ಮುಂಬೈ, ಜ.8- ಸತತ ಮೂರನೇ ದಿನವೂ ಮುಂಬೈನ ಷೇರುಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಷೇರು ಸೂಚ್ಯಂಕ ಭಾರೀ ಇಳಿಕೆ ಕಂಡಿದೆ. ಭಾರತೀಯ ಷೇರು ಸೂಚ್ಯಂಕಗಳು ವಾರದ ಆರಂಭದಿಂದಲೂ ತೀವ್ರ ಒತ್ತಡಕ್ಕೆ ಸಿಲುಕಿದ್ದು, ಸತತ 3 ದಿನಗಳಿಂದ ಇಳಿಕೆ ಹಾದಿ ಹಿಡಿದಿದ್ದು, ಇದರಿಂದಾಗಿ ಹೂಡಿಕೆದಾರರು ಆತಂಕಗೊಂಡಿದ್ದಾರೆ.
ಅಮೆರಿಕಾದ ಸುಂಕ ಹೆಚ್ಚಳ ಆತಂಕ, ವಿದೇಶಿ ನಿ ಜಾಗತಿಕ ವಿದ್ಯಮಾನಗಳಿಂದ ಷೇರುಪೇಟೆಯಲ್ಲಿನ ನಿಫ್ಟಿ ಮತ್ತು ಸೆನೆಕ್ಸ್ ಅಂಕಗಳು ಸಾಕಷ್ಟು ವ್ಯತ್ಯಾಸಗೊಂಡಿವೆ.
ಇಂದು ಬೆಳಗಿನ ವಹಿವಾಟಿನಲ್ಲಿ ಸಂಚಲನ ಹೆಚ್ಚಾಗಿದ್ದು, ಮಧ್ಯಾಹ್ನ 12.10 ವೇಳೆಗೆ ಸೆನ್ಸೆಕ್್ಸ ಶೆ.0.74ರಷ್ಟು ಕುಸಿದು,629.24 ಮುಟ್ಟಿದರೆ, ನಿಫ್ಟಿ ಕೂಡ 225ನಷ್ಟು ಅಂಕಗಳು ಕುಸಿದು 25,919.95ಗೆ ಮುಟ್ಟಿತ್ತು.
ಸಂಜೆ ವೇಳೆಗೆ ಮಾರುಕಟ್ಟೆ ಒತ್ತಡವನ್ನು ಸಹಿಸಿಕೊಳ್ಳುವ ಲಕ್ಷಣಗಳು ಇದ್ದರೂ ಕೂಡ ಹಲವಾರು ಷೇರುಗಳು ನಷ್ಟ ಅನುಭವಿಸಿವೆ. ಪ್ರಮುಖವಾಗಿ ವಿದೇಶಿ ಕಂಪನಿಗಳು ಸಾಕಷ್ಟು ಲಾಭಗಳಿಸಿರುವುದು ವಿಶೇಷ. ಭಾರತದ ಹಿಂದೂಸ್ಥಾನ್ ಜಿಂಕ್, ಜಿಂದಾಲ್ ಸ್ಟೀಲ್,ಇಂಡಿಯನ್ ಬ್ಯಾಂಕ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಐಓಸಿ, ವೇದಾಂತ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಷೇರುಗಳು ಕುಸಿತಕಂಡಿವೆ.
ಇದರ ನಡುವೆ ಸೋಲಾರ್ ಇಂಡಸ್ಟ್ರೀಸ್ಇಂಡಿಯಾ, ಇಂಡಸ್ ಟವರ್, ಎಸ್ಬಿಐ ಲೈ್ ಇನ್ಶ್ಯ್ಸೂರೆನ್್ಸ, ಐಸಿಐಸಿಐ ಬ್ಯಾಂಕ್, ಭಾರತ ಓಲ್ಡಿಂಗ್್ಸ, ಬಿಇಎಲ್ ಸೇರಿದಂತೆ ಹಲವು ಷೇರುಗಳು ಏರಿಕೆ ದಾಖಲಿಸಿವೆ.
