Wednesday, March 26, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಮೈಸೂರು : ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿಬಿದ್ದು ಮನೆಯಲ್ಲಿದ್ದ ಟಿವಿ, ರೆಫ್ರಿಜರೇಟರ್ ಬ್ಲಾಸ್ಟ್‌

ಮೈಸೂರು : ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿಬಿದ್ದು ಮನೆಯಲ್ಲಿದ್ದ ಟಿವಿ, ರೆಫ್ರಿಜರೇಟರ್ ಬ್ಲಾಸ್ಟ್‌

Mysore: Transformer catches fire, TV, refrigerator explodes in house

ಮೈಸೂರು, ಮಾ.24- ಟ್ರಾನ್ಸ್‌ಫಾರ್ಮ‌ರ್ನನಲ್ಲಿ ಬೆಂಕಿ ಅವಘಡ ಸಂಭವಿಸಿ ಹಲವಾರು ಮನೆಗಳಲ್ಲಿ ಟಿವಿ, ರೆಫ್ರಿಜರೇಟರ್ ಗಳು ಸುಟ್ಟು ಬ್ಲಾಸ್ಟ್‌ ಆದ ಘಟನೆ ಇಲ್ಲಿನ ಕೋಚನಹಳ್ಳಿ ಗ್ರಾಮದಲ್ಲಿನಡೆದಿದೆ.

ಮಧ್ಯರಾತ್ರಿ 12.30ರ ವೇಳೆ ಟ್ರಾನ್ಸ್‌ಫಾರ್ಮ‌್ರನಲ್ಲಿ ಭಾರಿ ಬೆಂಕಿ ಕಾಣಿಸಿದೆ. ಇದರಿಂದ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿದೆ.
ಟಿ.ವಿ, ರೆಫ್ರಿಜರೇಟರ್, ವಾಷಿಂಗ್ ಮಿಷನ್ ಹೀಗೆ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿದೆ.

ಅಲ್ಲದೆ ಹಲವಾರು ಜನರಿಗೆ ಕರೆಂಟ್ ಶಾಕ್ ಆಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗ್ರಾಮದಲ್ಲಿನ ಟ್ರಾನ್ಸ್‌ಫಾರ್ಮ‌್ರನಲ್ಲಿ ತೊಂದರೆ ಆಗುತ್ತಿದ್ದು, ಸಮಸ್ಯೆಯನ್ನು ಬಗೆಹರಿಸಲು ಹಲವು ಬಾರಿ ಗ್ರಾಮಸ್ಥರು ಚೆಸ್ಕಾಂಗೆ ಮನವಿ ಮಾಡಿದ್ದರು.

ಆದರೆ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News