Sunday, January 11, 2026
Homeರಾಷ್ಟ್ರೀಯಕಟ್ಟಡದಲ್ಲಿ ಬೆಂಕಿ ಅವಘಡ : ಒಂದೇ ಕುಟುಂಬದ ಮೂವರು ಸಾವು

ಕಟ್ಟಡದಲ್ಲಿ ಬೆಂಕಿ ಅವಘಡ : ಒಂದೇ ಕುಟುಂಬದ ಮೂವರು ಸಾವು

3 dead after fire breaks out in residential structure in Mumbai's Goregaon

ಮುಂಬೈ.ಜ.10– ಗೋರೆಗಾಂವ್‌ ಉಪನಗರದ ಭಗತ್‌ಸಿಂಗ್‌ ಪ್ರದೇಶದಲ್ಲಿ ಮುಂಜಾನೆ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಹರ್ಷದಾ ಪವಾಸ್ಕರ್‌ (19), ಕುಶಾಲ್‌ ಪವಾಸ್ಕರ್‌ (12) ಮತ್ತು ಸಂಜೋಗ್‌ ಪವಾಸ್ಕರ್‌ (48) ಎಂದು ಗುರುತಿಸಲಾಗಿದೆ.

ರಾಜಾರಾಮ್‌ ಲೇನ್‌ನಲ್ಲಿರುವ ಒಂದೇ ಅಂತಸ್ತಿನ ಕಟ್ಟಡದಲ್ಲಿ ಬೆಳಗಿನ ಜಾವ 3 ಗಂಟೆ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿದ್ದ ಬಹುತೇಖ ಗೃಹೋಪಯೋಗಿ ವಸ್ತುಗಳಿ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬರುವ ಮೊದಲೇ ಸ್ಥಳೀಯರು ನೀರಿನ ಬಕೆಟ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸಿದರು. ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಸಂಪೂರ್ಣವಾಗಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಸುಟ್ಟ ಗಾಯ ಮತ್ತು ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದ ಕುಟುಂಬದ ಮೂವರೂರನ್ನು ಟ್ರಾಮಾ ಕೇರ್‌ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರನ್ನು ಕೊನೆಯುಸಿರೆಳೆದಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News