ನವದೆಹಲಿ,ಡಿ.28- ಕನ್ನಡ ನಾಡು-ನುಡಿ ನಮ ಹೆಮೆ, ಕನ್ನಡ ಭೂಮಿ ನಮ ಹೆಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘಿಸಿದ ಅವರು,ದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ವಾಸವಿದ್ದಾರೆ. ದುಬೈ ಕನ್ನಡಿಗರು ತಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡರೂ ನಮ್ಮ ಮಕ್ಕಳು ಟೆಕ್ವರ್ಲ್ಡ್ ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ ನೆಲದ ಭಾಷೆ ಕನ್ನಡದಿಂದ ದೂರ ಆಗುತ್ತಿದ್ದಾರೆಯೇ? ಎಂಬ ಆತಂಕ ದುಬೈ ಕನ್ನಡಿಗರಿಗೆ ಬಂತು. ಗಿನಿಂದಲೇ ಅವರು ದುಬೈನಲ್ಲಿ ಕನ್ನಡ ಪಾಠಶಾಲೆ ಆರಂಭ ಮಾಡಿದರು ಎಂದು ನೆನೆಪಿಸಿದರು.
ಕನ್ನಡ ಪಾಠಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸುತ್ತಿದ್ದಾರೆ, ಕನ್ನಡ ಓದು, ಬರಹ, ಮಾತನಾಡುವುದು ಕಲಿಸುತ್ತಿದ್ದಾರೆ. ಈಗ ಆ ಪಾಠಶಾಲೆಯಲ್ಲಿ ಒಂದು ಸಾವಿರ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಕೆಲಸವಾಗುತ್ತಿದೆ. ಈ ಮೂಲಕ ದುಬೈನಲ್ಲಿ ಇರುವ ಕನ್ನಡಿಗರು ಭಾಷಾಭಿಮಾನ ಮೆರೆಯುತ್ತಿದ್ದಾರೆ ಎಂದರು.
ಇನ್ನು ತಮ ಮನ್ಕೀ ಬಾತ್ನಲ್ಲಿ ಮೋದಿ ಅವರು, ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯ ಕಾರ್ಯ ಚಟುವಟಿಕೆಗಳ ಬಗ್ಗೆ ಹೊಗಳಿದ್ದು ವಿಶೇಷವಾಗಿತ್ತು. ಐಐಎಸ್ಸಿಯಲ್ಲಿ ಕೇವಲ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವ ಸಂಗೀತ ತರಗತಿಗಳನ್ನು ನಡೆಸಲಾಗುತ್ತಿದೆ. ವಿಜ್ಞಾನದ ಜತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಸಲಾಗುತ್ತದೆ. ವಿಜ್ಞಾನ ಮತ್ತು ಸಂಗೀತ ಹೇಗೆ ಒಟ್ಟಿಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದರು.
ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಭಾರತ ಮಹತ್ವದ ಸಾಧನೆಗಳನ್ನು ಮಾಡಿದೆ. ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯರಾಗಿದ್ದು, ಇದು ದೇಶಕ್ಕೆ ಹೆಮೆಯ ವಿಷಯ ಎಂದರು. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಹೊಸ ಉಪಕ್ರಮಗಳು 2025ರಲ್ಲಿ ಆರಂಭವಾಗಿವೆ. ಭಾರತದಲ್ಲಿ ಚಿರತೆಗಳ ಸಂಖ್ಯೆ ಈಗ 30ಕ್ಕಿಂತ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಮಿಳು ಕರಕಲಂ:
ಈ ವರ್ಷ ವಾರಾಣಸಿಯಲ್ಲಿ ನಡೆದ ಕಾಶಿ ತಮಿಳು ಸಮಾಗಮ ಸಂದರ್ಭದಲ್ಲಿ, ತಮಿಳು ಕಲಿಕೆಗೆ ವಿಶೇಷ ಒತ್ತು ನೀಡಲಾಯಿತು. ತಮಿಳು ಕಲಿಯಿರಿ ತಮಿಳು ಕರಕಲಂ ಎಂಬ ವಿಷಯದಡಿ ವಾರಣಾಸಿಯ 50ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಶೇಷ ಅಭಿಯಾನ ನಡೆಸಲಾಯಿತು. ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ. ಇಂದು, ದೇಶದ ಇತರ ಭಾಗಗಳಲ್ಲಿ, ಯುವಕರು ಮತ್ತು ಮಕ್ಕಳಲ್ಲಿ ತಮಿಳು ಕಡೆಗೆ ಹೊಸ ಆಕರ್ಷಣೆ ಕಾಣುತ್ತಿದೆ. ಇದು ಭಾಷೆಯ ಶಕ್ತಿ. ಇದು ಭಾರತದ ಏಕತೆ ಎಂದರು.
