Thursday, December 26, 2024
Homeರಾಜ್ಯಶೀಘ್ರದಲ್ಲೇ ಕೆಎಂಎಫ್‌ ದೋಸೆಹಿಟ್ಟು ಮಾರುಕಟ್ಟೆಗೆ

ಶೀಘ್ರದಲ್ಲೇ ಕೆಎಂಎಫ್‌ ದೋಸೆಹಿಟ್ಟು ಮಾರುಕಟ್ಟೆಗೆ

ಬೆಂಗಳೂರು, ಡಿ.7- ಶೀಘ್ರದಲ್ಲೇ ದೋಸೆಹಿಟ್ಟು ಉತ್ಪನ್ನ ಮಾರಾಟ ಮಾಡುವುದಾಗಿ ಕೆಎಂಎಫ್‌ ಅಧ್ಯಕ್ಷ ಭೀಮಾನಾಯಕ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಮ ದೋಸೆ ಹಿಟ್ಟು ಉತ್ಪನ್ನ ಕಾಣಲಿದೆ. ನಮಗೆ ತಿರುಪತಿಯಲ್ಲಾದ ಅಡ್ಡಿಯಿಂದ ನಾವು ದೋಸೆಹಿಟ್ಟನ್ನು ಅನ್ಯ ರಾಜ್ಯದಲ್ಲಿ ಮಾರಾಟಕ್ಕೆ ಹಿಂದೇಟು ಹಾಕಿದ್ದೆವು. ಆದರೆ ಯಾವುದೇ ರೀತಿಯ ಲಾಬಿ, ಒತ್ತಡ ನಮ ಮೇಲೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ದೋಸೆಹಿಟ್ಟು ಮಾರಾಟದಲ್ಲಿ ನಮಗೆ ಆಹಾರ ಇಲಾಖೆಯಿಂದ ಕೆಲವು ಅಂಶಗಳ ಸೇರ್ಪಡೆಗೆ ಸೂಚನೆ ಇದೆ. ಅದರ ಬಗ್ಗೆ ನಾವು ಸಭೆ ಮಾಡಿ ಸೂಕ್ತ ತೀರ್ಮಾನ ಮಾಡುತ್ತೇವೆ. ಆದರೆ, ಇಲ್ಲದ ಆರೋಪವನ್ನು ಬಿಜೆಪಿ ಮಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲೂ ಕೂಡಾ ವಿನಾಕಾರಣ ರಾಜಕಾರಣ ಮಾಡಿ ಜನರಿಗೆ ತಪ್ಪು ಸಂದೇಶ ರವಾನೆಯಾಗುವಂತೆ ನಡೆದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರ ವರ್ಗಾ ವಣೆಗೂ ಇದಕ್ಕೂ ಸಂಬಂಧ ಇಲ್ಲ. ಬಿಜೆಪಿಯವರು ಮೊದಲು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬಾಯಿ ಮುಚ್ಚಿಸಲಿ. ನಿಮಲ್ಲಿರುವ ಒಡಕು ಸರಿಪಡಿಸಿಕೊಳ್ಳಿ. ಬದಲಾಗಿ ಕೆಎಂಎಫ್‌ ಸಂಸ್ಥೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬಿಡಿ. ಇಲ್ಲಿ ಯಾವುದೇ ವಿವಾದ, ಅನುಮಾನದ ನಡೆ ಇಲ್ಲ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದರು.

RELATED ARTICLES

Latest News