Friday, November 22, 2024
Homeರಾಜ್ಯನಾಗೇಂದ್ರ ಅವರೇ ವಾಲ್ಮೀಕಿ ನಿಗಮ ಅಕ್ರಮದ ರೂವಾರಿ : ಇಡಿ

ನಾಗೇಂದ್ರ ಅವರೇ ವಾಲ್ಮೀಕಿ ನಿಗಮ ಅಕ್ರಮದ ರೂವಾರಿ : ಇಡಿ

ಬೆಂಗಳೂರು,ಜು.13- ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅಕ್ರಮದ ರೂವಾರಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಎಂದು ಜಾರಿನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದೆ. ಬೆಂಗಳೂರಿನ ವಿಶೇಷ ಜನಪ್ರತಿನಿ„ಗಳ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು, 100 ಪುಟಗಳ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದು, ತಾವು ಬಿ.ನಾಗೇಂದ್ರ ಅವರನ್ನು ಏಕೆ ಬಂಧಿಸುತ್ತಿದ್ದೇವೆ ಎಂದು ಅರ್ಜಿಯಲ್ಲಿ ಮನವರಿಕೆ ಮಾಡಿದ್ದಾರೆ.

ಈ ಅಕ್ರಮದ ಮಾಸ್ಟರ್ ಮೈಂಡ್ ಬಿ.ನಾಗೇಂದ್ರ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅಕ್ರಮಕ್ಕೆ ಇವರೇ ಸೂತ್ರಧಾರರು. ಇವರ ನಿರ್ದೇಶನದಂತೆಯೇ ಇದು ನಡೆದಿದೆ ಎಂದು ಹೇಳಿದೆ.ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಹೇಳುತ್ತಿರುವ ಬಿ.ನಾಗೇಂದ್ರ ನಿಗಮದಲ್ಲಿದ್ದ 187 ಕೋಟಿ ಹಣದಲ್ಲಿ ಮೊದಲು 97 ಕೋಟಿಯನ್ನು ವರ್ಗಾವಣೆ ಮಾಡಲು ಅಧಿಕಾರಿಗಳ ಮೇಲೆ ನಿರಂತರವಾಗಿ ಒತ್ತಡ ಹಾಕಿದ್ದರು.

ಒಂದು ಹಂತದಲ್ಲಿ ಹಣ ವರ್ಗಾವಣೆ ಮಾಡದಿದ್ದರೆ ಹಿಂದಿನ ಪ್ರಕರಣವನ್ನು ಮುಂದಿಟ್ಟುಕೊಂಡು ಸೇವೆಯಿಂದ ಅಮಾನತುಪಡಿಸುವ ಬೆದರಿಕೆ ಹಾಕಿದ್ದರು ಎಂಬುದನ್ನು ಪತ್ತೆಹಚ್ಚಿದೆ.ಹೈದರಾಬಾದ್‍ನ ಬಂಜಾರಾ ಹಿಲ್ಸ್‍ನಲ್ಲಿರುವ ರತ್ನಾಕರ ಬ್ಯಾಂಕ್‍ನಲ್ಲಿ 18 ನಕಲಿ ಖಾತೆಗಳನ್ನು ತೆರೆದು ಮೇ 29ರಂದು ನಿಗಮದಿಂದ ರಾತ್ರೋರಾತ್ರಿ 40 ಕೋಟಿ ರೂ.ಗೂ ಅ„ಕ ಹಣ ವರ್ಗಾವಣೆ ಮಾಡಲಾಗಿದೆ.

ಮಹರ್ಷಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಮುಖ್ಯ ಹಣಕಾಸು ಅಧೀಕ್ಷಕರು ಸೇರಿದಂತೆ ನಿಗಮ ಹಲವು ಅಧಿಕಾರಿಗಳು ಬೆಂಗಳೂರಿನ ಶಾಂಗ್ರೀಲ ಹೋಟೆಲ್‍ನಲ್ಲಿ ಸಭೆ ನಡೆಸಿದ್ದರು ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಇಡಿ ಉಲ್ಲೇಖ ಮಾಡಿದೆ.
ಒಂದು ಹಂತದಲ್ಲಿ ನಿಗಮದ ಅಧಿಕಾರಿಗಳು ಮುಂದೊಂದು ದಿನ ಪ್ರಕರಣ ಆಚೆ ಬಂದರೆ ನಿಮಗೂ ಮತ್ತು ನಮಗೂ ಕಾನೂನಿನ ಸಂಕಷ್ಟ ಎದುರಾಗಲಿದೆ.

