Friday, November 22, 2024
Homeರಾಷ್ಟ್ರೀಯ | Nationalಕುವೈತ್‍ನಿಂದ ಸಮುದ್ರ ಮೂಲಕ ಬೋಟ್‍ನಲ್ಲಿ ಮುಂಬೈಗೆ ಬಂದ ಮೂವರು ವಶಕ್ಕೆ

ಕುವೈತ್‍ನಿಂದ ಸಮುದ್ರ ಮೂಲಕ ಬೋಟ್‍ನಲ್ಲಿ ಮುಂಬೈಗೆ ಬಂದ ಮೂವರು ವಶಕ್ಕೆ

ಮುಂಬೈ, ಫೆ.7: ಕುವೈತ್‍ನಿಂದ ಸಮುದ್ರ ಮೂಲಕ ಬೋಟ್‍ನಲ್ಲಿ ಇಲ್ಲಿಗೆ ಬಂದ ಮೂವರನ್ನು ಅಕ್ರಮ ದೇಶಪ್ರವೇಶದ ಆರೋಪದ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಗಳವಾರ ಗೇಟ್‍ವೇ ಆಫ್ ಇಂಡಿಯಾದಲ್ಲಿ ಲಂಗರು ಹಾಕಲಾಗಿದ್ದ ಬೋಟ್‍ನಲ್ಲಿ ಅನುಮಾನಾಸ್ಪದ ವಸ್ತು ಏನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದರು ಮೂವರು ಕೂಡ ತಮಿಳುನಾಡು ಮೂಲದವರು ಎಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕೆಲಸದ ನಿಮಿತ್ತ ಕುವೈತ್‍ಗೆ ಹೋಗಿದ್ದರು. ಕುವೈತ್‍ಗೆ ಕರೆದೊಯ್ದ ಅವರ ಏಜೆಂಟ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಆರೋಪಿಸಲಾಗಿದೆ, ನಂತರ ಅವರು ಅಲ್ಲಿಂದ ತಪ್ಪಿಸಿಕೊಂಡರು ಬಂದಿದ್ದಾರೆ.

ಛತ್ತೀಸ್‍ಗಢದಲ್ಲಿ ನಕ್ಸಲೀಯರಿಂದ ಗ್ರಾಮಸ್ಥನ ಹತ್ಯೆ

ಅಕ್ರಮ ಪ್ರವೇಶಕ್ಕಾಗಿ ಪಾಸ್‍ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇಲ್ಲಿನ ಕೊಲಾಬಾ ಪೊಲೀಸರು ಮೂವರನ್ನು ವಶಕ್ಕೆ ಪಡದು ಪ್ರಕರಣ ದಾಖಲಿಸಿದ್ದಾರೆ ಅವರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಹಿರಿಯ ಅದಿಕಾರಿಗಳು ಹೇಳಿದರು. ಕಳೆದ 2008ರ ನವೆಂಬರ್£ಲ್ಲಿ ಮುಂಬೈಗೆ ಇದೇ ರೀತಿ 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಆಗಮಿಸಿ ದುಷ್ಕøತ್ಯ ನಡೆಸಿದ್ದರು.

RELATED ARTICLES

Latest News