Sunday, June 30, 2024
Homeರಾಜ್ಯಭಟ್ಕಳದಲ್ಲಿ ಉಗ್ರನಿಗಾಗಿ ಮುಂಬೈ ಎಟಿಎಸ್‌‍ ಹುಡುಕಾಟ

ಭಟ್ಕಳದಲ್ಲಿ ಉಗ್ರನಿಗಾಗಿ ಮುಂಬೈ ಎಟಿಎಸ್‌‍ ಹುಡುಕಾಟ

ಬೆಂಗಳೂರು, ಜೂ.22- 2008ರ ಪುಣೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆರೋಪಿ ಉಗ್ರ ಅಬ್ದುಲ್‌ ಕಬೀರ್‌ ಖಾದೀರ್‌ಗಾಗಿ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್‌ದಲ್ಲಿ ಜಾಲಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಹಸೀಲ್ದಾರ್‌ ಕಚೇರಿ, ಪುರಸಭೆಗೆ ನೋಟಿಸ್‌‍ ಅಂಟಿಸಿದೆ.

ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಭಟ್ಕಳ ನಿವಾಸಿ ಮನೆಗೆ ಮುಂಬೈ ಎಟಿಎಸ್‌‍ ತಂಡವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌‍ ಅಂಟಿಸಿ ಹೋಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

2008ರಲ್ಲಿ ಪುಣೆಯಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್‌ ಕಬೀರ್‌ ಖಾದೀರ್‌ ಸುಲ್ತಾನ್‌ ಅಲಿಯಾಸ್‌‍ ಮೌಲಾನಾ ಸುಲ್ತಾನ್‌ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತ ಆಗಾಗ ಭಟ್ಕಳಕ್ಕೆ ಬಂದು ಹೋಗುತ್ತಿದ್ದ ವಿಚಾರ ಎಟಿಎಸ್‌‍ಗೆ ತಿಳಿದೆ.

ಹೀಗಾಗಿ ಮುಂಬೈ ಎಟಿಎಸ್‌‍ ತಂಡ ಈತನಿಗಾಗಿ ಜೂ.10ರಂದು ಭಟ್ಕಳಕ್ಕೆ ಆಗಮಿಸಿ ಮನೆ, ತಹಸೀಲ್ದಾರ್‌ ಕಚೇರಿ ಹಾಗೂ ಪುರಸಭೆಯ ನೋಟಿಸ್‌‍ ಬೋರ್ಡ್‌ಗೆ ಜೂ.21ರಂದು ಪುಣೆ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ನೋಟಿಸ್ ಅಂಟಿಸಿ ತೆರಳಿದೆ.

RELATED ARTICLES

Latest News