Monday, January 12, 2026
Homeರಾಷ್ಟ್ರೀಯಕರೂರ್‌ ಕಾಲ್ತುಳಿತ ಪ್ರಕರಣ : ಸಿಬಿಐ ವಿಚಾರಣೆಗೆ ಹಾಜರಾದ ವಿಜಯ್‌

ಕರೂರ್‌ ಕಾಲ್ತುಳಿತ ಪ್ರಕರಣ : ಸಿಬಿಐ ವಿಚಾರಣೆಗೆ ಹಾಜರಾದ ವಿಜಯ್‌

Karur stampede case: Vijay appears before CBI inquiry

ಚೆನ್ನೈ, ಜ. 12 (ಪಿಟಿಐ) ತಮಿಳುನಾಡಿನ ಖ್ಯಾತ ನಟ ಕಮ್‌ ರಾಜಕಾರಣಿ ವಿಜಯ್‌ ಅವರು ಕರೂರ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಎದುರಿಸಿದರು. ಸಿಬಿಐ ವಿಚಾರಣೆಗಾಗಿ ಟಿವಿಕೆ ಮುಖ್ಯಸ್ಥ ವಿಜಯ್‌ ಇಂದು ದೆಹಲಿಗೆ ತೆರಳಿದ್ದಾರೆ ಮತ್ತು ಅವರ ಪಕ್ಷವು ತನ್ನ ಸ್ಥಾಪಕ ನಾಯಕನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರ ರಾಜಧಾನಿಯ ಪೊಲೀಸ್‌‍ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.

ಅವರಿಗೆ ನೀಡಲಾದ ಸಮನ್‌್ಸ ಅನುಸರಿಸಿ, ವಿಜಯ್‌ ಸಿಬಿಐ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ವಿಚಾರಣೆ ಹಾಜರಾದರು.ಟಿವಿಕೆ ನಾಯಕ ಆಧವ್‌ ಅರ್ಜುನ ವಿಜಯ್‌ ಜೊತೆಗಿದ್ದರು.ಜ. 6 ರಂದು, ಕರೂರ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯ ಏಜೆನ್ಸಿ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ವಿಜಯ್‌ ಅವರಿಗೆ ನೋಟಿಸ್‌‍ ಜಾರಿ ಮಾಡಿತ್ತು.

ಈ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನ ಹಲವಾರು ಪದಾಧಿಕಾರಿಗಳನ್ನು ಪ್ರಶ್ನಿಸಿದೆ.ಸುಪ್ರೀಂ ಕೋರ್ಟ್‌ ಆದೇಶದ ನಂತರ ಸಿಬಿಐ ಈ ಪ್ರಕರಣವನ್ನು ಎಸ್‌‍ಐಟಿಯಿಂದ ವಹಿಸಿಕೊಂಡಿದೆ ಮತ್ತು ಸೆಪ್ಟೆಂಬರ್‌ 27, 2025 ರಂದು ತಮಿಳುನಾಡಿನ ಕರೂರಿನಲ್ಲಿ ವಿಜಯ್‌ ಅವರು ಉದ್ದೇಶಿಸಿ ಮಾತನಾಡಿದ ರಾಜಕೀಯ ಸಭೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದ ಪುರಾವೆಗಳನ್ನು ತನಿಖಾ ಸಂಸ್ಥೆ ಸಂಗ್ರಹಿಸುತ್ತಿದೆ. ಈ ಘಟನೆಯಲ್ಲಿ 41 ಜನರು ಸಾವನ್ನಪ್ಪಿದರು ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

RELATED ARTICLES

Latest News