ತುಂಬಿದ ಉಡುತೊರೆ ಜಲಾಶಯಕ್ಕೆ ಗಂಗೆ ಪೂಜೆ

ಹನೂರು, ಡಿ.12- ಕ್ಷೇತ್ರ ವ್ಯಾಪ್ತಿ ಅಜ್ಜೀಪುರ ಸಮೀಪ ಉಡುತೊರೆ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಆರ್. ನರೇಂದ್ರ ಗಂಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಉಡುತೊರೆ ಜಲಾಶಯ 6217 ಹೆಕ್ಟರ್ ಪ್ರದೇಶ ಹೊಂದಿದ್ದು , ಲೊಕ್ಕನಹಳ್ಳಿ, ಒಡೆಯರ್ ಪಾಳ್ಯ ಭಾಗದ ದಟ್ಟಾರಣ್ಯ ಪ್ರದೇಶದಲ್ಲಿ ಹೇರಳವಾಗಿ ಮಳೆ ಸುರಿದ ಪರಿಣಾಮ ಉಡುತೊರೆ ಜಲಾಶಯ ಭರ್ತಿಯಾಗಿದೆ.

ಈ ಜಲಾಶಯದಿಂದ ಸಾವಿರಾರು ಎಕರೆ ಜಮೀನಿನ ಪ್ರದೇಶಗಳಿಗೆ ಅನುಕೂಲವಾಗಲಿದ್ದು, ರೈತರು ನೀರನ್ನು ಫೋಲು ಮಾಡದೇ ಕೃಷಿ ಬಳಕೆಗೆ ಸದ್ಭಳಕೆ ಮಾಡಿಕೋಳ್ಳಬೇಕು ಎಂದರು. ಈ ವೇಳೆ ಆ ಭಾಗದ ರೈತ ಮುಖಂಡರು ಅಜ್ಜಿಪುರ ಮುಖ್ಯರಸ್ತೆಯಿಂದ ಉಡುತೊರೆ ಜಲಾಶಯದವರೆಗೂ ರಸ್ತೆ ತುಂಬಾ ಹದಗೆಟ್ಟಿದ್ದು ತಿರುಗಾಡಲು ತೊಂದರೆಯಾಗಿದೆ.

ಜಲಾಶಯದಿಂದ ಈ ಭಾಗದ ಜಮೀನುಗಳಿಗೆ ಎಂಟು ದಿನಕ್ಕೊಮ್ಮೆ ನೀರು ಬಿಡುಗಡೆ ಆಗಬೇಕು. ಎಡ ಮತ್ತು ಬಲದಂಡ ಕಾಲುವೆಗಳಲ್ಲಿ ಗಿಡಗಳು ಹಾಗೂ ಹೂಳು ತುಂಬಿರುತ್ತದೆ. ಇದರ ಸ್ವಚ್ಛತೆಗೆ ತುರ್ತು ಕ್ರಮ ವಹಿಸಿ ಎಡ ಮತ್ತು ಬಲದಂಡ ಕಾಲುವೆಗಳಿಗೆ ನೀರು ಬಿಡಲು ಇರುವ ಒಬ್ಬರ ಜತೆಗೆ ಮತ್ತೊಬ್ಬರನ್ನು ನೇಮಿಸಿಕೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಿದರು.
ರೈತರ ಸಮಸ್ಯೆ ಆಲಿಸಿದ ಶಾಸಕ ಆರ್.ನರೇಂದ್ರ ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು 116 ಕೋಟಿ ರೂ.ಗಳ ಅನುಧಾನ ಅನುಮೋದನೆಯಾಗಿತ್ತು.

ಈಗ ಅದನ್ನು ಇಂದಿನ ಸರ್ಕಾರ ತಡೆ ಹಿಡಿದಿದೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿನ ದಿನದಲ್ಲಿ ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಮೂಲಕ ರೈತರಿಗೆ ಅನುಕೂಲಕೆ ನೆರವಾಗುವುದಾಗಿ ತಿಳಿಸಿದರು.

ನೀರಾವರಿ ಇಲಾಖೆ ಎಇಇ ಪ್ರಶಾಂತ್, ಎಇ ವಿಕಾಸ್ ಅಜ್ಜೀಪುರ ಗ್ರಾ.ಪಂ. ಕಾರ್ಯದರ್ಶಿ ಮಹೇಂದರ್, ಎಸ್‍ಡಿಎ ದಾಸಣ್ಣ ತಾ.ಪಂ.ಅಧ್ಯಕ್ಷ ರಾಜೇಂದ್ರ ಸದಸ್ಯ ನಟರಾಜ್, ಜಿ.ಪಂ. ಮಾಜಿ ಉಪಾಧ್ಯಕ್ಷ ಬಸವರಾಜು, ಸೂಳೇರಿಪಾಳ್ಯ ಗ್ರಾ.ಪಂ. ಅಧ್ಯಕ್ಷೆ ಸುಧಾಮಣಿ, ತಾ.ಪಂ. ಮಾಜಿ ಅಧ್ಯಕ್ಷ ಮುರುಳಿ ಹನೂರು ಪ.ಪಂ. ಸದಸ್ಯ ಗಿರೀಶ್ ಮುಖಂಡರಾದ ನಾಗರಾಜ್, ಸೋಮಣ್ಣ, ಇನ್ನಿತರರು ಹಾಜರಿದ್ದರು.