Friday, April 4, 2025
Homeಜಿಲ್ಲಾ ಸುದ್ದಿಗಳು | District Newsಹೊಸಕೋಟೆ : ನಡು ರಸ್ತೆಯಲ್ಲೇ ಚಿಕ್ಕಮ್ಮನ ಕೊಲೆ

ಹೊಸಕೋಟೆ : ನಡು ರಸ್ತೆಯಲ್ಲೇ ಚಿಕ್ಕಮ್ಮನ ಕೊಲೆ

ಹೊಸಕೋಟೆ, ಜೂ.18- ಕೌಟುಂಬಿಕ ಕಲಹದಿಂದ ನಡುರಸ್ತೆಯಲ್ಲಿ ಚಿಕ್ಕಮ್ಮನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ರುವ ಘಟನೆ ಹೊಸಕೋಟೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಮಸಂದ್ರದ ನಿವಾಸಿ ಚಂದ್ರಮ್ಮ(40) ಕೊಲೆಯಾದ ದುರ್ದೈವಿ.

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್‌ ಹಾಗೂ ಈತನ ಚಿಕ್ಕಮ ಚಂದ್ರಮನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ರಾತ್ರಿಯೂ ಸಹ ಇದೇ ವಿಚಾರವಾಗಿ ಜಗಳ ನಡೆದಿದ್ದು, ಚಿಕ್ಕಮನ ವಿರುದ್ಧ ವೆಂಕಟೇಶ್‌ ಕೋಪಗೊಂಡಿದ್ದನು.

ಚಂದ್ರಮ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ನಡುರಸ್ತೆಯಲ್ಲೇ ಅಡ್ಡಗಟ್ಟಿದ ವೆಂಕಟೇಶ್‌ ದೊಣ್ಣೆಯಿಂದ ಚಂದ್ರಮ ಅವರ ತಲೆಗೆ ಹೊಡೆದು ಪರಾರಿಯಾಗಿದ್ದಾನೆ.ಸ್ಥಳದಲ್ಲೇ ಕುಸಿದು ಬಿದ್ದ ಚಂದ್ರಮ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಹೊಸಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News