ಬೆಂಗಳೂರಿನ ಮೆಟ್ರೋ ಪ್ರಯಾಣಿಕರೇ ಇಲ್ಲಿ ಗಮನಿಸಿ

ಬೆಂಗಳೂರು,ಸೆ.3-ಕೇಂದ್ರ ಸರ್ಕಾರ ಅನ್ಲಾಕ್ 4.0ನಲ್ಲಿ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿದೆ. ಸೆಪ್ಟೆಂಬರ್ 7ರಿಂದ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಕೂಡ ಸಂಚಾರ ನಡೆಸಲಿದೆ. ಇದಕ್ಕಾಗಿ ಎಸ್‍ಒಪಿ ಜಾರಿ ಮಾಡಿದ್ದು, ಪ್ರಯಾಣಿಕರಿಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.  ಕೊರೊನಾ ಕಾರಣಕ್ಕೆ ಮಾ.22ರಿಂದ ಮೆಟ್ರೋ ಸಂಚಾರವನ್ನು ರದ್ದುಪಡಿಸಲಾಗಿತ್ತು.

ಇದೀಗ ಅನ್ಲಾಕ್ 4ರ ಅನ್ವಯ ಸೆ.7ರಿಂದ ಹಂತ ಹಂತವಾಗಿ ಮೆಟ್ರೋ ರೈಲು ಓಡಿಸಲು ಯೋಜನೆ ರೂಪಿಸಲಾಗಿದೆ. ಸೆ. 7ರಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ಆರಂಭವಾದರೆ, ಸೆ. 9ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ.

ನೇರಳೆ ಮಾರ್ಗ: ಸೆ. 7ರಿಂದ  ಬೆಳಗ್ಗೆ 8ರಿಂದ ಬೆಳಗ್ಗೆ 11ರವರೆಗೆ ಮತ್ತು ಸಂಜೆ 4.30ರಿಂದ ರಾತ್ರಿ 7.30ರರೆಗೆ 5 ನಿಮಿಷಗಳ ಅಂತರಲ್ಲಿ ಮಾತ್ರ ಮೆಟ್ರೋ ಓಡಾಟ ಇರಲಿದೆ.

ಹಸಿರು ಮಾರ್ಗ: ಸೆ. ರಾತ್ರಿ9 – 10ರವರೆಗೆಮ ಬೆಳಗ್ಗೆ 8ರಿಂದ 11ರವರೆಗೆ, ಸಂಜೆ 4,30ರಿಂದ ರಾತ್ರಿ 07.30ರವರೆಗೆ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಓಡಾಟ ನಡೆಸಲಿದೆ.

ಇನ್ನು ಸೆ. 11ರಿಂದ ಎಲ್ಲಾ ರೈಲುಗಳು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಎರಡು ಮಾರ್ಗದಲ್ಲಿ ಓಡಾಟ ನಡೆಸಲಿವೆ. ಜನದಟ್ಟಣೆಯ ಅವಧಿಯಲ್ಲಿ ಪ್ರತೀ 5 ನಿಮಷಕ್ಕೊಮ್ಮೆ ಹಾಗೂ ಬೇರೆ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ಮೆಟ್ರೋ ಓಡಾಟ ಇರಲಿದೆ. ಇದಲ್ಲದೇ ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲ ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ತಪ್ಪಿಸುವ ನಿರ್ಧಾರಗಳನ್ನು ಮೆಟ್ರೋ ರೈಲು ನಿಗಮಗಳು ಕೈಗೊಳ್ಳಬಹುದು.

ನಿಲ್ದಾಣದ ಹೊರಗಿನ ಜನಸಂದಣಿ ನಿಯಂತ್ರಿಸಲು ಮತ್ತು ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಂದಿಗೆ ಮೆಟ್ರೋ ರೈಲು ನಿಗಮಗಳು ನಿಕಟ ಸಂಪರ್ಕ ಹೊಂದಿರಬೇಕು ಎಂದು ಮೆಟ್ರೋ ನಿಗಮ ಮಂಡಳಿಗಳಿಗೆ ಸೂಚಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ಮೆಟ್ರೋ ಪುನಾರಂಭ ಮಾಡಿದ್ದು ಸಾಕಷ್ಟು ಎಚ್ಚರಿಯನ್ನು ವಹಿಸಲಾಗುತ್ತಿದೆ. ಸೆಪ್ಟೆಂಬರ್ 11ರಿಂದ ಎಂದಿನಂತೆ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಸೇವೆ ಒದಗಿಸಲಿವೆ.

