.

ಮುಡಾದ ಅಂದಾಜು 300 ಕೋಟಿ ರೂಪಾಯಿ ಮೌಲ್ಯದ 142 ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಎರಡು ವಾರಗಳ ಹಿಂದೆ ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ ಉಳಿದ ಸೈಟ್ಗಳ ವಿವರ ಶೀಘ್ರ ಕಳುಹಿಸುವಂತೆ ಮುಡಾಗೆ ಸೂಚಿಸಿತ್ತು. ಅದರಂತೆ ಇದೀಗ ಮುಡಾ ಆಯುಕ್ತರು ವಿವರಗಳನ್ನು ಕಳುಹಿಸಿಕೊಟ್ಟಿದ್ದಾರೆ.

ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಕೆ ಮಾಡಬೇಕಿದೆ. ಮತ್ತೊಂದೆಡೆ, ಮುಡಾ ಹಗರಣ ಸಂಬಂಧ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಕೆ ಆಗಿರುವ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ. ಈ ವಿಚಾರವಾಗಿ ಇಂದು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಮುಡಾ ಪ್ರಕರಣದಲ್ಲಿ ಅಧಿಕಾರಿಗಳು, ಸಿಬ್ಬಂದಿ ತಪ್ಪೆಸಗಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರ ಇಲ್ಲ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ಇದನ್ನು, ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಭಾವ ಇಲ್ಲದೆ ಅಧಿಕಾರಿಗಳು ಆ ರೀತಿಯ ತಪ್ಪೆಸಗಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದರು.

ಪ್ರಭಾವಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಬೇನಾಮಿಗಳು, ನಕಲಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಬುಂದು ಬಹಿರಂಗವಾಗಿದೆ. ಆಗಿನ ಮುಡಾ ಅಧ್ಯಕ್ಷರು ಮತ್ತು ಮುಡಾ ಆಯುಕ್ತರಿಗೆ ಸ್ಥಿರ ಆಸ್ತಿ, ಮುಡಾ ನಿವೇಶನಗಳು ನಗದು ಇತ್ಯಾದಿಗಳ ರೂಪದಲ್ಲಿ ಅಕ್ರಮವಾಗಿ ಪಾವತಿಸಿದ ಬಗ್ಗೆ ಆಪಾದಿತ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೀಗೆ ಪಡೆದ ಅಕ್ರಮ ಸಂಭಾವನೆಯನ್ನು ಮತ್ತಷ್ಟು ಅಕ್ರಮವಾಗಿ ವರ್ಗಾಯಿಸಲಾಗಿದೆ. ಅದನ್ನು ಕಾನೂನುಬದ್ಧ ಮೂಲಗಳಿಂದ ಪಡೆಯಲಾಗಿದೆ ಎಂದು ತೋರಿಸಲಾಗಿದೆ. ಮುಡಾದ ಹಿಂದಿನ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಿನಲ್ಲಿ ಆಸ್ತಿ, ಐಷಾರಾಮಿ ವಾಹನಗಳು ಇತ್ಯಾದಿಗಳನ್ನು ಖರೀದಿಸಲು ಸಹಕಾರಿ ಸಂಘದ ಮೂಲಕ ಹಣವನ್ನು ವರ್ಗಾಯಿಸಲಾಗಿದೆ ಎಂದು ಇಡಿ ಹೇಳಿತ್ತು.

ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು 1860 ರ ಐಪಿಸಿಯ ವಿವಿಧ ಸೆಕ್ಷನ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ. ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ತಮ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿರುವ 14 ನಿವೇಶನಗಳ ಪರಿಹಾರವನ್ನು ಪಡೆಯಲು ಸಿದ್ದರಾಮಯ್ಯ ತಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

RELATED ARTICLES

Latest News