ಚೈಬಾಸಾ, ಜ.6- ಕಾಡಾನೆಯೊಂದು ದಿಢೀರ್ ದಾಳಿ ನಡೆಸಿದ ಪರಿಣಾಮ ತಂದೆ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾಹಕ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಕಾಡಿನೊಳಗಿನ ಗೋಯಿಲ್ ಕೆರಾಬ್ಲಾಕ್‌ನಲ್ಲಿ ಮರದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬದ ಮೇಲೆ ತಡರಾತ್ರಿ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ತಂದೆ ಕುಂದ್ರಾ ಬಹಂಡಾ, ಮಕ್ಕಳಾದಕೊಡಮಾ ಬೊಹಂಡಾ ಮತ್ತು ಸಮು ಬಹಂಡಾ ಎಂದು ಗುರುತಿಸಲಾಗಿದೆ.ಮಕ್ಕಳ ತಾಯಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಗಿದ್ದ ವೇಲೆ ಆನೆ ದಾಳಿಯಿಂದ ವಿಚಲಿತರಾಗಿ ಪಾರಾಗಲು ಪ್ರಯತ್ನಿಸುವ ವೇಳೆಯಲ್ಲೇ ಕಾಲಿನಿಂದ ತುಳಿದು ಹಾಕಿದೆ.ಹೊರಬರಲಾಗದೆ ತಂದೆ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಅರಣ್ಯ ರಕ್ಷಕ ನಂದ್ರಾಮ್ ಹೇಳಿದರು.
ಘಟನೆಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಜೀವನ್ಮರಣ ಹೋರಾಟ ನಡೆಸುತ್ತಿರುವ ಇನ್ನೊಬ್ಬ ಬಾಲಕಿಯನ್ನು ರಕ್ಷಿಸಿ ಆರಂಭದಲ್ಲಿ ಗೋಯಿಲ್‌ಕೆರಾದಲ್ಲಿ ಪ್ರಥಮ ಚಿಕಿತ್ಸೆ ನೀಡಿನಂತರ ಉತ್ತಮ ಚಿಕಿತ್ಸೆಗಾಗಿ ರೂರ್ಕೆಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಕಳೆದ ಎರಡು ವಾರಗಳಲ್ಲಿ ಕಾಡು ಆನೆ ದಾಳಿಗೆ ಈ ಪ್ರದೇಶದಲ್ಲಿ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ ಪ್ರಸ್ತುತ ಇಲ್ಲಿ ಭೀತಿ ಆವರಿಸಿದೆ.