# ಮೆಟ್ರೋ ಪ್ರಯಾಣಿಕರಿಗೆ ಷರತ್ತುಗಳು ಅನ್ವಯ:
ಮೆಟ್ರೋದಲ್ಲಿ ಓಡಾಟ ನಡೆಸುವರು ರೀಚಾರ್ಚ್‍ನೊಂದಿಗೆ ಸ್ಮಾರ್ಟ್ ಕಾಡ್ರ್ನಲ್ಲಿ ಪ್ರಯಾಣ, ಮೆಟ್ರೋದಲ್ಲಿ ಓಡಾಟ ನಡೆಸುವವರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ, ಪ್ರವೇಶ ದ್ವಾರ, ನಿರ್ಗಮನ ಹಾಗೂ ಫ್ಲಾಟ್ ಫಾರ್ಮ್‍ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು, ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು.

50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ, 6 ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ, ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಲು ಅವಕಾಶ, ಎಲ್ಲಾ ಪ್ರಯಾಣಿಕರಿಗೆ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತದೆ, ಎಸ್ಕೇಲೇಟರ್‍ಗಳನ್ನು ಬಳಸುವ ಪ್ರಯಾಣಿಕರು ತಮ್ಮ ಮುಂದಿರುವ ಪ್ರಯಾಣಿಕರಿಂದ ಒಂದು ಮೆಟ್ಟಿಲು ಅಂತರ ಕಾಪಾಡಬೇಕು,

60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟ, ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದರೆ ಅಂತಹ ನಿಲ್ದಾಣಗಳಲ್ಲಿ ರೈಲು ನಿಲ್ಲಲ್ಲ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು, ಮಾಸ್ಕ್ ಧರಿಸದವರಿಗೆ ಪಾವತಿ ಆಧಾರದ ಮೇಲೆ ಮಾಸ್ಕ್ ಪೂರೈಸುವ ವ್ಯವಸ್ಥೆಯನ್ನು ಮೆಟ್ರೋ ರೈಲು ನಿಗಮಗಳು ಮಾಡಬಹುದು.

ನಿಲ್ದಾಣಗಳಿಗೆ ಪ್ರವೇಶಿಸುವಾಗ ದೇಹದ ಉಷ್ನಾಂಶ ತಪಾಸಣೆ, ಲಕ್ಷಣರಹಿತ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ರೋಗಲಕ್ಷಣ ಹೊಂದಿರುವವರಿಗಾಗಿ ಪರೀಕ್ಷೆ/ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಕೋವಿಡ್ ಆರೈಕೆ ಕೇಂದ್ರ/ಆಸ್ಪತ್ರೆಗೆ ಹೋಗಲು ಸೂಚಿಸಲಾಗುತ್ತದೆ. ಆರೋಗ್ಯ ಸೇತು ಅಪ್ಲಿಕೇಶನ್ನ ಹೊಂದಿರಬೇಕು.

ಎಲೆಕ್ಟ್ರಾನಿಕ್ / ಪ್ರಿಂಟ್ / ಸೋಷಿಯಲ್ ಮೀಡಿಯಾ, ಪೋಸ್ಟರ್, ಬ್ಯಾನರ್, ಹೋರ್ಡಿಂಗ್, ವೆಬ್ಸೈಟ್ ಇತ್ಯಾದಿಗಳ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಅಭಿಯಾನವನ್ನು ಪ್ರಾರಂಭಿಸಲಾಗುವುದು. ನಿಲ್ದಾಣದ ಹೊರಗಿನ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಆಕಸ್ಮಿಕಗಳನ್ನು ಎದುರಿಸಲು ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಂದಿಗೆ ನಿಕಟ ಸಂಬಂಧ.