ಕುಂಭಮೇಳ – ರಾಮಮಂದಿರ ಸಂಸ್ಕೃತಿಯ ಶಕ್ತಿ
ಈ ವರ್ಷದ ಆರಂಭದಲ್ಲಿ ನಡೆದ ಪ್ರಯಾಗರಾಜ್ ಮಹಾ ಕುಂಭಮೇಳ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿತು ಎಂದು ಪ್ರಧಾನಿ ಮೋದಿ ಹೇಳಿದರು. ನಂಬಿಕೆ, ಸಂಸೃ್ಕತಿ ಮತ್ತು ಪರಂಪರೆ ಒಂದಾಗಿ ಕಾಣಿಸಿಕೊಂಡವು. ವರ್ಷದ ಕೊನೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಧ್ವಜಾರೋಹಣ ಸಮಾರಂಭವು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಹೆಮೆಯನ್ನು ತುಂಬಿತು ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣ: ಕ್ರೀಡಾ ಸಾಧನೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, 2025 ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿದೆ. ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್್ಸ ಟ್ರೋಫಿಯನ್ನು ಗೆದ್ದಿತು. ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಮಹಿಳಾ ಅಂಧರ ಕ್ರಿಕೆಟ್ ತಂಡವೂ ವಿಶ್ವಕಪ್ ಗೆದ್ದು ದೇಶಕ್ಕೆ ಹೆಮೆ ತಂದಿತು. ಏಷ್ಯಾ ಕಪ್ ಟಿ20ಯಲ್ಲೂ ಭಾರತದ ತ್ರಿವರ್ಣ ಧ್ವಜ ಹೆಮೆಯಿಂದ ಹಾರಿತು ಎಂದು ಹೊಗಳಿದರು.
ಭದ್ರತೆ ವಿಷಯದಲ್ಲಿ ರಾಜಿ ಇಲ್ಲ: ಭದ್ರತೆ ವಿಷಯದಲ್ಲಿ ಭಾರತ ಯಾವುದೇ ರಾಜಿ ಮಾಡಿಕೊಳ್ಳುವ ವಿಷಯವೇ ಇಲ್ಲ ಎಂಬುದನ್ನು ಆಪರೇಷನ್ ಸಿಂಧೂರ್ ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕಾರ್ಯಾಚರಣೆ ವೇಳೆ ವಿಶ್ವದ ಮೂಲೆ ಮೂಲೆಯಿಂದ ಭಾರತ ಮಾತೆಯ ಮೇಲಿನ ಪ್ರೀತಿ ಮತ್ತು ಭಕ್ತಿಯ ದೃಶ್ಯಗಳು ಕಂಡುಬಂದವು ಎಂದರು. ಇದೇ ವೇಳೆ ವಂದೇ ಮಾತರಂ 150 ವರ್ಷಗಳನ್ನು ಪೂರೈಸಿದ ಸಂದರ್ಭವೂ ದೇಶಭಕ್ತಿಯ ಭಾವನೆ ಹೆಚ್ಚಿಸಿದುದಾಗಿ ಮೋದಿ ಹೇಳಿದರು.
ಯುವಕರ ಆಲೋಚನೆಗಳು ಅಭಿವೃದ್ಧಿ ಹೊಂದಿದ ಭಾರತದ ದೊಡ್ಡ ಶಕ್ತಿ. ಮುಂದಿನ ತಿಂಗಳು 12ರಂದು ಸ್ವಾಮಿ ವಿವೇಕಾನಂದರ ಜನದಿನದಂದು ನಡೆಯುವ ಅಭಿವೃದ್ಧಿ ಹೊಂದಿದ ಭಾರತ ಯುವ ನಾಯಕರ ಸಂವಾದದಲ್ಲಿ ತಾವು ಖಂಡಿತ ಭಾಗವಹಿಸುವುದಾಗಿ ಪ್ರಧಾನಿ ಹೇಳಿದರು.
2026ನೇ ವರ್ಷ ಸಮೀಪಿಸುತ್ತಿರುವುದನ್ನು ಉಲ್ಲೇಖಿಸಿದ ಮೋದಿಯವರು, 2025ರಲ್ಲಿ ಭಾರತ ಕಂಡ ಸಾಧನೆಗಳು ತಮ ಮನಸ್ಸಿನಲ್ಲಿ ಸುತ್ತಾಡುತ್ತಿವೆ. 2025 ಪ್ರತಿಯೊಬ್ಬ ಭಾರತೀಯನಿಗೂ ಹೆಮೆ ನೀಡಿದ ವರ್ಷವಾಗಿದೆ. ರಾಷ್ಟ್ರೀಯ ಭದ್ರತೆಯಿಂದ ಹಿಡಿದು ಕ್ರೀಡಾ ಸಾಧನೆಗಳವರೆಗೆ, ವಿಜ್ಞಾನ ಪ್ರಯೋಗಾಲಯಗಳಿಂದ ವಿಶ್ವದ ಅತಿದೊಡ್ಡ ವೇದಿಕೆಗಳವರೆಗೆ ಭಾರತ ಎಲ್ಲೆಡೆ ತನ್ನ ಬಲವಾದ ಛಾಪು ಮೂಡಿಸಿದೆ ಎಂದು ಮೋದಿ ಹೇಳಿದರು.
