Monday, January 5, 2026
Homeರಾಷ್ಟ್ರೀಯವೆನೆಜುವೆಲಾಗೆ ಅನಗತ್ಯ ಪ್ರಯಾಣ ಮಾಡದಂತೆ ನಾಗರೀಕರಿಗೆ ಭಾರತ ಸಲಹೆ

ವೆನೆಜುವೆಲಾಗೆ ಅನಗತ್ಯ ಪ್ರಯಾಣ ಮಾಡದಂತೆ ನಾಗರೀಕರಿಗೆ ಭಾರತ ಸಲಹೆ

India asks its citizens to avoid all non-essential travel to Venezuela

ನವದೆಹಲಿ, ಜ. 4- ತೈಲ ಸಮೃದ್ಧ ದೇಶದ ಅಧ್ಯಕ್ಷರನ್ನು ಅಮೆರಿಕ ಸೆರೆಹಿಡಿದ ನಂತರ ಉಂಟಾದ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಭಾರತವು ತನ್ನ ದೇಶದ ನಾಗರೀಕರಿಗೆ ವೆನೆಜುವೆಲಾಗೆ ಅನಗತ್ಯ ಪ್ರಯಾಣ ಮಾಡಬೇಡಿ ಎಂದು ಸಲಹೆ ನೀಡಿದೆ.

ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಜಾಗರೂಕರಾಗಿರಿ. ಅನಗತ್ಯವಾಗಿ ಹೊರಗಡೆ ಓಡಾಡದಂತೆ ವಿದೇಶಾಂಗ ಸಚಿವಾಲಯವು ಮನವಿ ಮಾಡಿಕೊಂಡಿದೆ.
ರಾಜಧಾನಿ ಕ್ಯಾರಕಾಸ್‌‍ ಮೇಲೆ ದಾಳಿ ನಡೆಸಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್‌‍ ಮಡುರೋ ಅವರನ್ನು ಸೆರೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಿಳಿಸಿದ್ದಾರೆ. ಅಮೆರಿಕದ ಈ ಕ್ರಮವು ದಕ್ಷಿಣ ಅಮೆರಿಕಾದ ದೇಶದಲ್ಲಿ ರಾಜಕೀಯ ಅನಿಶ್ಚಿತತೆಯನ್ನು ಹುಟ್ಟುಹಾಕಿದೆ.

ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ಕ್ರಮವನ್ನು ರಷ್ಯಾ ಮತ್ತು ಚೀನಾ ಸೇರಿದಂತೆ ಅನೇಕ ಪ್ರಮುಖ ರಾಷ್ಟ್ರಗಳು ಟೀಕಿಸಿವೆ.ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳು ಆ ದೇಶಕ್ಕೆ ಅನಗತ್ಯ ಪ್ರಯಾಣ ಮಾಡದಂತೆ ಭಾರತದ ವಿದೇಶಾಂಗ ಸಚಿವಾಲಯ ಸೂಚಿಸಿದೆ.

ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಎಚ್ಚರಿಕೆ ವಹಿಸಬೇಕು. ಹೊರಗಡೆ ಹೆಚ್ಚು ಸುತ್ತಾಡಬೇಡಿ. ಕ್ಯಾರಕಾಸ್‌‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ತನ್ನ ಪ್ರಜೆಗಳಿಗೆ ಭಾರತ ಸೂಚಿಸಿದೆ.

ಅಗತ್ಯವಿದ್ದವರು ಭಾರತೀಯರು ರಾಯಭಾರ ಕಚೇರಿಯನ್ನು 58-412-9584288 ದೂರವಾಣಿ ಸಂಖ್ಯೆ (ವಾಟ್ಸಾಪ್‌ ಕರೆಗಳಿಗೂ ಸಹ) ಹಾಗೂ ಇಮೇಲ್‌ ಮೂಲಕ ಸಂಪರ್ಕಿಸಲು ಸಚಿವಾಲಯ ಸಲಹೆ ನೀಡಿದೆ. ವೆನೆಜುವೆಲಾದಲ್ಲಿ ಸುಮಾರು 50 ಅನಿವಾಸಿ ಭಾರತೀಯರು ಮತ್ತು 30 ಭಾರತೀಯ ಮೂಲದ ವ್ಯಕ್ತಿಗಳು ಇದ್ದಾರೆ.

RELATED ARTICLES

Latest News