ಜುನಾಗಢ್, ಫೆ 5 (ಪಿಟಿಐ) ದ್ವೇಷದ ಭಾಷಣ ಮಾಡಿದ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿರುವ ಗುಜರಾತ್ ಪೊಲೀಸರು ಇಸ್ಲಾಮಿಕ್ ಬೋಧಕ ಮುಫ್ತಿ ಸಲ್ಮಾನ್ ಅಝಾರಿ ಅವರನ್ನು ಮುಂಬೈನಿಂದ ಬಂಧಿಸಿದ್ದಾರೆ ಮತ್ತು ಅವರನ್ನು ರಾಜ್ಯಕ್ಕೆ ಕರೆತರುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 31 ರ ರಾತ್ರಿ ಗುಜರಾತ್‍ನ ಜುನಾಗಢ್ ನಗರದ ಬಿ ವಿಭಾಗದ ಪೊಲೀಸ್ ಠಾಣೆ ಬಳಿಯ ತೆರೆದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ದ್ವೇಷ ಭಾಷಣ ಮಾಡಿದ್ದ ಆರೋಪಕ್ಕೆ ಅಝಾರಿ ಗುರಿಯಾಗಿದ್ದರು.
ಅದರ ವೀಡಿಯೊ ವೈರಲ್ ಆದ ನಂತರ, ಅಝಾರಿ ಮತ್ತು ಸ್ಥಳೀಯ ಸಂಘಟಕರಾದ ಮೊಹಮ್ಮದ್ ಯೂಸುಫ್ ಮಾಲೆಕ್ ಮತ್ತು ಅಜೀಮ್ ಹಬೀಬ್ ಒಡೆದಾರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಬಿ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಅನುಕೂಲಕರವಾದ ಹೇಳಿಕೆಗಳನ್ನು ನೀಡುವುದು) ಅರೋಪದಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಮಾಲೆಕ್ ಮತ್ತು ಹಬೀಬ್ ಅವರನ್ನು ಶನಿವಾರ ಬಂಧಿಸಲಾಗಿದ್ದು, ಪೊಲೀಸರು ಅಝಾರಿಗಾಗಿ ಹುಡುಕಾಟ ನಡೆಸುತ್ತಿದ್ದರು.
ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಗಲಿದೆ : ದಿಯಾಕುಮಾರಿ
ಮುಂಬೈನ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಅವರನ್ನು ಜುನಾಗಢಕ್ಕೆ ಮರಳಿ ಕರೆತರಲಾಗುತ್ತಿದೆ ಎಂದು ಜುನಾಗಢ ಅಪರಾಧ ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ಜೆ ಜೆ ಪಟೇಲ್ ತಿಳಿಸಿದ್ದಾರೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಸಹಾಯದಿಂದ ಜುನಾಗಢ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.
ಆರೋಪಿಯನ್ನು ಜುನಾಗಢಕ್ಕೆ ಕರೆತರಲಾಗುತ್ತಿದ್ದು,ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದರು. ಅಕಾರಿಗಳ ಪ್ರಕಾರ, ಬಂಧಿತ ವ್ಯಕ್ತಿಗಳು ಡಿ-ಅಡಿಕ್ಷನ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಎಂದು ಕೂಟಕ್ಕೆ ಪೊಲೀಸರಿಂದ ಅನುಮತಿ ಪಡೆದಿದ್ದರು, ಆದರೆ ಅವರು ಉದ್ರೇಕಕಾರಿ ಭಾಷಣ ಮಾಡಿದರು ಎಂದು ಆರೋಪಿಸಲಾಗಿದೆ.
ಗುಜರಾತ್ ಪೊಲೀಸರು ಮುಂಬೈನಲ್ಲಿ ಅಝಾರಿಯನ್ನು ಬಂಧಿಸಿದ ನಂತರ, ಮಹಾರಾಷ್ಟ್ರದ ರಾಜಧಾನಿಯ ಘಾಟ್ಕೋಪರ್ ಪೊಲೀಸ್ ಠಾಣೆಯ ಹೊರಗೆ ನೂರಾರು ಬೆಂಬಲಿಗರು ಜಮಾಯಿಸಿದ್ದರಿಂದ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಬೇಕಾಯಿತು.