Sunday, December 21, 2025
Homeರಾಷ್ಟ್ರೀಯಈ ಬಾರಿ ಭಾನುವಾರದಂದು ಕೇಂದ್ರ ಬಜೆಟ್‌ ಮಂಡನೆ, ಹೊಸ ದಾಖಲೆಗೆ ಸಜ್ಜಾದ ನಿರ್ಮಲಾ ಸೀತಾರಾಮನ್

ಈ ಬಾರಿ ಭಾನುವಾರದಂದು ಕೇಂದ್ರ ಬಜೆಟ್‌ ಮಂಡನೆ, ಹೊಸ ದಾಖಲೆಗೆ ಸಜ್ಜಾದ ನಿರ್ಮಲಾ ಸೀತಾರಾಮನ್

Finance minister Nirmala Sitharaman likely to present Union Budget on a Sunday

ನವದೆಹಲಿ,ಡಿ.21- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ ಡಿಎ ಸರ್ಕಾರದ ಬಹುನಿರೀಕ್ಷಿತ 2026-27ನೇ ಸಾಲಿನ ಬಜೆಟ್‌ ಈ ಬಾರಿ ಭಾನುವಾರವೇ ಮಂಡನೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಭಾನುವಾರ ಸರ್ಕಾರಿ ರಜೆ. ಅಂದು ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ.

ಆದರೆ ನಿಗದಿತ ದಿನಾಂಕದಂದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಬಜೆಟ್‌ ಮಂಡನೆ ಮಾಡಲು ಮುಂದಾಗಿದ್ದಾರೆ.ಹಾಗೊಂದು ವೇಳೆ ತಮ ತೀರ್ಮಾನದಂತೆ ನಡೆದುಕೊಂಡರೆ, ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಭಾನುವಾರವೇ ಬಜೆಟ್‌ ಮಂಡನೆ ಮಾಡಿದ ದಾಖಲೆಯನ್ನು ನಿರ್ಮಿಸಲಿದೆ. ಏಕೆಂದರೆ ಇದುವರೆಗೂ ಭಾನುವಾರ ಬಜೆಟ್‌ ಮಂಡನೆ ಮಾಡಿದ ನಿದರ್ಶನಗಳಿಲ್ಲ.

ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಬಾಕಿ ಇದ್ದರೂ, ಸರ್ಕಾರ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. 2017ರಿಂದ ಫೆಬ್ರವರಿ 1ರಂದು ಬಜೆಟ್‌ ಅನ್ನು ಮಂಡಿಸಲಾಗುತ್ತಿದೆ. ಅದಕ್ಕೂ ಮೊದಲು ಜನವರಿ 31ರಂದು ಬಜೆಟ್‌ ಅನ್ನು ಮಂಡಿಸಲಾಗುತ್ತಿತ್ತು. ಸರ್ಕಾರವು ಈ ಸಂಪ್ರದಾಯವನ್ನು ಕೈಬಿಡುವ ಸಾಧ್ಯತೆಯಿಲ್ಲ ಎಂದು ರಿಜಿಜು ತಿಳಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಹಿಂದೆ ಹಲವಾರು ಶನಿವಾರಗಳಂದು ಸಂಸತ್ತನ್ನು ಕರೆಯಲಾಗಿದ್ದರೂ, ಹಿಂದಿನ ಬಜೆಟ್‌ ಅನ್ನು ಭಾನುವಾರದಂದು ಮಂಡಿಸಿದ ಕೆಲವು ನಿದರ್ಶನಗಳಿವೆ. 1999 ರಲ್ಲಿ, ಆಗಿನ ಹಣಕಾಸು ಸಚಿವ ಯಶವಂತ್‌ ಸಿನ್ಹಾ ಫೆಬ್ರವರಿ 28 ರಂದು ಬಜೆಟ್‌ ಮಂಡಿಸಿದ್ದರು. ಅದು ಭಾನುವಾರವಾಗಿತ್ತು.

2001, 2004, 2015 ಮತ್ತು 2016 ವರ್ಷಗಳಲ್ಲಿ ಸಂಸತ್ತು ಶನಿವಾರದಂದು ಸಭೆ ಸೇರಿದೆ. 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಬಜೆಟ್‌ ಮಂಡನೆ ಪ್ರಕ್ರಿಯೆಯಲ್ಲಿ ಸುಧಾರಣೆಯನ್ನು ಪರಿಚಿಸಿದ್ದರು. ರೈಲ್ವೆ ಬಜೆಟ್‌ ಅನ್ನು ಕೈಬಿಟ್ಟು ಬಜೆಟ್‌ ದಿನಾಂಕವನ್ನು ಫೆಬ್ರವರಿ 1ಕ್ಕೆ ಬದಲಾಯಿಸಲಾಯಿತು.

RELATED ARTICLES

Latest News