ನವದೆಹಲಿ,ಏ.11- 26/11ರ ಮುಂಬೈ ದಾಳಿಯ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಮೂಲದ `ಭಯೋತ್ಪಾದಕ ತಹದ್ದೂರ್ ರಾಣಾನ ಕುರಿತು ಅಂದಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು, 2011ರಲ್ಲಿ ಮಾಡಿದ್ದ ಟ್ವಿಟ್ ವೊಂದು ಇದೀಗ ವೈರಲ್ಲಾಗಿದೆ.
ತಹವೂರ್ ರಾಣಾ ಭಾರತಕ್ಕೆ ಬಂದಿಳಿಯುತ್ತಿದ್ದಂತೇ, ನರೇಂದ್ರಮೋದಿ ಅವರ 14 ವರ್ಷಗಳ ಹಿಂದಿನ ಟ್ವಿಟ್ ಇದಾಗಿದೆ.
2011ರಲ್ಲಿ ಅಮೆರಿಕದ ನ್ಯಾಯಾಲಯವು, ಮುಂಬೈ ದಾಳಿ ಆರೋಪದಿಂದ ತಹವೂರ್ ರಣಾನನ್ನು ದೋಷಮುಕ್ತಗೊಳಿಸಿತ್ತು. ಇದನ್ನು ಖಂಡಿಸಿ ಟ್ವಿಟ್ ಮಾಡಿದ್ದ ಪ್ರಧಾನಿ ಮೋದಿ, ಅಂದಿನ ಆಡಳಿತಾರೂಢ ಯುಪಿಎ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಖಂಡಿಸಿದ್ದರು.
ತಹವೂರ್ ರಾಣಾನನ್ನು ಅಮೆರಿಕ ಮುಗ್ಧ ಎಂದು ಘೋಷಿಸುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಅವಮಾನಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿದೇಶಾಂಗ ನೀತಿ ದುರ್ಬಲವಾಗಿದ್ದು, ಮುಂಬೈ ದಾಳಿಯಲ್ಲಿ ರಾಣಾನ ಪಾತ್ರದ ಬಗ್ಗೆ ಆಮೆರಿಕಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ.. ಎಂದು ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಟ್ವಿಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದರು.
ಮುಂಬೈ ದಾಳಿಯಲ್ಲಿ ತಹಪುರ್ ಠಾಣಾ ಮುಗ್ಧ ಎಂದು ಅಮೆರಿಕ ಘೋಷಿಸಿರುವುದು ಭಾರತದ ಸಾರ್ವಭೌಮತ್ವಕ್ಕೆ ಮಾಡಿದ ಅವಮಾನ. ಇದು ದೊಡ್ಡ ವಿದೇಶಾಂಗ ನೀತಿಯ ಹಿನ್ನಡೆ ಎಂದು ಮೋದಿ 2011ರಲ್ಲಿ ಪೋಸ್ಟ್ ಮಾಡಿದ್ದರು.
2011ರಲ್ಲಿ ಅಮೆರಿಕದ ನ್ಯಾಯಾಲಯವು ತಹವೂರ್ ರಾಣಾ ಮುಂಬೈ ದಾಳಿಯ ಸಂಚಿನಲ್ಲಿ ನೇರವಾಗಿ ಭಾಗಿಯಾಗಿರುವುದು ಸಾಬೀತಾಗಿಲ್ಲ ಎಂದು ಹೇಳಿತ್ತು. ಆದರೆ ದಾಳಿಗೆ ಕಾರಣವಾದ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ್ದಕ್ಕಾಗಿ, ಆತನನ್ನು ದೋಷಿ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ಅಮೆರಿಕದ ನಡೆಯನ್ನು ಟೀಕಿಸಿದ್ದರು.
ಈಗ ತಹವೂರ್ ರಾಣಾ ಭಾರತಕ್ಕೆ ಬಂದಿಳಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಧಾನಿ ಮೋದಿ ಅವರ 17 ವರ್ಷಗಳ ಹಿಂದಿನ ಈ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ರಾಣಾನನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.
ಮಾತಿಗೆ ತಕ್ಕಂತೆ ನಡೆಯುವ ನಾಯಕ. ಕ್ಯಾಪ್ಟನ್ ನನ್ನ ಕ್ಯಾಪ್ಟನ್ ಎಂದು ಓರ್ವ ಎಕ್ಸ್ ಬಳಕೆದಾರ, ಪ್ರಧಾನಿ ಮೋದಿ ಅವರನ್ನು ಹೊಗಳಿ ಟ್ವಿಟ್ ಮಾಡಿದ್ದಾನೆ. ಇನ್ನೂ ಕೆಲವರು ಮೋದಿ ಹೈ ತೋ ಮುಮ್ಮಿನ್ ಹೈ (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಹೇಳಿಕೆಯನ್ನು ಪ್ರತಿಧ್ವನಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ತಹವೂರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪಪ್ ಆಡಳಿತ ಖಚಿತಪಡಿಸಲಾಗಿತ್ತು. ಇದೀಗ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ರಾಣಾ ವಿಶೇಷ ವಿಮಾನದ ಮೂಲಕ ದೆಹಲಿಗೆ ಬಂದಿಳಿದಿದ್ದಾನೆ. ಆತನನ್ನು 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶಕ್ಕೆ ನೀಡಲಾಗಿದೆ.