Monday, July 7, 2025
Homeರಾಜ್ಯನಾಳೆಯಿಂದ ರಾಜ್ಯಾದ್ಯಂತ ಮಹಾನಗರ ಪಾಲಿಕೆ ನೌಕರರು ಮುಷ್ಕರ

ನಾಳೆಯಿಂದ ರಾಜ್ಯಾದ್ಯಂತ ಮಹಾನಗರ ಪಾಲಿಕೆ ನೌಕರರು ಮುಷ್ಕರ

Municipal Corporation employees to go on strike across the state from tomorrow

ಬೆಂಗಳೂರು, ಜು.7- ನಾಳೆಯಿಂದ ರಾಜ್ಯಾದ್ಯಂತ ಮಹಾನಗರ ಪಾಲಿಕೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.ರಾಜ್ಯದ 10 ಮಹಾನಗರ ಪಾಲಿಕೆಗಳು ಬಂದ್ ಆಗಲಿದ್ದು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅವರು ಸಾಮೂಹಿಕ ರಜೆ ಹಾಕಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದ್ದಾರೆ.

ಬಿಬಿಎಂಪಿ ಸೇರಿದಂತೆ ವಿವಿಧ ಪಾಲಿಕೆಗಳ ನೌಕರರು ಫ್ರೀಡಂ ಪಾರ್ಕ್ನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಲಿದ್ದಾರೆ. ಪಾಲಿಕೆ ನೌಕರರನ್ನು ಸರ್ಕಾರಿ ನೌಕರರು ಅಂತ ಪರಿಗಣಿಸಬೇಕು.

ಲಾಗ್‌ಸೇಫ್ ಹಾಜರಾತಿ ಪ್ರಕ್ರಿಯೆಯನ್ನ ರದ್ದು ಮಾಡಬೇಕು, ವಿವಿಧ ವಾರ್ಡ್ ಗಳಲ್ಲಿ ಖಾಲಿ ಇರೋ 6 ಸಾವಿರ ಹುದ್ದೆಗಳನ್ನ ಭರ್ತಿ ಮಾಡಬೇಕು, ಪಾಲಿಕೆ ನೌಕರರಿಗೆ ಆಗ್ತಿರೋ ಕೆಲಸದ ಒತ್ತಡ ಕಡಿಮೆ ಮಾಡಬೇಕು, ಪಾಲಿಕೆಯ ಶಿಕ್ಷಣ ವಿಭಾಗದಲ್ಲಿ ಪ್ರಾಂಶುಪಾಲರ ಮೇಲಾಗ್ತಿರೋ ಇಲಾಖಾ ವಿಚಾರಣೆಗಳನ್ನ ಕೈಬಿಡಬೇಕು, ಅಭಿಯಂತರರು, ಸಹಾಯಕ ಅಭಿಯಂತರರಿಗೆ ಮುಂಬಡ್ತಿ ನೀಡಬೇಕು.

ನೌಕರರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡಬೇಕು, ಪಾಲಿಕೆ ನೌಕರರಿಗೆ ಜೇಷ್ಠತಾಪಟ್ಟಿಯನ್ನ ಅಂತಿಮಗೊಳಿಸುವುದು.- ಇ-ಖಾತಾ ಬದಲು ಹಿಂದೆ ಇದ್ದ ಪದ್ದತಿಯನ್ನ ಜಾರಿಗೊಳಿಸುವುದು, ಹೆಲ್ತ್ ಸೂಪರ್ ವೈಸರ್ ಗಳಿಗೆ ಉದ್ದಿಮೆ ಪರವಾನಗಿ ನೀಡಬೇಕು..- ಕಾನೂನು ಬಾಹಿರವಾಗಿರೋ ಮಾರ್ಷಲ್ಸ್ ಹುದ್ದೆಗಳನ್ನ ರದ್ದುಗೊಳಿಸುವುದು ಇವರ ಪ್ರಮುಖ ಬೇಡಿಕೆಗಳಾಗಿವೆ.

ಬಿಬಿಎಂಪಿ, ಹುಬಳ್ಳಿ-ಧಾರವಾಡ, ತುಮಕೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು ಹಾಗೂ ಬೆಳಗಾಂ ಮಹಾನಗರ ಪಾಲಿಕೆ ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿವೆ.

RELATED ARTICLES

Latest News