ಮೇಲಿನ ಮಾರ್ಗಸೂಚಿಗಳ ಆಧಾರದ ಮೇಲೆ ದೆಹಲಿ, ನೋಯ್ಡಾ, ಚೆನ್ನೈ, ಕೊಚ್ಚಿ, ಬೆಂಗಳೂರು, ಮುಂಬೈ ಲೈನ್ -1, ಜೈಪುರ, ಹೈದರಾಬಾದ್, ಮಹಾ ಮೆಟ್ರೋ (ನಾಗ್ಪುರ) ಕೋಲ್ಕತಾ, ಗುಜರಾತ್ ಮತ್ತು ಯುಪಿ ಮೆಟ್ರೋ (ಲಖನೌ) ತಮ್ಮ ಮಾರ್ಗಸೂಚಿಗಳನ್ನು ಸಿದ್ಧಪಡಿಸಿವೆ.

ಪ್ರಯಾಣಿಕರ ಬಳಕೆಗಾಗಿ ನಿಲ್ದಾಣಗಳಿಗೆ ಪ್ರವೇಶಿಸುವಾಗ ಸ್ಯಾನಿಟೈಜರ್ಗಳನ್ನು ಒದಗಿಸುವುದು. ಮಾನವ ಇಂಟರ್ಫೇಸ್ ಹೊಂದಿರುವ ಎಲ್ಲಾ ಪ್ರದೇಶಗಳ ನೈರ್ಮಲ್ಯೀಕರಣ. ಉಪಕರಣಗಳು, ರೈಲು, ಕೆಲಸದ ಪ್ರದೇಶ, ಲಿಫ್ಟ್, ಎಸ್ಕಲೇಟರ್ಗಳು, ಹ್ಯಾಂಡ್ರೈಲ್, ಎಎಫ್ಸಿ ಗೇಟ್, ಶೌಚಾಲಯ ಇತ್ಯಾದಿಗಳನ್ನು ನಿಯಮಿತವಾಗಿ ಮಾಡಬೇಕಾಗಿದೆ.

ಸ್ಮಾರ್ಟ್ ಕಾರ್ಡ್ ಬಳಕೆ ಮತ್ತು ನಗದು ರಹಿತ / ಆನ್‍ಲೈನ್ ವಹಿವಾಟುಗಳಿಗೆ ಪ್ರೋತ್ಸಾಹ. ಟೋಕನ್‍ಗಳು ಮತ್ತು ಪೇಪರ್ ಸ್ಲಿಪ್‍ಗಳು / ಟಿಕೆಟ್‍ಗಳನ್ನು ಸರಿಯಾದ ನೈರ್ಮಲ್ಯೀಕರಣದೊಂದಿಗೆ ಬಳಸಬೇಕು, ಸಾಮಾಜಿಕ ದೂರವನ್ನು ಖಾತ್ರಿಪಡಿಸುವ ಸುಗಮ ಬೋರ್ಡಿಂಗ್, ಡಿಬೋರ್ಡಿಂಗ್‍ನ್ನು ಸಕ್ರಿಯಗೊಳಿಸಲು ಮೆಟ್ರೋ ರೈಲು ನಿಗಮಗಳು ನಿಲ್ದಾಣಗಳಲ್ಲಿ ಸಿಬ್ಬಂದಿ ನಿಯೋಜನೆ ಮಾಡಬೇಕು.

ಪ್ರಯಾಣಿಕರು ಕನಿಷ್ಟ ಸಾಮಾನುಗಳೊಂದಿಗೆ ಪ್ರಯಾಣಿಸಲು ಮತ್ತು ಸುಲಭ ಮತ್ತು ತ್ವರಿತ ಸ್ಕ್ಯಾನಿಂಗ್‍ಗಾಗಿ ಲೋಹದ ವಸ್ತುಗಳನ್ನು ಒಯ್ಯುವುದನ್ನು ತಪ್ಪಿಸಲು ಸೂಚಿಸಬೇಕು.