Sunday, December 14, 2025
Homeರಾಷ್ಟ್ರೀಯದೀದಿ ಬಂಧನಕ್ಕೆ ಹಿಮಂತ ಬಿಸ್ವಾ ಶರ್ಮಾ ಆಗ್ರಹ

ದೀದಿ ಬಂಧನಕ್ಕೆ ಹಿಮಂತ ಬಿಸ್ವಾ ಶರ್ಮಾ ಆಗ್ರಹ

Himanta Biswa Sharma demands Didi's arrest

ಕೋಲ್ಕತ್ತಾ, ಡಿ.14- ಫುಟ್ಬಾಲ್‌ ಐಕಾನ್‌ ಲಿಯೊನೆಲ್‌ ಮೆಸ್ಸಿ ಅವರ ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದು, ಘಟನೆಗೆ ಕಾರಣರಾದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕ್ರೀಡಾಕೂಟವನ್ನು ಹಾಳುಮಾಡಲು ಬೇರೂರಿರುವ ವಿಐಪಿ ಸಂಸ್ಕೃತಿಯೇ ಕಾರಣ ಎಂದು ಶರ್ಮಾ ಆರೋಪಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಮೆಸ್ಸಿಯ ಗೋಟ್‌ ಟೂರ್‌ 2025 ಕಾರ್ಯಕ್ರಮದ ಅವ್ಯವಸ್ಥೆ ಉಲ್ಲೇಖಿಸಿದ ಶರ್ಮಾ, ಹೊಣೆಗಾರಿಕೆ ಮೇಲಿನಿಂದ ಪ್ರಾರಂಭವಾಗಬೇಕು. ರಾಜ್ಯದ ಗೃಹ ಸಚಿವರು (ಸಿಎಂ ಮಮತಾ ಬ್ಯಾನರ್ಜಿ ಗೃಹ ಸಚಿವರೂ ಹೌದು) ಮತ್ತು ಕೋಲ್ಕತ್ತಾ ಪೊಲೀಸ್‌‍ ಆಯುಕ್ತರನ್ನು ಬಂಧಿಸಬೇಕಿತ್ತು. ಆದರೆ, ಅವರು ಕಾರ್ಯಕ್ರಮ ಆಯೋಜಕರ ಬಂಧನವನ್ನು ಸಮರ್ಥಿಸುತ್ತಿಲ್ಲ. ಮೊದಲ ಜವಾಬ್ದಾರಿ ರಾಜ್ಯದ ಗೃಹ ಸಚಿವರು ಮತ್ತು ಪೊಲೀಸ್‌‍ ಆಯುಕ್ತರು ಹೊರಬೇಕು ಎಂದು ಪ್ರತಿಪಾದಿಸಿದ್ದಾರೆ.

ಈ ಘಟನೆಯು ರಾಜ್ಯ ನಾಯಕತ್ವವು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಬೇಕು. ಮೆಸ್ಸಿ ಇಡೀ ಜಗತ್ತಿಗೆ ಆದರ್ಶ. ಮಮತಾ ಬ್ಯಾನರ್ಜಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಂಗಾಳದಲ್ಲಿ ಪ್ರತಿದಿನ ಮುಗ್ಧ ಜನರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ಕಳವಳಕಾರಿ ವಿಷಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News