ಲಖ್ನೋ,ಜ.12- ಮೊಟ್ಟೆ ಕರಿ ಮಾಡಿಕೊಡದ ಹೆಂಡ್ತಿ ವರ್ತನೆಗೆ ಬೇಸತ್ತು ತಾನೇ ಮೊಟ್ಟ ಫ್ರೈ ತಯಾರಿಸಿದ್ದಕ್ಕೆ ಕುಪಿತಗೊಂಡ ಪತ್ನಿ ಬೀದಿಗಿಳಿದು ಜಗಳವಾಡಿದ್ದು, ನೊಂದ ಪತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.
ಶಾಂತಿನಗರ ಪ್ರದೇಶದ ನಿವಾಸಿ ಶುಭಂ(28) ಆತಹತ್ಯೆ ಮಾಡಿಕೊಂಡಿರುವ ಪತಿ. ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಎಂದಿನಂತೆ ಕೆಲಸದಿಂದ ಹಿಂದಿರುಗಿದ ಶುಭಂ ಮನೆಗೆ ಚೌಮೈನ್( ನ್ಯೂಡಲ್್ಸ ಮಾದರಿಯ ಆಹಾರ) ತಂದಿದ್ದು, ಹೆಂಡತಿಗೆ ತಿನ್ನಲು ಹೇಳಿದ್ದ. ಜೊತೆಗೆ ಮೊಟ್ಟೆ ಪಲ್ಯ ಮಾಡಿಕೊಡುವಂತೆ ಕೇಳಿದ್ದು, ಪತ್ನಿ ಮುನ್ನಾದೇವಿ ಇದಕ್ಕೆ ನಿರಾಕರಿಸಿದ್ದರಿಂದ ತಾನೇ ಮೊಟ್ಟಿ ಕರಿ ತಯಾರಿಸಿದ್ದ. ಬಳಿಕ ಇಬ್ಬರು ನಡುವೆ ಜಗಳ ನಡೆದಿದೆ.
ಇಬ್ಬರಲ್ಲಿ ಭಿನ್ನಾಭಿಪ್ರಾಯ ಉಲ್ಬಣಗೊಂಡು ತೀವ್ರ ವಾಗ್ವಾದಕ್ಕಿಳಿದ ಹೆಂಡತಿ ಬೀದಿಗಿಳಿದು ಏರುಧ್ವನಿಯಲ್ಲಿ ಜಗಳವಾಡಿದ್ದರಿಂದ ತನ್ನ ಮಗ ಶುಭಂ ನೊಂದು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಮೃತನ ತಾಯಿ ಮುನ್ನಾದೇವಿ ಪೊಲೀಸರಿಗೆ ತಿಳಿಸಿದ್ದಾರೆ.
ತನ್ನ ಸೊಸೆ ಆಗಾಗ್ಗೆ ಜಗಳಗಳಕ್ಕೆ ಪ್ರಚೋದಿಸುತ್ತಿದ್ದಾಳೆ. ನನ್ನ ಮಗನಿಗೆ ಕಳೆದ ವರ್ಷ ಏಪ್ರಿಲ್ನಲ್ಲಷ್ಟೇ ಮದುವೆಯಾಗಿತ್ತು. ಇನ್ನೂ ಒಂದು ವರ್ಷ ಕಳೆದಿಲ್ಲ ಎಂದು ತಾಯಿ ನೊಂದು ನುಡಿದಿದ್ದಾರೆ.
ಶುಭಂ ಕೆಲವೊಮೆ ಮದ್ಯ ಸೇವಿಸುತ್ತಿದ್ದರು, ಇದನ್ನು ಅವರ ಪತ್ನಿ ಬಲವಾಗಿ ವಿರೋಧಿಸುತ್ತಿದ್ದರು, ಇದು ಪದೇ ಪದೇ ಘರ್ಷಣೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೊತ್ವಾಲಿ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆತಹತ್ಯೆಗೆ ಮೊದಲು ಕೌಟುಂಬಿಕ ಕಲಹ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಾವು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾವಿಸ್ ಟೌಕ್ ತಿಳಿಸಿದ್ದಾರೆ.
