ಮುಂಬೈ,ಅ.31- ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗೆ ಪದೇ ಪದೇ ಜೀವ ಬೆದರಿಕೆ ಹಾಕಲಾಗುತ್ತಿದೆ. ಮೊದಲ ಬಾರಿ 20 ಕೋಟಿ, ಎರಡನೆ ಬಾರಿ 200 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಕಿಡಿಗೇಡಿಗಳು ಇದೀಗ 400 ಕೋಟಿ ರೂ. ನೀಡುವಂತೆ ಬೆದರಿಕೆ ಇ-ಮೇಲ್ ಮಾಡಿದ್ದಾರೆ.
ಮುಖೇಶ್ ಅಂಬಾನಿ ಅವರ ಕಂಪನಿಗೆ ನಿನ್ನೆ ಈ-ಮೇಲ್ ಸಂದೇಶ ರವಾನಿಸಿರುವ ಅಪರಿಚಿತ ವ್ಯಕ್ತಿ 400 ಕೋಟಿ ರೂ. ಹಣ ನೀಡದಿದ್ದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಮುಖೇಶ್ ಅಂಬಾನಿಗೆ ಕಳುಹಿಸಲಾದ ಮೂರನೇ ಬೆದರಿಕೆ ಈ-ಮೇಲ್ ಇದಾಗಿದೆ ಎಂದು ಅಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಶುಕ್ರವಾರ ಅಪರಿಚಿತ ವ್ಯಕ್ತಿಯಿಂದ 20 ಕೋಟಿ ಕೋರಿ ಮೊದಲ ಇ-ಮೇಲ್ ಬಂದ ನಂತರ ಕೈಗಾರಿಕೋದ್ಯಮಿಯ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈನಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಅದೇ ರೀತಿ ಶನಿವಾರ ಕಂಪನಿಗೆ 200 ಕೋಟಿ ರೂ.ಗಳ ಬೇಡಿಕೆ ಇರುವ ಈ-ಮೇಲ್ ಬಂದಿತ್ತು. ಕಂಪನಿಯು ಸೋಮವಾರ ಮೂರನೇ ಈ-ಮೇಲ್ ಅನ್ನು ಸ್ವೀಕರಿಸಿದೆ, ಅದರಲ್ಲಿ ಕಳುಹಿಸುವವರು ಬೇಡಿಕೆ ಹಣವನ್ನು ದ್ವಿಗುಣಗೊಳಿಸಿದ್ದಾರೆ ಎಂದು ಅಕಾರಿ ವಿವರಣೆ ನೀಡಿದ್ದಾರೆ.
ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ: ಕವಿತಾ
ಮುಂಬೈ ಪೊಲೀಸರು, ಅಪರಾಧ ವಿಭಾಗ ಮತ್ತು ಸೈಬರ್ ಪೊಲೀಸರ ವಿಶೇಷ ತಂಡಗಳು ಈ -ಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು. ಕಳೆದ ವರ್ಷ ಮುಂಬೈ ಪೊಲೀಸರು ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆ ಕರೆಗಳನ್ನು ಮಾಡಿದ್ದಕ್ಕಾಗಿ ಬಿಹಾರದ ದರ್ಭಾಂಗದ ವ್ಯಕ್ತಿಯನ್ನು ಬಂಸಿದ್ದರು. ಮಾಮ್‍ನಲ್ಲಿರುವ ಸರ್ ಎಚ್‍ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸೋಟಿಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.