Home ಇದೀಗ ಬಂದ ಸುದ್ದಿ ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚಿಸುವ ತಯಾರಿ ನಡೆಸಿದ್ದ ಎಂವಿಎ ಮೈತ್ರಿಕೂಟ

ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚಿಸುವ ತಯಾರಿ ನಡೆಸಿದ್ದ ಎಂವಿಎ ಮೈತ್ರಿಕೂಟ

0
ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚಿಸುವ ತಯಾರಿ ನಡೆಸಿದ್ದ ಎಂವಿಎ ಮೈತ್ರಿಕೂಟ

ಮುಂಬೈ, ನ 23 (ಪಿಟಿಐ) ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು ಎನ್ನೊ ಗಾದೆ ಮಾತಿನ ಹಾಗೆ ಮಹಾರಾಷ್ಟ್ರದ ವಿರೋಧ ಪಕ್ಷ ಮಹಾ ವಿಕಾಸ್‌‍ ಅಘಾಡಿ (ಎಂವಿಎ) ತನ್ನ 160 ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಕೆಲವು ಸ್ವತಂತ್ರ ಅಭ್ಯರ್ಥಿಗಳಿಂದ ಬೆಂಬಲ ಪತ್ರಗಳನ್ನು ಸಂಗ್ರಹಿಸಿದೆ, ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸರ್ಕಾರ ರಚಿಸುವ ಮೈತ್ರಿಗೆ ತಮ ಬೆಂಬಲವನ್ನು ವಾಗ್ದಾನ ಮಾಡಿದೆ.

ಫಲಿತಾಂಶ ಪ್ರಕಟವಾದ ನಂತರ ಬೆಂಬಲಿತ 160ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಸಂಗ್ರಹಿಸಿದ ಬೆಂಬಲ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.ಮೂಲಗಳ ಪ್ರಕಾರ, ಇದು ಸಾಮಾನ್ಯ ಅಭ್ಯಾಸವಾಗಿದೆ.

ಎಂವಿಎ ಅಭ್ಯರ್ಥಿಗಳಲ್ಲದೆ, ಚುನಾವಣೆಯಲ್ಲಿ ಗೆಲ್ಲಬಹುದಾದ ಕೆಲವು ಸ್ವತಂತ್ರರು ಮತ್ತು ಬಂಡಾಯಗಾರರನ್ನೂ ಸಂಪರ್ಕಿಸಲಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ. ಎಂವಿಎಯು ಉದ್ಧವ್‌ ಠಾಕ್ರೆ ನೇತತ್ವದ ಶಿವಸೇನೆ (ಯುಬಿಟಿ), ಶರದ್‌ ಪವಾರ್‌ನ ಎನ್‌ಸಿಪಿ (ಎಸ್‌‍ಪಿ) ಮತ್ತು ಕಾಂಗ್ರೆಸ್‌‍ ಅನ್ನು ಒಳಗೊಂಡಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌‍ 101 ಅಭ್ಯರ್ಥಿಗಳನ್ನು, ಶಿವಸೇನೆ (ಯುಬಿಟಿ) 95 ಮತ್ತು ಎನ್‌ಸಿಪಿ (ಎಸ್‌‍ಪಿ) 86 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ, ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 149 ವಿಧಾನಸಭಾ ಸ್ಥಾನಗಳಲ್ಲಿ, ಶಿವಸೇನೆ 81 ಸ್ಥಾನಗಳಲ್ಲಿ ಮತ್ತು ಅಜಿತ್‌ ಪವಾರ್‌ ನೇತತ್ವದ ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.