ಮುಂಬೈ,ಏ.2-ವಸತಿ ಸಮುಚ್ಚಯದ 14 ಅಂತಸ್ತಿನಿಂದ ಕೆಳಗೆ ಹಾರಿ 20 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ನಗರದ ಹಿಂದೂ ಕಾಲೋನಿಯಲ್ಲಿ ನಡೆದಿದೆ.
ಮೂರನೇ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಝಾನಾ ಸೇಥಿಯಾ(20) ಮೃತ ಬಾಲಕಿಯಾಗಿದ್ದು, ಟೆಕ್ಕೋ ಹೈಟ್ಸ್ ವಸತಿ ಸಮುಚ್ಚಯಲ್ಲಿ ಈ ಘಟನೆ ನಡೆದಿದೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕೆ ತನ್ನ ಪೋಷಕರೊಂದಿಗೆ ಅದೇ ಕಟ್ಟಡದ ಎಂಟನೇ ಮಹಡಿಯಲ್ಲಿ ವಾಸಿಸುತ್ತಿದ್ದಳು ಸೇಥಿಯಾ ಮತ್ತು ಅವಳನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದ ಅಕೆಯಇಬ್ಬರು ಸ್ನೇಹಿತರು ಟೆರೇಸ್‌ಗೆ ಹೋಗುತ್ತಿದ್ದರು. ಆದರೆ ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದಂತೆ ಕೆಳಗೆ ಹಾರಿದಳು.
ತೀವ್ರವಾಗಿ ಗಾಯಗೊಂಡ ಆಕೆಯನ್ನು ತಕ್ಷಣ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು. ಯಾವುದೇಪತ್ರ ಪತ್ತೆಯಾಗಿಲ್ಲ ಆದರೆ ಪೊಲೀಸರು ಆಕೆ ಬರೆಯುತ್ತಿದ್ದ ಡೈರಿಯನ್ನು ಪರಿಶೀಲಿಸಿದಾಗ, ಅಲ್ಲಿ ಆಕೆ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಸುಳಿವು ನೀಡಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅವಳ ಸ್ನೇಹಿತರ ಪ್ರಕಾರ, ಪ್ರೇಮ ವೈಫಲ್ಯದ ನಂತರ ಅವಳು ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಹೇಳಿದ್ದಾರೆ. ಮಾಟುಂಗಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.