Friday, March 21, 2025
Homeರಾಷ್ಟ್ರೀಯ | Nationalನಾಗ್ಪುರದಲ್ಲಿ ಯಾವುದು ಚಾದರ್ ಸುಟ್ಟಿಲ್ವ, ಆದರೂ ಮತಾಂಧರಿಂದ ಗಲಭೆ

ನಾಗ್ಪುರದಲ್ಲಿ ಯಾವುದು ಚಾದರ್ ಸುಟ್ಟಿಲ್ವ, ಆದರೂ ಮತಾಂಧರಿಂದ ಗಲಭೆ

Nagpur violence: Cyber cell identifies over 140 online posts with objectionable content

ನಾಗುರ, ಮಾ.20– ಕೋಮುಗಲಭೆಗೆ ಕಾರಣವಾದ ನಾಗುರದಲ್ಲಿ ನಡೆದ ಬಲಪಂಥೀಯ ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೆ ಧಾರ್ಮಿಕ ಪಠ್ಯವನ್ನು ಹೊಂದಿರುವ ಬಟ್ಟೆಯನ್ನು ಸುಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಕೋಮು ಅಶಾಂತಿಯನ್ನು ಪ್ರಚೋದಿಸುವ ಮತ್ತು ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಭಂಗಗೊಳಿಸುವ ಗುರಿಯನ್ನು ಹೊಂದಿರುವ ನೂರಾರು ಪ್ರಚೋದನಕಾರಿ ಆನ್‌ಲೈನ್ ಪೊಸ್ಟ್‌ಗಳನ್ನು ಪೊಲೀಸರು ಭೇದಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮೊಘಲ್ ಚಕ್ರವರ್ತಿಯ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ ಪಿ) ಮತ್ತು ಬಜರಂಗದಳ ನಡೆಸಿದ ಪ್ರತಿಭಟನೆಯ ಸಮಯದಲ್ಲಿ ಕುರಾನ್ ಪದ್ಯಗಳನ್ನು ಹೊಂದಿರುವ ಬಟ್ಟೆಯನ್ನು (ಚಾದರ್) ಸುಡಲಾಗಿದೆ ಎಂಬ ವದಂತಿಗಳು ಮಾರ್ಚ್ 17 ರಂದು ನಾಗುರದಲ್ಲಿ ಹಿಂಸಾಚಾರಕ್ಕೆ ಕಾರಣವಾದವು. ಈ ಪ್ರಕರಣದಲ್ಲಿ ಒಟ್ಟು ಏಳು ಜನರನ್ನು ಬಂಧಿಸಲಾಗಿದ್ದು, ಹಿಂಸಾಚಾರದ ಮರುದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕೋಮು ಅಶಾಂತಿಯನ್ನು ಪ್ರಚೋದಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಪೋಸ್ಟ್ಗಳು ಮತ್ತು ವೀಡಿಯೊಗಳು ಸೇರಿದಂತೆ 140 ಕ್ಕೂ ಹೆಚ್ಚು ಆಕ್ಷೇಪಾರ್ಹ ವಿಷಯಗಳನ್ನು ಮಹಾರಾಷ್ಟ್ರ ಸೈಬರ್ ಸೆಲ್ ನಾಗುರ ಪೊಲೀಸರ ಸಮನ್ವಯದೊಂದಿಗೆ ಗುರುತಿಸಿದೆ. ಇದೀಗ ಆಕ್ಷೇಪಾರ್ಹ ಪೋಸ್ಟ್ ಮಾಡಿದವರಿಗೆ ನೋಟಿಸ್ ಕಳುಹಿಸಲಾಗಿದೆ

RELATED ARTICLES

Latest News