ನವದೆಹಲಿ, ಜ. 11- ಭಾರತದ ಮೇಲೆ ನಂಬಿಕೆ ಇಡಿ ಇದು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್್ಡ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಕಾರ್ಯರೂಪಕ್ಕೆ ಬರಲು ವಿಫಲವಾಗಿದೆ ಎಂಬ ಊಹಾಪೋಹಗಳನ್ನು ವಿದೇಶಾಂಗ ಸಚಿವಾಲಯ ದೃಢವಾಗಿ ತಿರಸ್ಕರಿಸಿದ ಒಂದು ದಿನದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತದ ಮೇಲೆ ನಂಬಿಕೆ ಇಡುವಂತೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು. ವಾಷಿಂಗ್ಟನ್ ಇತರ ದೇಶಗಳೊಂದಿಗೆ ಮುಂದುವರಿಯುತ್ತಿರುವಾಗ ಭಾರತದೊಂದಿಗಿನ ಮಾತುಕತೆಗಳು ವಿಫಲವಾಗಿವೆ ಎಂಬ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರ ಹೇಳಿಕೆಯ ಕುರಿತಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಗೋಯಲ್ ಅವರು ನೀವು ನಿಮ್ಮ ದೇಶವನ್ನು ಹಾಗೂ ಮಾತೃಭೂಮಿಯನ್ನು ನಂಬಿರಿ, ವಿದೇಶಿ ಹೇಳಿಕೆಗಳನ್ನಲ್ಲ ಎಂದು ಹೇಳಿದರು.
