ನವದೆಹಲಿ,ಜ.13- ದೇಶದ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದು,ಜನರು ನಡುಗಿದ್ದಾರೆ.ಕಳೆದ 3 ವರ್ಷಗಳಲ್ಲೇ ಇಂದು ಬೆಳಿಗ್ಗೆ ಅತ್ಯಂತ ಶೀತದ ದಿನ ಎಂದು ದಾಖಲಾಗಿದ್ದು, ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಪ್ರಕಾರ, ಕಳೆದ ಜನವರಿ 16, 2023ರಂದು ರಾಜಧಾನಿಯಲ್ಲಿ ಕನಿಷ್ಠ 1.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಇದು ಈವರೆಗಿನ ದಾಖಲೆ.ನಗರದ ಸಫ್ದರ್ಗಂಜ್ನಲ್ಲಿ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 4.4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ಐಎಂಡಿ ದತ್ತಾಂಶ ತೋರಿಸಿದೆ.
ಪಾಲಂನಲ್ಲಿ ಕನಿಷ್ಠ 4 ಡಿಗ್ರಿ ಸೆಲ್ಸಿಯಸ್ ತಾಪಮಾನ, ಸಾಮಾನ್ಯಕ್ಕಿಂತ 3.3 ಡಿಗ್ರಿ ಸೆಲ್ಸಿಯಸ್ ಮತ್ತು ಲೋಧಿ ರಸ್ತೆಯಲ್ಲಿ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್ ತಾಪಮಾನ, ಸಾಮಾನ್ಯಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4.5 ರಿಂದ 6.4 ಡಿಗ್ರಿಗಳಷ್ಟು ಕಡಿಮೆಯಾದಾಗ ಶೀತ ತರಂಗ ಪರಿಸ್ಥಿತಿಗಳನ್ನು ಘೋಷಿಸಲಾಗುತ್ತದೆ.
ಬುಧವಾರವೂ ದೆಹಲಿಯಲ್ಲಿ ಶೀತ ತರಂಗ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ದತ್ತಾಂಶದ ಪ್ರಕಾರ, ದೆಹಲಿಯ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ವರ್ಗಕ್ಕೆ ಹದಗೆಟ್ಟಿದ್ದು, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 337 ಕ್ಕೆ ಇಳಿದಿದೆ.
ಆನಂದ್ ವಿಹಾರ್ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು 411 ರ ವಾಯು ಗುಣಮಟ್ಟವನ್ನು ದಾಖಲಿಸಿದ್ದು, ಇದು ಗಂಭೀರ ವರ್ಗಕ್ಕೆ ಇಳಿದಿದೆ.ಶೂನ್ಯ ಮತ್ತು 50 ರ ನಡುವಿನ ಅನ್ನು ಉತ್ತಮ, 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ತುಂಬಾ ಕಳಪೆೞ ಮತ್ತು 401 ರಿಂದ 500 ತೀವ್ರ ಎಂದು ಪರಿಗಣಿಸಲಾಗುತ್ತದೆ
