Friday, January 23, 2026
Homeರಾಷ್ಟ್ರೀಯನಾಳೆಯಿಂದ ಸಂಸತ್‌ ಅಧಿವೇಶನ : ವೋಟ್‌ಚೋರಿ, ಕಾರ್‌ ಬಾಂಬ್‌ ಸ್ಫೋಟ ಪ್ರತಿಧ್ವನಿ!

ನಾಳೆಯಿಂದ ಸಂಸತ್‌ ಅಧಿವೇಶನ : ವೋಟ್‌ಚೋರಿ, ಕಾರ್‌ ಬಾಂಬ್‌ ಸ್ಫೋಟ ಪ್ರತಿಧ್ವನಿ!

ನವದೆಹಲಿ, ನ.30- ಸಂಸತ್ತಿನ ಚಳಿಗಾಲದ ಅಧಿವೇಶನ ಈ ಬಾರಿ ಕಾವೇರಲಿದ್ದು,ವಿಪಕ್ಷಗಳು ಸರ್ಕಾರದ ವಿರುದ್ದ ವೋಟ್‌ ಚೋರಿ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಲಿವೆ. ಬಿಹಾರ ಚುನಾವಣೆ ನಂತರ ಹೊಸ ಹುಮಸ್ಸಿನಲ್ಲಿರುವ ಎನ್‌ಡಿಎ ಸದಸ್ಯರು ವಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಸಿದ್ಧತೆ ಪೂರ್ಣಗೊಳಿಸಿದ್ದಾರೆ.

ಚುನಾವಣಾ ಆಯೋಗದ ವಿಶೇಷ ಮತದಾರರ ಪರಿಷ್ಕರಣೆ ಸುಪ್ರೀಂ ಕೋರ್ಟ್‌ ಸರಿಯಾದ ಕ್ರಮ ಎಂದು ಹೇಳಿದ್ದರೂ ವಿಪಕ್ಷ ಅದನ್ನು ಪರಾಮರ್ಶಿಸಿ ಸರ್ಕಾರಕ್ಕೆ ತಿರುಗೇಟು ನೀಡಲು ಮುಂದಾಗಿದೆ.

ಇದೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆದ ಕಾರ್‌ ಬಾಂಬ್‌ ಸ್ಪೋಟ ಮತ್ತು ಉಗ್ರರ ಸದೆಬಡಿದ ವಿಷಯದ ಬಗ್ಗೆ ಸದನಕ್ಕೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಇದಲ್ಲದೆ ಸರ್ಕಾರ ಸಾಧನೆಗಳ ಅನಾವರಣಕ್ಕೆ ಎನ್‌ಡಿಎ ಮಿತ್ರ ಪಕ್ಷಗಳು ಸಜ್ಜುಗೊಂಡಿವೆ ಆದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷ ಮುಂದಾಗಿದೆ.

ಅಧಿವೇಶನಕ್ಕೆ ಮುನ್ನಾದಿನ ಇಂದು ಕೇಂದ್ರ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಚುನಾವಣಾ ಆಯೋಗ ಮತ್ತುಆಡಳಿತಾರೂಢ ಬಿಜೆಪಿ ವೋಟ್‌ ಚೋರಿ ವಿಷಯವನ್ನು ಪ್ರತಿಪಕ್ಷಗಳು ಎತ್ತಲಿವೆ ಎಂದು ಕಾಂಗ್ರೆಸ್‌‍ ನಾಯಕ ಪ್ರಮೋದ್‌ ತಿವಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿರುವಾಗ ಮತ್ತು ಕೇವಲ ವೋಟ್‌ ಚೋರಿ ಅಲ್ಲ, ಬದಲಾಗಿ ವಿದೇಶಾಂಗ ನೀತಿ ಹದಗೆಟ್ಟಿದೆ.ಈ ಎಲ್ಲಾ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಧನಿ ಎತ್ತಲಾಗುವುದು ಎಂದು ಅವರು ಹೇಳಿದರು.
ಇದಕ್ಕೆ ತಿರುಗೇಟು ನೀಡಲು ನಾವು ಸಜ್ಜಾಗಿದ್ದೇವೆ,ಸುಗಮ ಕಲಾಪ ಮತ್ತು ಚರ್ಚೆಗೆ ನಾವು ಸಿದ್ದ ಎಂದು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿ ಡಿಸೆಂಬರ್‌ 19 ರಂದು ಮುಕ್ತಾಯಗೊಳ್ಳಲಿದೆ.ಉಭಯ ಸದನಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಾಂಪ್ರದಾಯಿಕ ಸರ್ವಪಕ್ಷ ಸಭೆಯನ್ನು ಕರೆಯಲಾಗಿದ್ದು, ಇದರಲ್ಲಿ ಪರಮಾಣು ವಲಯವನ್ನು ಖಾಸಗಿ ಹೂಡಿಕೆದಾರರಿಗೆ ಮುಕ್ತಗೊಳಿಸುವ ಮಸೂದೆಯಿಂದ ಹಿಡಿದು ಒಂದೇ ಉನ್ನತ ಶಿಕ್ಷಣ ಸಂಸ್ಥೆಯನ್ನು ರಚಿಸುವುದೂ ಸೇರಿ ವಿವಿಧ ಮಸೂದೆಗಳನ್ನು ಮಂಡಿಸಲು ಸರ್ಕಾರ ಯೋಜಿಸಿದೆ

RELATED ARTICLES

Latest News