ಹೀಗಾಗಿ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು. ಇದಕ್ಕೆ ನಾಗೇಂದ್ರ ನಾನು ಅಧಿಕಾರದಲ್ಲಿದ್ದರೆ ಯಾವುದು ಕೂಡ ಆಚೆ ಬರುವುದಿಲ್ಲ. ನಿಮ್ಮನೆಲ್ಲ ರಕ್ಷಣೆ ಮಾಡುತ್ತೇನೆ. ನಾನು ಹೇಳಿದಂತೆ ಕೇಳಿ ಬಂಜಾರಾ ಹಿಲ್ಸ್‍ನಲ್ಲಿರುವ 18 ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ಅದಕ್ಕೂ ಮುನ್ನ ಎಂಜಿರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಪಖಾತೆ ತೆರೆಯುವಂತೆ ಸೂಚಿಸಿದ್ದರು.

ಮೇ 29ರಂದು ಶಾಂಗ್ರೀಲ ಹೋಟೆಲ್‍ನಲ್ಲಿ ನಡೆದ ಸಭೆಗೆ ನಾಗೇಂದ್ರ ಅವರ ಸಂಬಂ„ ನೆಕ್ಕುಂಟಿ ನಾಗರಾಜ್ ಸೇರಿದಂತೆ ನಿಗಮದ ಕೆಲವು ಅ„ಕಾರಿಗಳನ್ನು ಆಹ್ವಾನಿಸಲಾಗಿತ್ತು.ಇದಕ್ಕೂ ಮುನ್ನ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ಚಂದ್ರಿಕಾ ಹೋಟೇಲ್‍ನಿಂದ ಪದ್ಮನಾಭ್ ಮತ್ತು ನಾಗೇಂದ್ರ ಒಂದೇ ಕಾರಿನಲ್ಲಿ ಶಾಂಗ್ರೀಲಾ ಹೋಟೆಲ್‍ಗೆ ತೆರಳಿದ್ದರು.

ಈ ವೇಳೆ ಇಬ್ಬರ ನಡುವೆ ನಡೆದ ಮಾತುಕತೆಯಂತೆ ನಿಗಮದಲ್ಲಿರುವ ಒಟ್ಟು 187 ಕೋಟಿ ಹಣವನ್ನ ಹಂತ ಹಂತವಾಗಿ ವರ್ಗಾವಣೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ.ಇವೆಲ್ಲವೂ ಕೂಡ ಸಚಿವ ನಾಗೇಂದ್ರ ತಮ್ಮ ಪ್ರಭಾವ ಬಳಸಿ ಅ„ಕಾರ ದುರುಪಯೋಗಪಡಿಸಿಕೊಂಡು ಹಣ ವರ್ಗಾವಣೆ ಮಾಡಿರುವುದಕ್ಕೆ ಸಿಕ್ಕಿರುವ ಸಾಕ್ಷ್ಯಾಧಾರಗಳು.

ನಿಗಮದ ಅಧಿಕಾರಿಗಳ ಜೊತೆ ನಡೆದಿರುವ ದೂರವಾಣಿ ಸಂಭಾಷಣೆ, ಚಾಟಿಂಗ್, ಡಿಜಿಟಲ್ ಸಾಕ್ಷ್ಯಾಧಾರ ಕಲೆ ಹಾಕಿದೆ. ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಆಚೆ ಇದ್ದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ಅವರ ಬಂಧನ ಅಗತ್ಯವಿದೆ ಎಂದು ಇಡಿ ಅ„ಕಾರಿಗಳು ರಿಮ್ಯಾಂಡ್ ಅರ್ಜಿಯಲ್ಲಿ ಮನವರಿಕೆ ಮಾಡಿದ್ದಾರೆ.

RELATED ARTICLES

Latest News