ಪಣಜಿ, ಡಿ.7- ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕನಿಷ್ಠ 100 ಜನರು ನೃತ್ಯ ಮಹಡಿಯಲ್ಲಿದ್ದರು ಮತ್ತು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರಲ್ಲಿ ಕೆಲವರು ಕೆಳಗಡೆಗೆ ಇದ್ದ ಅಡುಗೆಮನೆಗೆ ಓಡಿಹೋಗಿ ಅಲ್ಲಿ ಸಿಬ್ಬಂದಿಯೊಂದಿಗೆ ಸಿಕ್ಕಿಹಾಕಿಕೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಪ್ರವಾಸಿಗರು ನೃತ್ಯ ಮಾಡುತ್ತಿದ್ದ ಕ್ಲಬ್‌ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬೆಂಕಿ ಜ್ವಾಲೆ ಕಾಣುತ್ತಿದ್ದಂತೆ ಗದ್ದಲ ಉಂಟಾಯಿತು. ನಾವು ಕ್ಲಬ್‌ನಿಂದ ಹೊರಗೆ ಓಡಿಹೋದಾಗ ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದೆವು ಎಂದು ಹೈದರಾಬಾದ್‌ನ ಪ್ರವಾಸಿ ಫಾತಿಮಾ ಶೇಖ್ ಮಾಧ್ಯಮಕ್ಕೆ ತಿಳಿಸಿದರು.ವಾರಾಂತ್ಯವಾಗಿದ್ದರಿಂದ ನೈಟ್‌ಕ್ಲಬ್ ಕಿಕ್ಕಿರಿದು ತುಂಬಿತ್ತು ಮತ್ತು ಕನಿಷ್ಠ 100 ಜನರು ನೃತ್ಯ ಮಹಡಿಯಲ್ಲಿದ್ದರು ಎಂದು ಅವರು ಹೇಳಿದರು.
ಬೆಂಕಿ ಹೊತ್ತಿಕೊಂಡ ನಂತರ, ಕೆಲವು ಪ್ರವಾಸಿಗರು ಕೆಳಗೆ ಓಡಲು ಪ್ರಾರಂಭಿಸಿದರು ಮತ್ತು ಗಲಿಬಿಲಿಯಲ್ಲಿ, ನೆಲ ಮಹಡಿಯಲ್ಲಿರುವ ಅಡುಗೆಮನೆಗೆ ಹೋದರು ಎಂದು ಶೇಖ್ ಹೇಳಿದರು. ಅವರು (ಪ್ರವಾಸಿಗರು) ಇತರ ಸಿಬ್ಬಂದಿಯೊಂದಿಗೆ ಅಲ್ಲಿ ಸಿಕ್ಕಿಹಾಕಿಕೊಂಡರು. ಅನೇಕರು ಕ್ಲಬ್‌ನಿಂದ ಹೊರಗೆ ಓಡಿಹೋಗುವಲ್ಲಿ ಯಶಸ್ವಿಯಾದರು ಎಂದು ಅವರು ವಿವರಿದರು. ತಾಳೆ ಎಲೆಗಳಿಂದ ಮಾಡಲ್ಪಟ್ಟ ತಾತ್ಕಾಲಿಕ ನಿರ್ಮಾಣವಿತ್ತು, ಅದು ಸುಲಭವಾಗಿ ಬೆಂಕಿ ಹೊತ್ತಿಕೊಲು ಸಾಧ್ಯವಾಗಿದೆ. ನೈಟ್‌ಕ್ಲಬ್ ಅರ್ಪೋರಾ ನದಿಯ ಹಿನ್ನೀರಿನಲ್ಲಿದೆ ಮತ್ತು ಕಿರಿದಾದ ಪ್ರವೇಶ ಮತ್ತು ನಿರ್ಗಮನ ಮಾರ್ಗವನ್ನು ಹೊಂದಿದೆ.
ಕಿರಿದಾದ ಲೇನ್‌ಗಳ ಕಾರಣ ಸುಮಾರು 400 ಮೀಟರ್ ದೂರದಲ್ಲಿ ಆಗ್ನಿಶಾಮಕ ಟ್ಯಾಂಕರ್ ವಾಹನ ನಿಲ್ಲಿಸಬೇಕಾಗಿ ಬಂತು. ಇದರಿಂದ ಬೆಂಕಿಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿತ್ತು .ನೆಲ ಮಹಡಿಯಲ್ಲಿ ಸಿಲುಕಿಕೊಂಡಿದ್ದರಿಂದ ಹೆಚ್ಚಿನ ಸಾವುಗಳು ಉಸಿರುಗಟ್ಟುವಿಕೆಯಿಂದ ಸಂಭವಿಸಿವೆ ಎಂದು ಅವರು ಹೇಳಿದರು.
ಅರ್ಪೋರಾ-ನಾಗೋವಾ ಪಂಚಾಯತ್ ಅಧ್ಯಕ್ಷ ರೋಶನ್ ರೆಡ್ಕರ್ ಮತ್ತು ಸೌರವ್ ಲುಥ್ರಾ ಈ ಕ್ಲಬ್ ನಡೆಸುತ್ತಿದ್ದರು. ಅವರು ತಮ ಪಾಲುದಾರರೊಂದಿಗೆ ವಿವಾದ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಆವರಣವನ್ನು ಪರಿಶೀಲಿಸಿದ್ದೇವೆ ಮತ್ತು ಕ್ಲಬ್ ನಿರ್ಮಿಸಲು ಅವರಿಗೆ ಅನುಮತಿ ಇಲ್ಲ ಎಂದು ಕಂಡುಬಂದಿದೆ ಎಂದು ಅವರು ನುಡಿದರು. ಇದನ್ನು ಕೆಡವಲು ನೋಟಿಸ್ ನೀಡಲಾಗಿತ್ತು. ಆದರೆ ಪಂಚಾಯತ್ ನಿರ್ದೇಶನಾಲಯದ ಅಧಿಕಾರಿಗಳು ಅದನ್ನು ತಡೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ.ಆವರಣದ ಮೂಲ ಮಾಲೀಕರು ಲುಥ್ರಾ ಅವರಿಗೆ ಸ್ಥಳವನ್ನು ಸಬ್‌ಲೀಸ್ ಮಾಡಿದ್ದರು ಎಂದು ಅವರು ತಿಳಿಸಿದರು.
