Wednesday, November 27, 2024
Homeರಾಷ್ಟ್ರೀಯ | Nationalಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ ಮಹಾ ವಿಕಾಸ್‌‍ ಅಘಾಡಿ

ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ ಮಹಾ ವಿಕಾಸ್‌‍ ಅಘಾಡಿ

MVA candidates to seek EVM Verification after Maharashtra poll loss

ಮುಂಬೈ, ನ.27 (ಪಿಟಿಐ) ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಹಾ ವಿಕಾಸ್‌‍ ಅಘಾಡಿ ಅಭ್ಯರ್ಥಿಗಳು ತಮ್ಮ ವಿಭಾಗಗಳಲ್ಲಿರುವ ಇವಿಎಂ-ವೋಟರ್‌ ವೆರಿಫೈಬಲ್‌ ಪೇಪರ್‌ ಆಡಿಟ್‌ ಟ್ರೇಲ್ಸ್‌‍ (ವಿವಿಪಿಎಟಿ) ಘಟಕಗಳ ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ವಿರೋಧ ಪಕ್ಷದ ಶಿವಸೇನೆಯ (ಯುಬಿಟಿ) ಹಲವು ಸೋತ ಅಭ್ಯರ್ಥಿಗಳು ವಿದ್ಯುನಾನ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಯತ್ತ ಆತಂಕ ವ್ಯಕ್ತಪಡಿಸಿದ್ದಾರೆ.ಮುಂಬೈನ ತಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಠಾಕ್ರೆ ಅವರು ತಮ ಪಕ್ಷದ ನೀರಸ ಪ್ರದರ್ಶನದ ಬಗ್ಗೆ ಅವಲೋಕಿಸಿದರು.

ಕಳೆದ ವಾರ ನಡೆದ ಚುನಾವಣಾ ತೀರ್ಪು ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಒಳಗೊಂಡಿರುವ ಮಹಾಯುತಿ ಒಕ್ಕೂಟವು ಬಹತ್‌ ಜನಾದೇಶದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದೆ, ಮಹಾ ವಿಕಾಸ್‌‍ ಅಘಾಡಿ (ಎಂವಿಎ)ಹೀನಾಯ ಸೋಲು ಕಂಡಿದೆ. 288 ಸದಸ್ಯರ ಸದನದಲ್ಲಿ ಮಹಾಯುತಿ 230 ಸ್ಥಾನಗಳನ್ನು ಮತ್ತು ಎಂವಿಎ ಕೇವಲ 46 ಸ್ಥಾನಗಳನ್ನು ಗೆದ್ದಿದೆ.

ಠಾಕ್ರೆ ನೇತತ್ವದ ಸೇನೆ (ಯುಬಿಟಿ) 20 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಾಳಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮಿದೆ, ನಂತರ ಕಾಂಗ್ರೆಸ್‌‍ 16 ಕ್ಷೇತ್ರಗಳನ್ನು ಗೆದ್ದುಕೊಂಡಿತು, ಆದರೆ ಎನ್‌ಸಿಪಿ (ಶರದ್‌ ಪವಾರ್‌) 10 ಸ್ಥಾನಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಪಿಟಿಐ ಜೊತೆ ಮಾತನಾಡಿದ ಮುಂಬೈನ ಚಂಡಿವಾಲಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌‍ ನಾಯಕ ಆರಿಫ್‌ ನಸೀಮ್‌ ಖಾನ್‌ ಅವರು, ಠಾಕ್ರೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ, ಇವಿಎಂಗಳನ್ನು ಟ್ಯಾಂಪರಿಂಗ್‌ ಮಾಡಬಹುದೆಂದು ತಮ ಪಕ್ಷದ ಕಾರ್ಯಕರ್ತರಿಂದ ದೂರುಗಳು ಬಂದಿವೆ ಎಂದು ಹೇಳಿದರು.

RELATED ARTICLES

Latest News