ಬೆಂಗಳೂರು, ಜು.29– ಶ್ರಾವಣ ಮಾಸದ ಮೊದಲನೆ ಹಬ್ಬವಾದ ನಾಗರಪಂಚಮಿಯನ್ನು ನಗರದಲ್ಲಿಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಉತ್ತರ ಕರ್ನಾಟಕ, ಮಲೆನಾಡು, ಅರೆಮಲೆನಾಡು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಭಾಗಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ನಾಗರಪಂಚಮಿ ದೊಡ್ಡಹಬ್ಬವೆಂದೇ ಹೇಳಬಹುದು.
ಉದ್ಯಾನನಗರಿ ಬೆಂಗಳೂರಿನಲ್ಲೂ ಸಹ ಇಂದು ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು. ಬಿಡುವಿಲ್ಲದ ನಗರದ ಜನತೆ ಯಾವ ಹಬ್ಬವನ್ನಾದರೂ ಮರೆಯಬಹುದು. ಆದರೆ, ನಾಗರ ಪಂಚಮಿಯನ್ನು ಮರೆಯದೆ ಭಕ್ತಿಯಿಂದ ಆಚರಿಸುತ್ತಾರೆ.
ಮನೆಯನ್ನು ಸ್ವಚ್ಛಗೊಳಿಸಿ, ಒಲೆ ಹಚ್ಚದೆ ಮಡಿಯೊಂದಿಗೆ ಮುಂಜಾನೆಯೇ ನಾಗರ ವಿಗ್ರಹ, ಹುತ್ತಗಳಿಗೆ ತನಿ ಎರೆದು ಪೂಜೆ ಸಲ್ಲಿಸಿದರು. ಕೆಲವರು ನಾಗರ ಕಲ್ಲುಗಳಿಗೆ ಪೂಜೆ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದ್ದರೆ, ಮತ್ತೆ ಕೆಲವರು ಹುತ್ತಗಳಿಗೆ ತನಿ ಎರೆಯುವ ಆಚರಣೆ ಮಾಡುತ್ತಾ ಬಂದಿದ್ದು, ಅವರವರ ಅನುಕೂಲಕ್ಕೆ ತಕ್ಕಂತೆ ಹಬ್ಬ ಆಚರಿಸಿದರು.
ನಗರದ ಸುಬ್ರಹ್ಮಣ್ಯ, ಗಣೇಶ ಹಾಗೂ ಶಿವನ ದೇವಾಯಗಳಲ್ಲಿ ಇಂದು ಮುಂಜಾನೆಯಿಂದಲೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು. ಮುಂಜಾನೆಯೇ ಜನರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ಒಂದು ಕಡೆಯಾದರೆ, ಮತ್ತೊಂದೆಡೆ ಅಶ್ವಥಕಟ್ಟೆ ಬಳಿ ಇರುವ ನಾಗರಕಲ್ಲು, ದೇವಾಲಯದ ಆವರಣದಲ್ಲಿರುವ ನಾಗರ ಪ್ರತಿಮೆ ಹಾಗೂ ಹುತ್ತಗಳಿಗೆ ಪೂಜೆ ಸಲ್ಲಿಸಿದರು.
ನಗರದ ಕೆಲವು ಪ್ರದೇಶದಲ್ಲಿ ಹುತ್ತಗಳನ್ನು ಹುಡುಕುವುದು ಕಷ್ಟ . ಹಾಗಾಗಿ ನಾಗರ ಕಲ್ಲುಗಳಿಗೆ ಹೆಚ್ಚು ಜನ ಪೂಜೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನ ಆವರಣದಲ್ಲಿರುವ ಹುತ್ತಗಳಿಗೆ ಕುಟುಂಬ ಸಮೇತ ಹಾಲೆರೆದು ಯಾವ ದೋಷಗಳೂ ಎದುರಾಗದಂತೆ ಪೂಜೆ ಸಲ್ಲಿದರು.
- ಬೆಂಗಳೂರಿನಾದ್ಯಂತ ನಾಗರ ಪಂಚಮಿ ಸಂಭ್ರಮ
- ರಾಷ್ಟ್ರಪತಿ ಅಧಿಕಾರ ಕುರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ
- ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಖರ್ಗೆ ಹೇಳಿಕೆ
- ನಟಿ ರಮ್ಯಾ ದೂರಿನ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ತನಿಖೆ
- ಚಿಕ್ಕಪ್ಪನ ಮನೆಯಲ್ಲೇ ಕಳವು ಆರೋಪಿತೆ ಸೇರಿ ನಾಲ್ವರ ಸೆರೆ, 65 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