ಮಥುರಾ,ಡಿ.16– ಇಲ್ಲಿನ ಯಮುನಾ ಎಕ್ಸ್ ಪ್ರೆಸ್ವೇಯಲ್ಲಿ ಇಂದು ಮುಂಜಾನೆ ವಾಹನಗಳ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 24 ಕ್ಕಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಚಾನೆ 4.30 ರ ಸುಮಾರಿಗೆ ದಟ್ಟವಾದ ಮಂಜಿನಲ್ಲಿ ಕನಿಷ್ಠ ಏಳು ಬಸ್ಗಳು ಮತ್ತು ಹಲವಾರು ಸಣ್ಣ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಲದೇವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಯಮುನಾ ಎಕ್್ಸಪ್ರೆಸ್ವೇಯ ಆಗ್ರಾದಿಂದ ನೋಯ್ಡಾಕ್ಕೆ ಹೋಗುವ ಬದಿಯಲ್ಲಿ ಕಡಿಮೆ ಗೋಚರತೆಯಿಂದಾಗಿ ವಾಹನಗಳು ಡಿಕ್ಕಿ ಹೊಡೆದವು. ಇದರಲ್ಲಿ ಕೆಲವು ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮಥುರಾ ಜಿಲ್ಲಾ ಎಸ್ಎಸ್ಪಿ ಶ್ಲೋಕ್ ಕುಮಾರ್ ಹೇಳಿದರು.
ಸ್ಥಳದಿಂದ ಬಂದ ದೃಶ್ಯಗಳಲ್ಲಿ ಬೆಂಕಿ ಹೊತ್ತಿಕೊಂಡ ಬಸ್ಗಳ ಸುಟ್ಟ ಅವಶೇಷಗಳು ಕಂಡುಬಂದಿವೆ. ಅಪಗಾತಗೊಂಡ ವಾಹನವನ್ನುರಸ್ತೆಯಿಂದ ತೆಗೆದುಹಾಕಲು ಕ್ರೇನ್ಗಳನ್ನು ಬಳಸಲಾಗಿದೆ .ಕೆಲ ಪ್ರಯಾಣಿಕರನ್ನು ಸರ್ಕಾರಿ ವಾಹನಗಳಲ್ಲಿ ಅವರವರ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಅಪಖಾತದಿಂದ ವಾಹಮ ಸಂಚಾರಕ್ಕೆ ಕೆಲ ಸಮಯ ನಿರ್ಬಂಧಿಸಲ್ಪಟ್ಟಿರುವುದರಿಂದ, ವಾಹನ ಸಾಮಚಾರಕ್ಕೆ ಮಾರ್ಗ ಬದಲಾವಣೆಗಳನ್ನುಮಾಡಲಾಗುತ್ತು ಬೆಳಿಗ್ಗೆ 10 ಗಂಟೆ ವೇಳೆಗೆ ಸಹಜ ಸ್ಥಿತಿಗೆ ತರಲಾಗಿದೆ ಎಂದು ಅವರು ಹೇಳಿದರು.
